ದಕ್ಷಿಣ ಆಫ್ರಿಕಾದ ಸೆನ್ವೆಸ್ ಪಾರ್ಕ್ನಲ್ಲಿ ನಡೆದ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಸ್ಕಾಟ್ಲೆಂಡ್ (Scotland U-19 vs South Africa U-19) ನಡುವಿನ ಅಂಡರ್-19 ವಿಶ್ವಕಪ್ (U19 World Cup 2024) ಪಂದ್ಯದಲ್ಲಿ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಸ್ಟೀವ್ ಸ್ಟೋಕ್ (Steve Stolk), ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. 17 ವರ್ಷದ ಸ್ಟೀವ್ ಇನ್ನಿಂಗ್ಸ್‌ನ ಮೊದಲ ಮೂರು ಓವರ್‌ಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದು ಅವರ ಸಿಡಿಲಬ್ಬರದ ಬ್ಯಾಟಿಂಗ್ಗೆ ಸಾಕ್ಷಿಯಾಗಿತ್ತು. ಅಷ್ಟೇ ಅಲ್ಲದೆ ಒಂದೇ ಓವರ್ನಲ್ಲಿ ಸತತ ಐದು ಸಿಕ್ಸರ್ ಬಾರಿಸುವ ಮೂಲಕ ಸ್ಟೀವ್ ಸ್ಟೋಕ್, ಸ್ಕಾಟ್ಲೆಂಡ್ ಬೌಲರ್ಗಳ ಬೆವರಿಳಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಜೇಮೀ ಡಂಕ್ 90 ರನ್ ಕಲೆಹಾಕಿದರೆ, 10 ರನ್ಗಳಿಂದ ಶತಕವಂಚಿತರಾದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ಓವನ್ ಗ್ವಿನ್ ಗೌಲ್ಡ್ ಥಾಮಸ್ 97 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ 3 ರನ್ಗಳಿಂದ ಶತಕ ವಂಚಿತರಾದರು. ಈ ಇಬ್ಬರ ಈ ಆಟದಿಂದಾಗಿ ತಂಡ 269 ರನ್ ಕಲೆಹಾಕಿತು.
South Africa went berserk with the bat and chased down Scotland’s total with 23 overs and seven wickets to spare 💥
Match Highlights 🎥 #U19WorldCup pic.twitter.com/JdIqySnBs4
— ICC (@ICC) January 27, 2024
ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ರಿಲೆ ನಾರ್ಟನ್ ಗರಿಷ್ಠ ಮೂರು ವಿಕೆಟ್ ಪಡೆದರು. ತಮ್ಮ ಖೋಟಾದ 9 ಓವರ್ ಬೌಲ್ ಮಾಡಿದ ನಾರ್ಟನ್ 48 ರನ್ ನೀಡಿ 3 ವಿಕೆಟ್ ಪಡೆದರೆ, ಕ್ವೆನಾ ಮಫಕಾ 10 ಓವರ್‌ಗಳಲ್ಲಿ 53 ರನ್ ನೀಡಿ 2 ವಿಕೆಟ್ ಕಬಳಿಸಿದರು. ಸಿಫೊ ಪೊಟ್ಸೆನ್ ಕೂಡ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
269 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಟೀವ್ ಕೇವಲ 37 ಎಸೆತಗಳಲ್ಲಿ 86 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್‌ಗಳು ಸೇರಿದ್ದವು. ಲುವಾನ್-ಡ್ರೆ ಪ್ರಿಟೋರಿಯಸ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಸ್ಟೀಲ್ ಮೊದಲ ವಿಕೆಟ್‌ಗೆ ಕೇವಲ 54 ಎಸೆತಗಳಲ್ಲಿ 114 ರನ್‌ಗಳ ಶತಕದ ಜೊತೆಯಾಟವನ್ನು ಹಂಚಿಕೊಂಡರು.
ಸ್ಫೋಟಕ ಆರಂಭದ ಲಾಭ ಪಡೆದ ಆಫ್ರಿಕಾ ತಂಡದ ಉಳಿದ ಬ್ಯಾಟರ್ಗಳು ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಆರಂಭಿಕ ಸ್ಟೀವ್ರನ್ನು ಹೊರತುಪಡಿಸಿ ದಿವಾನ್ ಮರೈಸ್ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 80 ರನ್ ಹಾಗೂ ಡೇವಿಡ್ ಟೀಗರ್ ಅಜೇಯ 43 ರನ್ ಕೆಲಹಾಕುವ ಮೂಲಕ ಕೇವಲ 27 ಓವರ್ಗಳಲ್ಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ