AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ 12 ಎಸೆತಗಳಲ್ಲಿ 58 ರನ್ ಚಚ್ಚಿದ ರಿಂಕು ಸಿಂಗ್ ತಂಡದ ಬ್ಯಾಟರ್ಸ್; ವಿಡಿಯೋ

UP T20 League: ಯುಪಿ ಟಿ20 ಲೀಗ್‌ನಲ್ಲಿ ಮೀರತ್ ಮಾವೆರಿಕ್ಸ್ ತಂಡ ಕೊನೆಯ ಎರಡು ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ವಿಪ್ರಾಜ್ ನಿಗಮ್ ಅವr‘ರ ಓವರ್​ನಲ್ಲಿ 58 ರನ್ ಗಳಿಸಿತು. ತಂಡದ ಪರ ರಿತುರಾಜ್ ಶರ್ಮಾ ಮತ್ತು ಹೃತಿಕ್ ವ್ಯಾಟ್ಸ್ ಅಬ್ಬರದ ಬ್ಯಾಟಿಂಗ್‌ ಮಾಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕ್ರಮವಾಗಿ 6 ಬೌಂಡರಿಗಳನ್ನು ಬಾರಿಸಿದರು.

ಕೊನೆಯ 12 ಎಸೆತಗಳಲ್ಲಿ 58 ರನ್ ಚಚ್ಚಿದ ರಿಂಕು ಸಿಂಗ್ ತಂಡದ ಬ್ಯಾಟರ್ಸ್; ವಿಡಿಯೋ
Meerut Mavericks
ಪೃಥ್ವಿಶಂಕರ
|

Updated on: Aug 27, 2025 | 10:53 PM

Share

ಯುಪಿ ಟಿ20 ಲೀಗ್‌ನ (UP T20 League) 20 ನೇ ಪಂದ್ಯದಲ್ಲಿ, ಮೀರತ್ ಮಾವೆರಿಕ್ಸ್ ಹಾಗೂ ಲಕ್ನೋ ಫಾಲ್ಕನ್ಸ್ (Meerut Mavericks vs Lucknow Falcons) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೀರತ್ ಮಾವೆರಿಕ್ಸ್ ತಂಡದ ನಾಲ್ವರು ಬ್ಯಾಟ್ಸ್‌ಮನ್​ಗಳು ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅದರಲ್ಲೂ ಐದನೇ ವಿಕೆಟ್​ಗೆ ಜೊತೆಯಾದ ರಿತುರಾಜ್ ಶರ್ಮಾ ಮತ್ತು ಹೃತಿಕ್ ವ್ಯಾಟ್ಸ್ ಕೊನೆಯ 2 ಓವರ್​ಗಳಲ್ಲಿ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಇವರಿಬ್ಬರ ಅಬ್ಬರ ಹೇಗಿತ್ತು ಎಂದರೆ, ಕೊನೆಯ 2 ಓವರ್​ಗಳಲ್ಲಿ ಅಂದರೆ 19 ಮತ್ತು 20ನೇ ಓವರ್​ನಲ್ಲಿ ಇವರಿಬ್ಬರು ಒಟ್ಟಾಗಿ 12 ಸತತ ಎಸೆತಗಳಲ್ಲಿ 12 ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಇವರಿಬ್ಬರೂ ಕೊನೆಯ 2 ಓವರ್​ಗಳಲ್ಲಿ 58 ರನ್ ಕಲೆಹಾಕಿದರು.

ಅಚ್ಚರಿಯ ಸಂಗತಿಯೆಂದರೆ, ಮೀರತ್ ಇನ್ನಿಂಗ್ಸ್​ನ 19ನೇ ಓವರ್ ಬೌಲ್ ಮಾಡಿದ್ದು ಎದುರಾಳಿ ತಂಡದ ನಾಯಕ ಹಾಗೂ ಅನುಭವಿ ಭುವನೇಶ್ವರ್ ಕುಮಾರ್. ಈ ಓವರ್​ನಲ್ಲಿ ರಿತುರಾಜ್ ಸತತ 6 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಕಲೆಹಾಕಿದರೆ, 20 ನೇ ಓವರ್‌ನಲ್ಲಿ, ಹೃತಿಕ್ ವ್ಯಾಟ್ಸ್ ಕೂಡ 6 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೊನೆಯ 2 ಓವರ್​ಗಳಲ್ಲಿ ಇಷ್ಟು ರನ್​ಗಳನ್ನು ಬಿಟ್ಟುಕೊಟ್ಟ ಬೌಲರ್​ಗಳಿಬ್ಬರು ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳ ಪರ ಆಡುತ್ತಿದ್ದಾರೆ.

ಭುವಿಗೆ 6 ಎಸೆತಗಳಲ್ಲಿ 6 ಬೌಂಡರಿ

ವಾಸ್ತವವಾಗಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಭುವನೇಶ್ವರ ಕುಮಾರ್, ಅದ್ಭುತ ಲೈನ್-ಲೆಂತ್‌ಗೆ ಹೆಸರುವಾಸಿ. ಹೊಸ ಚೆಂಡಿನ ಹೊರತಾಗಿ, ಹಳೆಯ ಚೆಂಡಿನಲ್ಲಿಯೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಕೌಶಲ್ಯವನ್ನೂ ಅವರು ಹೊಂದಿದ್ದಾರೆ. ಆದರೆ ಮೀರತ್ ಮಾವೆರಿಕ್ಸ್ ವಿರುದ್ಧದ ಪಂದ್ಯದಲ್ಲಿ ಭುವಿಗೆ ಆ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. 19 ನೇ ಓವರ್ ಬೌಲ್ ಮಾಡಲು ಬಂದ ಭುವನೇಶ್ವರ ಕುಮಾರ್ ಅವರ ಮೊದಲ ಎಸೆತದಲ್ಲೇ ರಿತುರಾಜ್ ಶರ್ಮಾ ಸಿಕ್ಸರ್ ಬಾರಿಸಿದರು. ಇದಾದ ನಂತರ, ಭುವನೇಶ್ವರ್ ಕುಮಾರ್ ವೈಡ್ ಬಾಲ್ ಎಸೆದರು. ನಂತರ ರಿತುರಾಜ್ ಶರ್ಮಾ ಒಂದರ ನಂತರ ಒಂದರಂತೆ ಸತತ 4 ಬೌಂಡರಿಗಳನ್ನು ಬಾರಿಸಿ ಕೊನೆಯ ಎಸೆತದಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭುವನೇಶ್ವರ್ ಅವರ ಓವರ್ ಅನ್ನು ತುಂಬಾ ದುಬಾರಿಯನ್ನಾಗಿ ಮಾಡಿದರು.

29 ರನ್‌ ನೀಡಿದ ವಿಪ್ರಾಜ್

ಭುವನೇಶ್ವರ್ ಕುಮಾರ್ ಬಳಿಕ ಬಂದ ವಿಪ್ರಾಜ್ ನಿಗಮ್ ಕೂಡ 20 ನೇ ಓವರ್​ನಲ್ಲಿ ಬರೋಬ್ಬರಿ 29 ರನ್ ಬಿಟ್ಟುಕೊಟ್ಟರು. ವಾಸ್ತವವಾಗಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದ ವಿಪ್ರಾಜ್ ನಿಗಮ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ದುಬಾರಿಯಾದ ವಿಪ್ರಾಜ್ ಅವರ ಓವರ್‌ನಲ್ಲಿ ಹೃತಿಕ್ 29 ರನ್‌ ಕಲೆಹಾಕಿದರು. ಈ ಓವರ್​ನ ಮೊದಲ ಎರಡು ಎಸೆತಗಳಲ್ಲಿ 2 ಬೌಂಡರಿ ಬಂದರೆ, ಮುಂದಿನ 2 ಎಸೆತಗಳು ಸಿಕ್ಸರ್​ ದಾಟಿದವು. ಮುಂದಿನ ಎಸೆತದಲ್ಲಿ 2 ರನ್ ಬಂದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಂತು.

ಈ ಮೂಲಕ ಮೀರತ್ ಮಾವರಿಕ್ಸ್ 2 ಓವರ್‌ಗಳಲ್ಲಿ 58 ರನ್ ಗಳಿಸಿದ್ದಲ್ಲದೆ, ಕೊನೆಯ 4 ಓವರ್‌ಗಳಲ್ಲಿ 91 ರನ್ ಗಳಿಸಿತು. ಇದರೊಂದಿಗೆ ಮೀರತ್ ತಂಡವು 20 ಓವರ್‌ಗಳಲ್ಲಿ 233 ರನ್ ಗಳಿಸಿತು. ತಂಡದ ಪರ ರಿತುರಾಜ್ ಶರ್ಮಾ 37 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರೆ, ಆರಂಭಿಕ ಸ್ವಸ್ತಿಕ್ ಚಿಕಾರ 55 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ರಿಂಕು ಸಿಂಗ್ 57 ರನ್ ಗಳಿಸಿದರೆ, ಹೃತಿಕ್ ವ್ಯಾಟ್ಸ್ 400 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 8 ಎಸೆತಗಳಲ್ಲಿ 35 ರನ್ ಗಳಿಸಿದರು. ಅಂತಿಮವಾಗಿ ಮೀರತ್ ತಂಡ ಈ ಪಂದ್ಯವನ್ನು 93 ರನ್‌ಗಳಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ