ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ (U19 World Cup 2024) ಗೆಲುವಿನ ಓಟ ಮುಂದುವರಿದಿದೆ. ಲೀಗ್ ಹಂತದಿಂದ ಸೂಪರ್ ಸಿಕ್ಸ್ ಹಂತದವರೆಗೆ ಒಟ್ಟು ಐದು ಪಂದ್ಯಗಳನ್ನು ಆಡಿರುವ ಭಾರತ, ಐದು ತಂಡಗಳನ್ನು ಒಂದರ ಹಿಂದೆ ಒಂದರಂತೆ ಸೋಲಿಸಿ ಇದೀಗ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದವನ್ನು 200 ಕ್ಕೂ ಅಧಿಕ ರನ್‌ಗಳಿಂದ ಮಣಿಸಿದ್ದ ಭಾರತ, ಎರಡನೇ ಸೂಪರ್ ಸಿಕ್ಸ್ ಪಂದ್ಯದಲ್ಲಿ ನೇಪಾಳ ತಂಡವನ್ನು (India U-19 vs Nepal U-19) 100ಕ್ಕೂ ಹೆಚ್ಚು ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಗುಂಪು 1ರಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಸೆಮಿಫೈನಲ್‌ನಲ್ಲಿ ಗ್ರೂಪ್ 2ರಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು (India U-19 vs South Africa U-19) ಎದುರಿಸಲಿದೆ.
ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಅಂಡರ್-19 ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಅದರಂತೆ ಬ್ಯಾಟಿಂಗ್ಗೆ ಇಳಿದ ಭಾರತ ತಂಡ 62 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಸಚಿನ್ ಧಾಸ್ ಮತ್ತು ನಾಯಕ ಸಹರನ್ ಇನಿಂಗ್ಸ್ ಕೈಗೆತ್ತಿಕೊಂಡು ನಾಲ್ಕನೇ ವಿಕೆಟ್‌ಗೆ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದರು. ಸಚಿನ್ 116 ರನ್‌ಗಳ ಇನ್ನಿಂಗ್ಸ್ ಆಡಿದರೆ, ಸಹರಾನ್ ಅವರ ಬ್ಯಾಟಿಂಗ್‌ನಿಂದ 100 ರನ್ ಗಳಿಸಿದರು.
U19 World Cup: ಉದಯ್- ಸಚಿನ್ ಶತಕ; ನೇಪಾಳಕ್ಕೆ ಬೃಹತ್ ಟಾರ್ಗೆಟ್ ನೀಡಿದ ಭಾರತ
ಇನ್ನು ಭಾರತ ನೀಡಿದ 299 ರನ್‌ಗಳ ಗುರಿ ಬೆನ್ನತ್ತಿದ ನೇಪಾಳ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಭಾರತದ ಪರ ಸೌಮ್ಯ ಪಾಂಡೆ 10 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು.
𝗜𝗻𝘁𝗼 𝘁𝗵𝗲 𝘀𝗲𝗺𝗶𝘀! 🥳
The #BoysInBlue continue their winning run in the #U19WorldCup 🙌#TeamIndia complete a 132-run victory over Nepal U19 👏👏
Scorecard ▶️ https://t.co/6Vp3LnoN6N#INDvNEP pic.twitter.com/UeOTFJoOnV
— BCCI (@BCCI) February 2, 2024
ಭಾರತ ತಂಡವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ಸೆಮಿಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಹಾಗೆಯೇ ನಾಲ್ಕನೇ ತಂಡವಾಗಿ ಪಾಕಿಸ್ತಾನದ ಸ್ಥಾನವೂ ಬಹುತೇಕ ಖಚಿತವಾಗಿದೆ. ಭಾರತದ ಗುಂಪಿನಲ್ಲಿರುವ ಪಾಕಿಸ್ತಾನವು ಫೆಬ್ರವರಿ 3 ರಂದು ಬಾಂಗ್ಲಾದೇಶ ವಿರುದ್ಧ ಸೂಪರ್ ಸಿಕ್ಸ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಬೇಕಿದ್ದು, ಅದನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಅಂಡರ್ 19 ವಿಶ್ವಕಪ್ 2024 ರ ಮೊದಲ ಸೆಮಿಫೈನಲ್ ಫೆಬ್ರವರಿ 6 ರಂದು ನಡೆಯಲಿದ್ದು, ಎರಡನೇ ಸೆಮಿಫೈನಲ್ ಫೆಬ್ರವರಿ 8 ರಂದು ನಡೆಯಲಿದೆ.
Published On - 9:56 pm, Fri, 2 February 24