Asia Cup: ಟಿ20 ಸ್ವರೂಪದಲ್ಲಿ ಏಷ್ಯಾಕಪ್

Asia Cup 2025: 2025 ರಲ್ಲಿ ನಡೆಯುತ್ತಿರುವ 17ನೇ ಏಷ್ಯಾಕಪ್ ಟೂರ್ನಿ. 16 ಆವೃತ್ತಿಗಳಲ್ಲಿ ಕೇವಲ 2 ಬಾರಿ ಮಾತ್ರ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ. ಈ ವೇಳೆ  ಭಾರತ ತಂಡ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Asia Cup: ಟಿ20 ಸ್ವರೂಪದಲ್ಲಿ ಏಷ್ಯಾಕಪ್
Asia Cup
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 30, 2024 | 8:42 AM

ಏಷ್ಯಾ ಕಪ್ 2025 ಟಿ20 ಸ್ವರೂಪದಲ್ಲೇ ನಡೆಯಲಿದೆ. 2026ರಲ್ಲಿ ಟಿ20 ವಿಶ್ವಕಪ್​ ಜರುಗಲಿದ್ದು, ಹೀಗಾಗಿ ಏಷ್ಯಾಕಪ್ ಟೂರ್ನಿಯನ್ನು (Asia Cup 2025) ಚುಟುಕು ಸ್ವರೂಪದಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ. ವಿಶೇಷ ಎಂದರೆ 2023ರ ಏಷ್ಯಾಕಪ್​ ಅನ್ನು ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಅಂದರೆ ಇಲ್ಲಿ ಆಯಾ ಏಷ್ಯಾಕಪ್​ನ ನಂತರ ಐಸಿಸಿ ಟೂರ್ನಿ ಜರುಗುತ್ತಿದ್ದರೆ ಅದೇ ಸ್ವರೂಪದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. 2022ರಲ್ಲಿ ಟಿ20 ವಿಶ್ವಕಪ್ ನಡೆದಿದ್ದರಿಂದ ಅದಕ್ಕೂ ಮುಂಚಿತವಾಗಿ ಏಷ್ಯಾಕಪ್ ಅನ್ನು ಕೂಡ ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಹಾಗೆಯೇ 2023 ರ ಏಕದಿನ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್ ಅನ್ನು​ 50 ಓವರ್​ಗಳಲ್ಲಿ ನಡೆಸಲಾಗಿತ್ತು. ಇದೀಗ 2025 ರ ಏಷ್ಯಾಕಪ್​ ಅನ್ನು ಟಿ20 ವಿಶ್ವಕಪ್​ ಹಿನ್ನಲೆಯಲ್ಲಿ ಟಿ20 ಸ್ವರೂಪದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಯುಎಇ-ಒಮಾನ್​ನಲ್ಲಿ ಏಷ್ಯಾಕಪ್​?

ಮುಂಬರುವ ಏಷ್ಯಾಕಪ್ ಟೂರ್ನಿ ಆಯೋಜನೆ ಹಕ್ಕಿಗಾಗಿ ಯುಎಇ ಹಾಗೂ ಒಮಾನ್ ಕ್ರಿಕೆಟ್ ಬೋರ್ಡ್​ಗಳು ಬಿಡ್ಡಿಂಗ್ ನಡೆಸಿದೆ. ಈಗಾಗಲೇ ಯುಎಇ ಐದು ಬಾರಿ ಏಷ್ಯಾಕಪ್​ಗೆ ಆತಿಥ್ಯವಹಿಸಿದೆ. ಹೀಗಾಗಿ 2025 ರ ಟೂರ್ನಿಯನ್ನು ಒಮಾನ್-ಯುಎಇ ಜಂಟಿಯಾಗಿ ಆಯೋಜಿಸುವ ಸಾಧ್ಯತೆಯಿದೆ.

17ನೇ ಏಷ್ಯಾಕಪ್ ಟೂರ್ನಿ:

2025 ರಲ್ಲಿ ನಡೆಯುತ್ತಿರುವ 17ನೇ ಏಷ್ಯಾಕಪ್ ಟೂರ್ನಿ. 16 ಆವೃತ್ತಿಗಳಲ್ಲಿ ಕೇವಲ 2 ಬಾರಿ ಮಾತ್ರ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ. ಈ ವೇಳೆ  ಭಾರತ ತಂಡ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹಾಗೆಯೇ ಅತೀ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ  ದಾಖಲೆ ಕೂಡ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು ಇದುವರೆಗೆ 8 ಬಾರಿ ಏಷ್ಯನ್ ಚಾಂಪಿಯನ್ಸ್​​​ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ

ಇದೀಗ ಮತ್ತೆ ಟಿ20 ಸ್ವರೂಪದಲ್ಲಿ ಏಷ್ಯಾಕಪ್ ಆಯೋಜನೆಗೆ ಸಿದ್ಧತೆಗಳು ಶುರುವಾಗಿದ್ದು, ಆಯೋಜನೆ ಹಕ್ಕಿನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ತಿಳಿದು ಬಂದಿದೆ.

Published On - 8:37 am, Tue, 30 January 24

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?