
ದಕ್ಷಿಣ ಅಫ್ರಿಕಾದಲ್ಲಿ ನಡೆಯುತ್ತಿರುವ ಕಿರಿಯ ವಿಶ್ವಕಪ್‌ನ (ICC U19 World Cup 2024) ಫೈನಲ್ ಪಂದ್ಯಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯವು ಗುರುವಾರ ಅಂದರೆ 8 ಫೆಬ್ರವರಿ 2024 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನವನ್ನು (Australia vs Pakistan) ಎದುರಿಸಲಿದ್ದು, ಫೈನಲ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ತಲುಪಲಿದ್ದು, ಅಲ್ಲಿ ಅಜೇಯ ಟೀಂ ಇಂಡಿಯಾವನ್ನು (Team India) ಎದುರಿಸಿದೆ. ಈ ಎರಡೂ ತಂಡಗಳ ವಿಶ್ವಕಪ್ ಪಾಯಿಂಟ್ ಪಟ್ಟಿಯ ಬಗ್ಗೆ ಮಾತನಾಡುವುದಾದರೆ, ಸೂಪರ್-6 ಗ್ರೂಪ್-1ರ ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನ 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ ತಂಡ ಸೂಪರ್-6 ಗುಂಪು-2ರಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಅಲ್ಲದೆ ಈ ವಿಶ್ವಕಪ್ನಲ್ಲಿ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿರುವುದರಿಂದ ಯಾವ ತಂಡಕ್ಕೆ ವಿಜಯ ಮಾಲೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಟೀಂ ಇಂಡಿಯಾದೊಂದಿಗೆ ಗುಂಪು 1 ರಲ್ಲಿದ್ದ ಪಾಕಿಸ್ತಾನ ಇಡೀ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಇತ್ತ ಆಸ್ಟ್ರೇಲಿಯಾ ಕೂಡ ಒಂದೇ ಒಂದು ಪಂದ್ಯದಲ್ಲೂ ಸೋಲದೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಹೀಗಾಗಿ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಕದನವನ್ನು ನಿರೀಕ್ಷೆಸಬಹುದಾಗಿದೆ.
U19 WC 2024 Final: ಭಾರತ- ಪಾಕ್ ವಿಶ್ವಕಪ್ ಫೈನಲ್ ಫೈಟ್ ನಾಳೆ ನಿರ್ಧಾರ..!
ಅಂಡರ್ 19 ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ಫೆಬ್ರವರಿ 8 ರಂದು ನಡೆಯಲ್ಲಿದೆ.
ಅಂಡರ್ 19 ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ಬೆನೋನಿಯ ವಿಲೋಮೂರ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಅಂಡರ್ 19 ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗುತ್ತದೆ.
ಅಂಡರ್ 19 ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಮೊಬೈಲ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಹ್ಯಾರಿ ಡಿಕ್ಸನ್, ಹರ್ಜಸ್ ಸಿಂಗ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೈಬ್ಜೆನ್ (ನಾಯಕ), ಆಲಿವರ್ ಪೀಕ್, ಲಾಚ್ಲಾನ್ ಐಟ್ಕೆನ್ (ವಿಕೆಟ್ ಕೀಪರ್), ರಾಫ್ ಮ್ಯಾಕ್‌ಮಿಲನ್, ಹರ್ಕಿರತ್ ಬಾಜ್ವಾ, ಟಾಮ್ ಸ್ಟ್ರೇಕರ್, ಮಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್
ಪಾಕಿಸ್ತಾನ ಸಂಭಾವ್ಯ ತಂಡ: ಶಮಿಲ್ ಹುಸೇನ್, ಶಹಜೈಬ್ ಖಾನ್, ಅಜಾನ್ ಅವೈಸ್, ಸಾದ್ ಬೇಗ್ (ನಾಯಕ), ಅಹ್ಮದ್ ಹಸನ್, ಹರೂನ್ ಅರ್ಷದ್, ಅರಾಫತ್ ಮಿನ್ಹಾಸ್, ಉಬೈದ್ ಶಾ, ಮೊಹಮ್ಮದ್ ಜೀಶನ್, ಅಲಿ ಅಸ್ಫಂಡ್, ಅಲಿ ರಜಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ