U19 World Cup: U19 ವಿಶ್ವಕಪ್ನಲ್ಲಿಂದು ಭಾರತ-ನ್ಯೂಝಿಲೆಂಡ್ ಸೂಪರ್ ಸಿಕ್ಸ್ ಪಂದ್ಯ: ಉದಯ್ ಪಡೆ ಮೇಲೆ ಎಲ್ಲರ ಕಣ್ಣು
India U19 vs New Zealand: ಉದಯ್ ಸಹರಾನ್ ನೇತೃತ್ವದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 84 ರನ್ ಗಳ ಜಯ ಸಾಧಿಸುವ ಮೂಲಕ ಅಭಿಯಾನ ಆರಂಭಿಸಿತು. ನಂತರ, ಐರ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಸೋಲಿಸಿದರು. ಇಂದು ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ.
2024ರ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿ (ICC Under-19 World Cup) ರೋಚಕತೆ ಸೃಷ್ಟಿಸುತ್ತಿದೆ. ಇದುವರೆಗೆ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದೆ ಗೆಲುವಿನ ಓಟ ಮುಂದುವರೆಸಿರುವ ಉದಯ್ ಸಹರನ್ ನೇತೃತ್ವದ ಭಾರತ ತಂಡ ಇಂದು ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಮೆನ್ ಇನ್ ಬ್ಲೂ ಪ್ರಸ್ತುತ ಪಂದ್ಯಾವಳಿಯಲ್ಲಿ ಗುಂಪು ಹಂತದ ಅಭಿಯಾನದ ನಂತರ ಸತತವಾಗಿ ಮೂರು ಪಂದ್ಯಗಳನ್ನು ಗೆದ್ದು ಅಜೇಯರಾಗಿದ್ದಾರೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.
ಉದಯ್ ಸಹರಾನ್ ನೇತೃತ್ವದ ತಂಡ ಬಾಂಗ್ಲಾದೇಶ ವಿರುದ್ಧ 84 ರನ್ ಗಳ ಜಯ ಸಾಧಿಸುವ ಮೂಲಕ ಅಭಿಯಾನ ಆರಂಭಿಸಿತು. ನಂತರ, ಐರ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಸೋಲಿಸಿದರು. ಹಾಲಿ ಚಾಂಪಿಯನ್ ಗ್ರೂಪ್ ಹಂತದ ಪಂದ್ಯಾವಳಿಯ ತಮ್ಮ ಕೊನೆಯ ಎರಡು ಪಂದ್ಯಗಳನ್ನು 201 ರನ್‌ಗಳ ಅಂತರದಿಂದ ಗೆದ್ದಿದ್ದಾರೆ.
IND vs ENG: ಇಬ್ಬರು ಔಟ್, ಮೂವರು ಇನ್; ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ
ಮುಶೀರ್ ಖಾನ್ ಮತ್ತು ಅರ್ಶಿನ್ ಕುಲಕ್ರಾನಿ ಭಾರತದ ಇನ್ ಫಾರ್ಮ್ ಆಟಗಾರರಾಗಿದ್ದು, ಐರ್ಲೆಂಡ್ ಮತ್ತು ಯುಎಸ್ಎ ವಿರುದ್ಧ ಶತಕ ಬಾರಿಸಿದ್ದರು.
ಇತ್ತ ನ್ಯೂಝಿಲೆಂಡ್ ಬಗ್ಗೆ ಮಾತನಾಡುತ್ತಾ, ಅವರು ತಮ್ಮ ಅಭಿಯಾನವನ್ನು ನೇಪಾಳದ ವಿರುದ್ಧ 64 ರನ್‌ಗಳ ಜಯದೊಂದಿಗೆ ಪ್ರಾರಂಭಿಸಿದರು. ಬಳಿಕ ಅಫ್ಘಾನಿಸ್ತಾನದ ವಿರುದ್ಧ ಒಂದು ವಿಕೆಟ್ ಜಯ ಸಾಧಿಸಿತು. ಆದರೆ, ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಕಿವೀಸ್ ಪಡೆಯನ್ನು 10 ವಿಕೆಟ್‌ಗಳಿಂದ ಸೋಲಿಸಿತು.
ಭಾರತ: ಉದಯ್ ಸಹರನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೆಲ್ಲಿ ಅವನೀಶ್ ರಾವ್, ಸೌಮಿ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ ಮತ್ತು ರಾಜ್ ಲಿಂಬಾನಿ ನಮನ್ ತಿವಾರಿ.
ನ್ಯೂಝಿಲೆಂಡ್: ಆಸ್ಕರ್ ಜಾಕ್ಸನ್ (ನಾಯಕ), ಮೇಸನ್ ಕ್ಲಾರ್ಕ್, ಸ್ಯಾಮ್ ಕ್ಲೋಡ್, ಝಾಕ್ ಕಮ್ಮಿಂಗ್, ರೆಹಮಾನ್ ಹೆಕ್ಮಾಟ್, ಟಾಮ್ ಜೋನ್ಸ್, ಜೇಮ್ಸ್ ನೆಲ್ಸನ್, ಸ್ನೇಹಿತ್ ರೆಡ್ಡಿ, ಮ್ಯಾಟ್ ರೋವ್, ಇವಾಲ್ಡ್ ಸ್ರೂಡರ್, ಲಾಚ್ಲಾನ್ ಸ್ಟಾಕ್ಪೋಲ್, ಆಲಿವರ್ ತೆವಾಟಿಯಾ, ಅಲೆಕ್ಸ್ ಥಾಂಪ್ಸನ್, ಲುಕೆಸೋರ್ಗಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ