ಟೀಮ್ ಇಂಡಿಯಾ ಮುಂದಿದೆ 16 ಪ್ರಮುಖ ಟೂರ್ನಿಗಳು..!

Team India: ಟೀಮ್ ಇಂಡಿಯಾ ಮುಂದಿನ 7 ವರ್ಷಗಳಲ್ಲಿ 16 ಪ್ರಮುಖ ಟೂರ್ನಿಗಳನ್ನು ಆಡಲಿದೆ. ಈ ಟೂರ್ನಿಗಳಲ್ಲಿ ಎರಡು ಏಷ್ಯಾಕಪ್ ಹಾಗೂ ಒಂದು ಒಲಿಂಪಿಕ್ಸ್ ಕೂಡ ಇರುವುದು ವಿಶೇಷ. ಅಂದರೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಗೂ ಅವಕಾಶ ನೀಡಲಾಗಿದೆ. ಭಾರತ ತಂಡವು ಮುಂದಿನ 7 ವರ್ಷಗಳಲ್ಲಿ ಆಡುವ ಪ್ರಮುಖ ಟೂರ್ನಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ಮುಂದಿದೆ 16 ಪ್ರಮುಖ ಟೂರ್ನಿಗಳು..!
Team India

Updated on: Jul 30, 2024 | 12:01 PM

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಂಬರುವ ಏಷ್ಯಾಕಪ್ (Asia Cup) ಟೂರ್ನಿಗಳ ಆತಿಥೇಯ ರಾಷ್ಟ್ರಗಳನ್ನು ಪ್ರಕಟಿಸಿದೆ. ಅದರಂತೆ ಏಷ್ಯಾಕಪ್ 2025 ಭಾರತದಲ್ಲಿ ನಡೆದರೆ, ಏಷ್ಯಾಕಪ್ 2027 ಬಾಂಗ್ಲಾದೇಶ್​ನಲ್ಲಿ ಜರುಗಲಿದೆ. ವಿಶೇಷ ಎಂದರೆ 2026ರ ಟಿ20 ವಿಶ್ವಕಪ್ ಅನ್ನು ಮುಂದಿಟ್ಟುಕೊಂಡು 2025 ರಲ್ಲಿ ಟಿ20 ಏಷ್ಯಾಕಪ್ ಅನ್ನು ಆಯೋಜಿಸಲಾಗುತ್ತಿದೆ.

ಹಾಗೆಯೇ 2027ರ ಏಕದಿನ ವಿಶ್ವಕಪ್​ಗೂ ಮುಂಚಿತವಾಗಿ 2027ರ ಏಷ್ಯಾಕ್ ಅನ್ನು ಏಕದಿನ ಮಾದರಿಯಲ್ಲಿ ನಡೆಸಲಾಗುತ್ತದೆ. ಈ ಎರಡು ಟೂರ್ನಿಗಳ ನಡುವೆ ಭಾರತ ಮತ್ತೊಂದಷ್ಟು ಪಂದ್ಯಾವಳಿಗಳನ್ನು ಆಡಲಿರುವುದು ವಿಶೇಷ.

ಅಂದರೆ ಮುಂದಿನ 7 ವರ್ಷಗಳಲ್ಲಿ ಟೀಮ್ ಇಂಡಿಯಾ 7 ಸೀಮಿತ ಓವರ್​ಗಳ ಐಸಿಸಿ ಟೂರ್ನಿಗಳಲ್ಲಿ ಕಣಕ್ಕಿಳಿಯಲಿವೆ. ಇದರ ನಡುವೆ 4 ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕೂಡ ಭಾರತದ ಮುಂದಿದೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬೆನ್ ಸ್ಟೋಕ್ಸ್​

ಇದಲ್ಲದೆ ಏಷ್ಯನ್ ಗೇಮ್ಸ್ ಕ್ರಿಕೆಟ್, ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಾವಳಿಗಳು ಕೂಡ ಜರುಗಲಿದೆ. ಹೀಗಾಗಿ ಮುಂದಿನ 7 ವರ್ಷಗಳಲ್ಲಿ ಭಾರತ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಿರುವುದು ವಿಶೇಷ. ಹಾಗಿದ್ರೆ ಟೀಮ್ ಇಂಡಿಯಾ ಮುಂದಿರುವ ಪ್ರಮುಖ ಟೂರ್ನಿಗಳಾವುವು ಎಂದು ನೋಡೋಣ…

 

  • ಐಸಿಸಿ ಸೀಮಿತ ಓವರ್​ಗಳ ಟೂರ್ನಿ:

ವರ್ಷ ಸ್ಥಳ ಪಂದ್ಯಾವಳಿ
ಫೆಬ್ರವರಿ 2025 ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ
ಫೆಬ್ರವರಿ 2026 ಭಾರತ – ಶ್ರೀಲಂಕಾ ಟಿ20 ವಿಶ್ವಕಪ್
ಅಕ್ಟೋಬರ್ 2027 ಸೌತ್ ಆಫ್ರಿಕಾ, ಝಿಂಬಾಬ್ವೆ, ನಮೀಬಿಯಾ ಏಕದಿನ ವಿಶ್ವಕಪ್
ಅಕ್ಟೋಬರ್ 2028 ಆಸ್ಟ್ರೇಲಿಯಾ – ನ್ಯೂಝಿಲೆಂಡ್ ಟಿ20 ವಿಶ್ವಕಪ್
ಅಕ್ಟೋಬರ್ 2029 ಭಾರತ ಚಾಂಪಿಯನ್ಸ್ ಟ್ರೋಫಿ
ಜೂನ್ 2030 ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ ಟಿ20 ವಿಶ್ವಕಪ್
ಅಕ್ಟೋಬರ್ 2031 ಭಾರತ ಮತ್ತು ಬಾಂಗ್ಲಾದೇಶ ಏಕದಿನ ವಿಶ್ವಕಪ್

 

  • ಏಷ್ಯಾಕಪ್ ಟೂರ್ನಿ:

ವರ್ಷ ಸ್ಥಳ ಪಂದ್ಯಾವಳಿ
ಡಿಸೆಂಬರ್ 2025 ಭಾರತ ಟಿ20 ಏಷ್ಯಾಕಪ್
ಸೆಪ್ಟೆಂಬರ್ 2027 ಬಾಂಗ್ಲಾದೇಶ್ ಏಕದಿನ ಏಷ್ಯಾಕಪ್

  • ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್:

ವರ್ಷ ಸ್ಥಳ ಪಂದ್ಯಾವಳಿ
ಜೂನ್ 2025 ಇಂಗ್ಲೆಂಡ್ WTC ಫೈನಲ್
ಜೂನ್ 2027 ನಿರ್ಧಾರವಾಗಿಲ್ಲ WTC ಫೈನಲ್
ಜೂನ್ 2029 ನಿರ್ಧಾರವಾಗಿಲ್ಲ WTC ಫೈನಲ್ 
ಜೂನ್ 2031 ನಿರ್ಧಾರವಾಗಿಲ್ಲ WTC ಫೈನಲ್

  • ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿ:

ವರ್ಷ ಸ್ಥಳ ಪಂದ್ಯಾವಳಿ
2026 ಜಪಾನ್ ಏಷ್ಯನ್ ಗೇಮ್ಸ್ ಕ್ರಿಕೆಟ್ 
2028 ಅಮೆರಿಕ ಒಲಿಂಪಿಕ್ಸ್ ಕ್ರಿಕೆಟ್
2030 ಖತಾರ್ ಏಷ್ಯನ್ ಗೇಮ್ಸ್ ಕ್ರಿಕೆಟ್

 

 

Published On - 12:00 pm, Tue, 30 July 24