ಫಾಫ್ ಸಿಡಿಲಬ್ಬರ: ಕೇವಲ 5.4 ಓವರ್ಗಳಲ್ಲಿ 98 ರನ್ ಚೇಸ್ ಮಾಡಿದ JSK
SA20 League: ಮಳೆಬಾಧಿತ ಈ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಎಂಐ ಕೇಪ್ಟೌನ್ ತಂಡದ ಕ್ಯಾಪ್ಟನ್ ಕೀರನ್ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿನ (SA20) 23ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಕೇಪ್ಟೌನ್ ನ್ಯೂಲಾಂಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ಕೇಪ್ಟೌನ್ ಹಾಗೂ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ (Faf Du plessis) ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್ಟೌನ್ ತಂಡವು 6 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದಾದ ಬಳಿಕ ಓವರ್ಗಳ ಕಡಿತದೊಂದಿಗೆ ಮ್ಯಾಚ್ ಮುಂದುವರೆಸಲಾಗಿತ್ತು.
8 ಓವರ್ಗಳಿಗೆ ಸೀಮಿತಗೊಳಿಸಲಾಗಿದ್ದ ಈ ಪಂದ್ಯದ ಕೊನೆಯ ಎರಡು ಓವರ್ಗಳಲ್ಲಿ ನಾಯಕ ಕೀರನ್ ಪೊಲಾರ್ಡ್ ಅಬ್ಬರಿಸಿದರು. ಕೇವಲ 10 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಪೊಲಾರ್ಡ್ ಎಂಐ ಕೇಪ್ಟೌನ್ ತಂಡದ ಸ್ಕೋರ್ ಅನ್ನು 80 ಕ್ಕೆ ತಂದು ನಿಲ್ಲಿಸಿದರು.
ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 8 ಓವರ್ಗಳಲ್ಲಿ 98 ರನ್ಗಳ ಟಾರ್ಗೆಟ್ ಪಡೆದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಲೆಯುಸ್ ಡು ಪ್ಲೂಯ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ ಕೇವಲ 5.4 ಓವರ್ಗಳಲ್ಲಿ 98 ರನ್ಗಳನ್ನು ಬಾರಿಸಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಜೆಎಸ್ಕೆ ಪರ ಲೆಯುಸ್ ಡು ಪ್ಲೂಯ್ 14 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 41 ರನ್ ಬಾರಿಸಿದರೆ, ಫಾಫ್ ಡುಪ್ಲೆಸಿಸ್ 20 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
Joburg Super Kings power duo, du Plessis and du Plooy, making it rain sixes! 💥#Betway #SA20 #WelcomeToIncredible #MICTvJSK pic.twitter.com/5VlpEhJn7g
— Betway SA20 (@SA20_League) January 29, 2024
ಎಂಐ ಕೇಪ್ಟೌನ್ ಪ್ಲೇಯಿಂಗ್ 11: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್ಸ್ಟೋನ್ , ಸ್ಯಾಮ್ ಕರನ್ , ಕೀರನ್ ಪೊಲಾರ್ಡ್ (ನಾಯಕ) , ಡೆವಾಲ್ಡ್ ಬ್ರೆವಿಸ್ , ಡೆಲಾನೋ ಪೊಟ್ಗೀಟರ್ , ಜಾರ್ಜ್ ಲಿಂಡೆ , ಥಾಮಸ್ ಕಬರ್ , ಕಗಿಸೊ ರಬಾಡ , ನುವಾನ್ ತುಷಾರಾ.
ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ
ಜೋಬರ್ಗ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ರೀಝ ಹೆಂಡ್ರಿಕ್ಸ್ , ಲೆಯುಸ್ ಡು ಪ್ಲೂಯ್ , ವೇಯ್ನ್ ಮ್ಯಾಡ್ಸೆನ್ , ಮೊಯಿನ್ ಅಲಿ , ಡೊನೊವನ್ ಫೆರೀರಾ (ವಿಕೆಟ್ ಕೀಪರ್ ) , ಡೇವಿಡ್ ವೀಝ , ಲಿಝಾಡ್ ವಿಲಿಯಮ್ಸ್ , ನಾಂಡ್ರೆ ಬರ್ಗರ್ , ಇಮ್ರಾನ್ ತಾಹಿರ್ , ಕೈಲ್ ಸಿಮಂಡ್ಸ್.