ಅಭ್ಯಾಸಕ್ಕಾಗಿ 50Km ಪ್ರಯಾಣ, ಕನಸು ನನಸಾದಾಗ ಕೋವಿಡ್: ಭಾರತ ಫೈನಲ್​ಗೇರಲು ಇವರು ಪಟ್ಟ ಶ್ರಮಕ್ಕೆ ನಮ್ಮದೊಂದು ಸಲಾಂ

India U19 Team: ಪ್ರತಿಭಾನ್ವಿತ ಯುವ ಆಟಗಾರರಿಂದ ಕೂಡಿರುವ ಭಾರತ ತಂಡ ಟೂರ್ನಿಯುದ್ದಕ್ಕೂ ಕೋವಿಡ್ ಮಹಾಮಾರಿ ಕಾಡಿತು. ಇದರ ನಡುವೆಯೂ ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಭಾರತ ಅಂಡರ್ – 19 ತಂಡ ಇಂದು ಫೈನಲ್ ತಲುಪಿದೆ ಎಂದರೆ ಅದಕ್ಕೆ ಒಬ್ಬೊಬ್ಬ ಆಟಗಾರನ ಕಠಿಣ ಶ್ರಮವಿದೆ, ಆ ಶ್ರಮದ ಹಿಂದೆ ನೋವಿನ ಕಥೆ ಕೂಡ ಇದೆ.

ಅಭ್ಯಾಸಕ್ಕಾಗಿ 50Km ಪ್ರಯಾಣ, ಕನಸು ನನಸಾದಾಗ ಕೋವಿಡ್: ಭಾರತ ಫೈನಲ್​ಗೇರಲು ಇವರು ಪಟ್ಟ ಶ್ರಮಕ್ಕೆ ನಮ್ಮದೊಂದು ಸಲಾಂ
Shaik Rasheed and Yash Dhull
Follow us
TV9 Web
| Updated By: Vinay Bhat

Updated on: Feb 05, 2022 | 11:46 AM

ಐಸಿಸಿ ಅಂಡರ್ – 19 ವಿಶ್ವಕಪ್​ (ICC Under 19 World Cup 2022) ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎಂಬ ದಾಖಲೆಯನ್ನು ತನ್ನಲ್ಲೇ ಭದ್ರ ಪಡಿಸಿಕೊಳ್ಳಲು ಭಾರತ ಕಿರಿಯರ ತಂಡ ಇಂದು ಮಹತ್ವದ ಅಗ್ನಿ ಪರೀಕ್ಷೆಗೆ ಸಜ್ಜಾಗುತ್ತಿದೆ. ಬಲಿಷ್ಠ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಯಶ್ ಧುಲ್ (Yash Dhull) ಪಡೆ 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ನಡೆದು ಬಂದ ಹಾದಿಯೇ ರೋಚಕ. ಪ್ರತಿಭಾನ್ವಿತ ಯುವ ಆಟಗಾರರಿಂದ ಕೂಡಿರುವ ಭಾರತ ತಂಡ ಟೂರ್ನಿಯುದ್ದಕ್ಕೂ ಕೋವಿಡ್ ಮಹಾಮಾರಿ ಕಾಡಿತು. ಇದರ ನಡುವೆಯೂ ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಏಕದಿನ ವಿಶ್ವಕಪ್ ಟೂರ್ನಿಯ 14 ಆವೃತ್ತಿಗಳಲ್ಲಿ 8ನೇ ಬಾರಿ ಫೈನಲ್ ಪ್ರವೇಶಿಸಿರುವ 4 ಬಾರಿಯ ಚಾಂಪಿಯನ್ ಭಾರತ ತಂಡ, 5ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಭಾರತ ಅಂಡರ್ – 19 ತಂಡ (India Under 19) ಇಂದು ಫೈನಲ್ ತಲುಪಿದೆ ಎಂದರೆ ಅದಕ್ಕೆ ಒಬ್ಬೊಬ್ಬ ಆಟಗಾರನ ಕಠಿಣ ಶ್ರಮವಿದೆ, ಆ ಶ್ರಮದ ಹಿಂದೆ ನೋವಿನ ಕಥೆ ಕೂಡ ಇದೆ.

ಹೌದು, ಭಾರತ ಫೈನಲ್ ತಲುಪಲು ಪ್ರಮುಖ ಕಾರಣವಾಗಿದ್ದು ಸೆಮಿ ಫೈನಲ್​ನಲ್ಲಿ ನೀಡಿದ ಪ್ರದರ್ಶನ. ಇಲ್ಲಿ ಮಿಂಚಿದ್ದು ನಾಯಕ ಯಶ್ ಧುಲ್ ಜೊತೆ ಶೇಕ್ ರಶೀದ್. ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಕದನದಲ್ಲಿ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಾಗ ನಾಯಕನ ಜೊತೆ ಗೆಲ್ಲಲೇ ಬೇಕೆಂದು ಟೊಂಕಕಟ್ಟಿ ನಿಂತಿದ್ದು ಶೇಕ್ ರಶೀದ್. ಯಶ್ ಧುಲ್ ಹಾಗೂ ಶೇಖ್ ರಶೀದ್ ಅದ್ಭುತ ಜೊತೆಯಾಟ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರುಗಳನ್ನು ಅತ್ಯುತ್ತಮವಾಗಿ ಎದುರಿಸಿದ ಈ ಜೋಡಿ ರನ್​ ಗತಿಯನ್ನು ಹೆಚ್ಚಿಸುತ್ತಾ ಸಾಗಿದರು. ಈ ಜೋಡಿಯ ಜೊತೆಯಾಟವನ್ನು ಮುರಿಯಲು ಆಸ್ಟ್ರೇಲಿಯಾ ಕಿರಿಯರು ಸಾಕಷ್ಟು ಬೆವರಿಸಬೇಕಾಯಿತು. 3ನೇ ವಿಕೆಟ್​ಗೆ 204 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಯಶ್ ಧುಲ್ 110 ಬಾರಿಸಿ ಮಿಂಚಿದರು. ಶೇಖ್ ರಶೀದ್ ಉಪಯುಕ್ತವಾದ 94 ರನ್ ಬಾರಿಸಿ 6 ರನ್​ಗಳಿಂದ ಶತಕ ವಂಚಿತರಾದರು.

ಇಲ್ಲಿ ಅಚ್ಚರಿ ವಿಚಾರ ಎಂದರೆ ಇದೇ ಯಶ್ ಧುಲ್ ಹಾಗೂ ಶೇಖ್ ರಶೀದ್ ವಾರಗಳ ಹಿಂದೆಯಷ್ಟೇ ಕೋವಿಡ್ ಕಾರಣ ಐಸೋಲೇಟ್ ಆಗಿದ್ದರು. ಟೂರ್ನಿಯ ಮಧ್ಯೆದಲ್ಲೇ ಕೊರೊನಾ ಸೋಂಕಿಗೆ ಒಳಗಾಗಿದ್ದ ಈ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಇದರಿಂದಾಗಿ ಸಂಪೂರ್ಣ ಅಭ್ಯಾಸದಿಂದ ದೂರವಾಗಿದ್ದರು. ಅಷ್ಟೇ ಅಲ್ಲದೆ ಲೀಗ್​ ಹಂತದ ಎರಡು ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಫೈನಲ್ ತಲುಪಬೇಕೆಂದು ಸೆಮೀಸ್ ಹೊತ್ತಿಗೆ ಗುಣಮುಖರಾಗಿ ಯಶ್ ಧುಲ್ ಹಾಗೂ ಶೇಖ್ ರಶೀದ್ ಕೊರೋನಾ ಗೆದ್ದು ಪಂದ್ಯವನ್ನೂ ಗೆಲ್ಲಿಸಿ ಇಂದು ಫೈನಲ್​ಗೆ ಸಜ್ಜಾಗುತ್ತಿದ್ದಾರೆ.

ಕ್ರಿಕೆಟ್ ಜಗತ್ತಿನಲ್ಲಿ ಇಂದು ಶೇಕ್ ರಶೀದ್ ಎಂಬ ಹೆಸರು ಇಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯಲು ಇವರು ಪಟ್ಟ ಕಷ್ಟವೇ ಕಾರಣ ಎಂದರೆ ತಪ್ಪಾಗಲಾರದು. ಇವರು ನಡೆದು ಬಂದ ಹಾದಿ ಮುಳ್ಳಿನದ್ದಾಗಿತ್ತು. ಈ ಹಾದಿಯಲ್ಲಿ ಇವರ ಜೊತೆ ಸಾಗಿದ್ದು ಇವರ ತಂದೆ ಶೇಖ್ ಬಲಿಷಾ. ಇವರು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗನ ಕ್ರಿಕೆಟ್ ಅಭ್ಯಾಸಕ್ಕೆಂದು ಸಹಾಯ ಮಾಡಲು ಇವರು ಎರಡು ಬಾರಿ ಕೆಲಸ ಕೂಡ ಕಳೆದುಕೊಂಡಿದ್ದರು. ಕ್ರಿಕೆಟ್ ಅಭ್ಯಾಸಕ್ಕೆಂದು ಮೈದಾನದಕ್ಕೆ ತೆರಳಬೇಕಾದರೆ 50 ಕಿ. ಮೀ ಪ್ರಯಾಣ ಬೆಳೆಸಬೇಕಿತ್ತು. ರಶೀದ್ ಅವರ ಕ್ರಿಕೆಟ್ ಕನಸನ್ನು ನನಸು ಮಾಡಲು ತಂದೆಗೆ ಆರ್ಥಿಕ ಸವಾಲುಗಳಿದ್ದವು. ಬಲಿಷಾ ಅವರ ಹೈದರಾಬಾದ್ ಮೂಲದ ಸ್ನೇಹಿತರೊಬ್ಬರು ರಶೀದ್ ಪ್ರತಿಭೆಯನ್ನು ಗಮನಿಸಿ ಸಹಾಯಕ್ಕೆ ಮುಂದೆಬಂದರು.

ಈ ಬಗ್ಗೆ ಬಲಿಷಾ ಹೇಳಿದ್ದೇನೆಂದರೆ, “ನನ್ನ ಸ್ನೇಹಿತ ಇಂದ್ರ ಸೇನಾ ರೆಡ್ಡಿ ದೊಡ್ಡ ಮನಸ್ಸು ಮಾಡಿದರು. ಅವರು ಹೈದರಾಬಾದ್‌ನ ವೈದ್ಯರಾಗಿದ್ದಾರೆ ಮತ್ತು ಅವರು ಸಹಾಯಕ್ಕೆ ಎಂದಿಗೂ ಹಿಂದೆ ಸರಿಯಲಿಲ್ಲ. ಇದರೊಂದಿಗೆ ಅವರ ಕೋಚ್ ಗುಂಟೂರಿನ ಜೆ. ಕೃಷ್ಣರಾವ್ ರಶೀದ್‌ಗೆ ತರಬೇತಿ ನೀಡಿದ್ದರು,” ಎಂದು ನೆನಪಿಸಿಕೊಂಡಿದ್ದಾರೆ. ರಶೀದ್ ಅವರ ಕೋಚ್ ಮಾತನಾಡಿದ್ದು, “ಅವನು ತೀರಾ ಸಾಮಾನ್ಯ ಕುಟುಂಬದಿಂದ ಬಂದವನು. ಅಂತಹ ನಿಷ್ಠಾವಂತ ತಂದೆಯನ್ನು ನಾನು ನೋಡಿಲ್ಲ. ಮಗನ ಕ್ರಿಕೆಟ್ ಕನಸಿಗಾಗಿ ಅವರು ಎಷ್ಟು ತ್ಯಾಗ ಮಾಡಿದ್ದಾರೆಂದು ನನಗೆ ತಿಳಿದಿದೆ ಎಂದು,” ಕೋಚ್ ಹೇಳಿದ್ದಾರೆ.

ಒಮ್ಮೆ ಕ್ರಿಕೆಟ್ ಲೋಕಕ್ಕೆ ಆಯ್ಕೆಯಾದ ಬಳಿಕ ರಶೀದ್ ಹಿಂತಿರುಗಿ ನೋಡಲೇಯಿಲ್ಲ. ವಿಜಯ್ ಮರ್ಚೆಂಟ್ ಅಂಡರ್-16 ಟ್ರೋಫಿಯಲ್ಲಿ (2018-19), ಅವರು 168.5 ಸರಾಸರಿಯಲ್ಲಿ 674 ರನ್ ಗಳಿಸಿದರು. ಇದರಲ್ಲಿ ಮೂರು ಶತಕಗಳು ಸೇರಿದ್ದವು. ಅವರ ಗರಿಷ್ಠ ಸ್ಕೋರ್ 200. ಈ ಋತುವಿನಲ್ಲಿ ವಿನೂ ಮಂಕಡ್ ಅಂಡರ್-19 ಟ್ರೋಫಿಯಲ್ಲಿ ಅವರು ಆರು ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 376 ರನ್ ಗಳಿಸಿದರು. ಸರಾಸರಿ 75.2 ಆಗಿತ್ತು. ಅವರು ಕೆಲವು ಪಂದ್ಯಗಳಲ್ಲಿ ಭಾರತ ‘ಎ’ ಅಂಡರ್-19 ತಂಡದ ನಾಯಕರೂ ಆಗಿದ್ದರು.

ಈ ಸಂದರ್ಭದಲ್ಲಿ ನಾವು ಅಂಡರ್-19 ತಂಡವನ್ನು ಫೈನಲ್​ವರೆಗೆ ತಲುಪಿಸಿದ ನಾಯಕ ಯಶ್ ಧುಲ್ ಅವರನ್ನು ಮರೆಯಲೇ ಬಾರದು. ಇವರು ತಂಡಕ್ಕೆ ಉತ್ಸಾಹ ತುಂಬಿ, ಆತ್ಮವಿಶ್ವಾಸ ಮೂಡಿಸಿದ ಪರಿ ನಾಯಕನ ಗುಣ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿದೆ. ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ದೆಹಲಿಯ ಯಶ್ ಧುಲ್, 11ನೇ ವರ್ಷಕ್ಕೇ  ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದರು. ಇವರದ್ದುಕೂಡ ತೀರಾ ಬಡತನದ ಕುಟುಂಬ. ಇವರ ತಂದೆ ಆರ್ಮಿಯಲ್ಲಿದ್ದವರು. ಈಗ ಬರುತ್ತಿರುವ ಪೆನ್ಶನ್ ಹಣದಲ್ಲಿ ಮನೆಯನ್ನು ನಡೆಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ತಂಡವು ಆಡಿದ ಐದು ಪಂದ್ಯಗಳಲ್ಲಿ ದೆಹಲಿ ತಂಡಕ್ಕಾಗಿ ಅವರು 75.50 ಸರಾಸರಿಯಲ್ಲಿ ಬರೋಬ್ಬರಿ 302 ರನ್​ಗಳನ್ನು ಗಳಿಸಿದ್ದರು. ಇವರಿಗೆ ಅಂಡರ್ 16, ಅಂಡರ್ 19 ಮತ್ತು ಭಾರತ ಎ ತಂಡದ ಅಂಡರ್ 19ನಲ್ಲಿ ಆಡಿದ ಸಾಕಷ್ಟು ಅನುಭವವ ಕೂಡ ಇದ್ದು ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಎಂದೇ ನಂಬಲಾಗಿದೆ.

PKL 2022: ರಣ ರೋಚಕ ಟೈನಲ್ಲಿ ಅಂತ್ಯಕಂಡ ಬೆಂಗಳೂರು ಬುಲ್ಸ್-ದಬಾಂಗ್ ದಿಲ್ಲಿ ಕಬಡ್ಡಿ ಪಂದ್ಯ

Justin Langer: ಆಸ್ಟ್ರೇಲಿಯಾ ಹೆಡ್ ಕೋಚ್ ಸ್ಥಾನದಿಂದ ದಿಢೀರ್ ಕೆಳಗಿಳಿದ ಲ್ಯಾಂಗರ್: ಅನುಮಾನ ಮೂಡಿಸಿದ ಜಸ್ಟಿನ್ ನಡೆ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್