ಟಿ20 ವಿಶ್ವಕಪ್‌ಗಾಗಿ (T20 World Cup) ಟೀಂ ಇಂಡಿಯಾದ ಮಿಷನ್ ಆರಂಭವಾಗಿದೆ. ನಾಯಕ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಪರ್ತ್‌ನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದೆ. 10 ರಂದು ಟೀಂ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಆ ಬಳಿಕ ಪಾಕಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲದೆ. ಆದರೆ ಇದೆಲ್ಲದರ ನಡುವೆ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ( Rishabh Pant) ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದ್ದು, ಇದರ ಹಿಂದಿನ ಕಾರಣವೂ ಅಷ್ಟೇ ಕುತೂಹಲಕಾರಿಯಾಗಿದೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಆಸ್ಟ್ರೇಲಿಯಾಕ್ಕೆ ತೆರಳಿರುವುದೇ ಈ ಕುತೂಹಲಕ್ಕೆ ಕಾರಣವಾಗಿದೆ.
ವಾಸ್ತವವಾಗಿ ಕ್ರಿಕೆಟಿಗ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ನಡುವಿನ ಜಗಳ ಎಲ್ಲರಿಗೂ ಗೊತ್ತೇ ಇದೆ. ಈ ಇಬ್ಬರ ನಡುವಿನ ಪೋಸ್ಟ್ ವಾರ್ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವುದನ್ನು ನಾವು ಹೊಸದಾಗಿ ನಿಮಗೆ ಹೇಳಬೇಕಿಲ್ಲ.ಊರ್ವಶಿ ನೀಡಿದ ಸಂದರ್ಶನದಿಂದ ಆರಂಭವಾದ ಈ ಇಬ್ಬರ ನಡುವಿನ ಕೋಳಿ ಜಗಳ ಇನ್ನೂ ಮುಂದುವರೆದಿದೆ. ಇದೀಗ ಊರ್ವಶಿ ರೌಟೇಲಾ ಅವರು ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ತಾನು ಆಸ್ಟ್ರೇಲಿಯಾ ತಲುಪಿರುವುದಾಗಿ ಹೇಳಿಕೊಂಡಿದ್ದಾರೆ.
ಊರ್ವಶಿ- ಪಂತ್ ವಾಕ್ಸಮರ
ಸದ್ಯ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಯಾರಿಯಲ್ಲಿ ನಿರತವಾಗಿದೆ. ರಿಷಬ್ ಪಂತ್ ಕೂಡ ಈ ತಂಡದ ಭಾಗವಾಗಿದ್ದು, ಅವರು ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವೆ ನಡೆಯುತ್ತಿರುವ ಈ ಶೀತಲ ಸಮರದ ನಡುವೆ ನಟಿ ಅಲ್ಲಿಗೆ ಹೋಗಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕಳೆದ ಕೆಲವು ದಿನಗಳಿಂದ ಊರ್ವಶಿ ರೌಟೇಲಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ರಿಷಬ್ ಪಂತ್ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಾರಿ ಅವರು ಯಾವ ಬಾಂಬ್ ಸಿಡಿಸುತ್ತಾರೋ ಎಂದು ನೆಟ್ಟಿಗರು ಕಾದುಕುಳಿತ್ತಿದ್ದಾರೆ.
ನಸೀಮ್ ಷಾ ಜೊತೆಗೆ ಊರ್ವಶಿ ಹೆಸರು
ಈಗ ಹೇಗೆ ಊರ್ವಶಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೋ ಹಾಗೆಯೇ ಕಳೆದ ತಿಂಗಳು ದುಬೈಗೆ ಹಾರಿದ್ದರು. ಆ ಸಂದರ್ಭದಲ್ಲಿ ಏಷ್ಯಾಕಪ್‌ನಲ್ಲಿ ಭಾಗವಹಿಸಲು ಟೀಂ ಇಂಡಿಯಾ ಕೂಡ ದುಬೈಗೆ ತೆರಳಿತ್ತು. ಆ ಸಮಯದಲ್ಲೂ ರಿಷಬ್ ಮತ್ತು ಊರ್ವಶಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದರ ಜೊತೆಗೆ ಪಾಕಿಸ್ತಾನಿ ಕ್ರಿಕೆಟಿಗ ನಸೀಮ್ ಶಾ ಜೊತೆ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು.
ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದ ಊರ್ವಶಿ
ಕೆಲ ದಿನಗಳ ಹಿಂದೆ ನಟಿ ಊರ್ವಶಿ, ಪಂತ್ ಹುಟ್ಟುಹಬ್ಬದಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಆ ಪೋಸ್ಟ್ನಲ್ಲಿ ಜನ್ಮದಿನದ ಶುಭಾಶಯ ಕೋರಲಾಗಿತ್ತು. ಆದರೆ ಈ ಪೋಸ್ಟ್ನಲ್ಲಿ ಊರ್ವಶಿ ಪಂತ್ ಹೆಸರನ್ನು ಎಲ್ಲೂ ಉಲ್ಲೇಖಿಸಿರಲಿಲ್ಲ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮಾತ್ರ ಇದು ರಿಷಭ್ ಪಂತ್ಗಾಗಿ ಹಾಕಿಕೊಂಡಿರುವ ಪೋಸ್ಟ್ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದರು.
ಇದೀಗ ಊರ್ವಶಿ ಆಸ್ಟ್ರೇಲಿಯಾ ತಲುಪಿರುವುದರಿಂದ ರಿಷಬ್ ಪಂತ್ ಹೆಸರು ಟ್ರೇಡಿಂಗ್ನಲ್ಲಿರುವುದಕ್ಕೆ ಕಾರಣವಾಗಿದೆ. ಊರ್ವಶಿ ಹೀಗೆ ಪಂತ್ ಅವರನ್ನು ಎಲ್ಲಾ ಕಡೆ ಫಾಲೋ ಮಾಡುವುದರಿಂದ ರಿಷಬ್ ಪಂತ್ ಅವರ ವೃತ್ತಿಜೀವನಕ್ಕೆ ಧಕ್ಕೆಯಾಗಲಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದಲ್ಲದೇ ಹಲವು ಮೀಮ್‌ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
Published On - 5:01 pm, Sun, 9 October 22