ಈ ರೀತಿಯ ಫೀಲ್ಡ್ ಸೆಟ್ಟಿಂಗ್​ನ ನೀವು ಯಾವ ಪಂದ್ಯದಲ್ಲಾದ್ರು ನೋಡಿದ್ರಾ..? ವಿಡಿಯೋ ನೋಡಿ

ನಾರ್ವೆಯ ಬಿಗಿಯಾದ ಫೀಲ್ಡಿಂಗ್ ಹೊರತಾಗಿಯೂ, ಬ್ಯಾಟ್ಸ್‌ಮನ್ ಆ ದಿಕ್ಕಿನಲ್ಲೇ ಬಾಲನ್ನು ಹೊಡೆದು ರನ್ ಗಳಿಸುವುದರಲ್ಲಿ ಯಶಸ್ವಿಯಾದರು.

ಈ ರೀತಿಯ ಫೀಲ್ಡ್ ಸೆಟ್ಟಿಂಗ್​ನ ನೀವು ಯಾವ ಪಂದ್ಯದಲ್ಲಾದ್ರು ನೋಡಿದ್ರಾ..? ವಿಡಿಯೋ ನೋಡಿ
Follow us
TV9 Web
| Updated By: ಪೃಥ್ವಿಶಂಕರ

Updated on:Oct 09, 2022 | 5:52 PM

ಕ್ರಿಕೆಟ್, ಜಗತ್ತಿನಲ್ಲಿ ಯಾಕಿಷ್ಟು ಪ್ರಸಿದ್ಧಿ ಪಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಆಗಾಗ್ಗೆ ಕೆಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಈ ಆಟದಲ್ಲಿ ಸಿಗುವ ಮನರಂಜನೆಯ ಜೊತೆಗೆ ಆಟದ ನಡುವೆ ನಡೆಯುವ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿಬಿಡುತ್ತವೆ. ಈಗ ಅದೇ ರೀತಿಯ ಘಟನೆಯೊಂದು ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ಕ್ರಿಕೆಟ್​ನಲ್ಲಿ ಏನುಬೇಕಾದರೂ ಸಾಧ್ಯ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಪ್ರಸ್ತುತ ಯುರೋಪಿಯನ್ ಕ್ರಿಕೆಟ್ ಲೀಗ್‌ ನಡೆಯುತ್ತಿದ್ದು, ಈ ಲೀಗ್​ನಲ್ಲಿ ಮುಖಾಮುಖಿಯಾಗಿದ್ದ ರೊಮೇನಿಯಾ ಮತ್ತು ನಾರ್ವೆ ತಂಡಗಳು ಈಗ ಸಖತ್ ಸುದ್ದಿಯಾಗಿವೆ. ರೊಮೇನಿಯಾ ಮತ್ತು ನಾರ್ವೆ ನಡುವೆ ನಡೆದ 18 ನೇ ಪಂದ್ಯದಲ್ಲಿ ನಾರ್ವೆ ತಂಡದ ಬೌಲರ್ ಮಾಡಿದ ಫೀಲ್ಡ್ ಸೆಟ್ಟಿಂಗ್ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ಡಿ ಗುಂಪಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ವೆ 10 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ನಾರ್ವೆ ನೀಡಿದ ಗುರಿಗೆ ಉತ್ತರವಾಗಿ ರೊಮೇನಿಯಾ ತಂಡ ಗುರಿಯ ಸಮೀಪವೂ ತಲುಪಲು ಸಾಧ್ಯವಾಗದೆ 10 ಓವರ್‌ಗಳಲ್ಲಿ 7 ವಿಕೆಟ್‌ಗೆ 54 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನ ನಡುವೆಯೂ ರೊಮೇನಿಯನ್ ಬ್ಯಾಟ್ಸ್‌ಮನ್ ಆಟ ನೋಡಿ ಕಂಗೆಟ್ಟ ನಾರ್ವೆ ತಂಡದ ಬೌಲರ್ ತನ್ನ ತಂಡದ ಎಲ್ಲಾ ಫೀಲ್ಡರ್‌ಗಳನ್ನು ಸ್ಲಿಪ್‌ನಲ್ಲಿ ಫೀಲ್ಡಿಂಗ್​ಗೆ ಹಾಕಿದರು.

9 ಸ್ಲಿಪ್ ಇದ್ದರೂ ರನ್ ಗಳಿಸಿದ ಬ್ಯಾಟರ್

ನಾರ್ವೆಯ ಬಿಗಿಯಾದ ಫೀಲ್ಡಿಂಗ್ ಹೊರತಾಗಿಯೂ, ಬ್ಯಾಟ್ಸ್‌ಮನ್ ಆ ದಿಕ್ಕಿನಲ್ಲೇ ಬಾಲನ್ನು ಹೊಡೆದು ರನ್ ಗಳಿಸುವುದರಲ್ಲಿ ಯಶಸ್ವಿಯಾದರು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಾರ್ವೆ ಎದುರು ಸೋತ ರೊಮೇನಿಯಾ

ಈ ಪಂದ್ಯದಲ್ಲಿ ನಾರ್ವೆ ಪರ ಆಡುತ್ತಿರುವ ಪಾಕಿಸ್ತಾನ ಮೂಲದ ಇಕ್ಬಾಲ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ ಕೇವಲ 16 ಎಸೆತಗಳಲ್ಲಿ 32 ರನ್ ಚಚ್ಚಿದರು. ಇಕ್ಬಾಲ್ ಹೊರತುಪಡಿಸಿ, ಪ್ರತೀಶ್ 10 ಎಸೆತಗಳಲ್ಲಿ 16 ರನ್ ಮತ್ತು ಅಲಿ ಸುಫಿಯಾನ್ 7 ಎಸೆತಗಳಲ್ಲಿ 13 ರನ್ ಗಳಿಸಿದರು. ರೊಮೇನಿಯಾದ ಅಬ್ದುಲ್ ಆಸಿಫ್ 12 ರನ್ ನೀಡಿ 3 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ರೊಮೇನಿಯಾ ತಂಡದ ಯಾವುದೇ ಬ್ಯಾಟ್ಸ್​ಮನ್​ಗೆ ನಾರ್ವೆ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.

ಬೌಲಿಂಗ್​ನಲ್ಲೂ ಮಿಂಚಿದ ಇಕ್ಬಾಲ್

ಯುರೋಪಿಯನ್ ಕ್ರಿಕೆಟ್ ಲೀಗ್‌ನ ಈ ಪಂದ್ಯದಲ್ಲಿ ರೊಮೇನಿಯಾದ 8 ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ರೊಮೇನಿಯಾ ಪರ ಭಾರತ ಮೂಲದ ರಮೇಶ್ ಸತೀಶನ್ 14 ರನ್ ಗಳಿಸಿದರು. ಈ ಪಂದ್ಯದಲ್ಲಿ ಆಲ್​ರೌಂಡರ್ ಆಟ ಪ್ರದರ್ಶಿಸಿದ ನಾರ್ವೆಯ ಇಕ್ಬಾಲ್, ಮೊದಲು ಬ್ಯಾಟಿಂಗ್​ನಲ್ಲಿ 32 ರನ್ ಬಾರಿಸಿದರೆ, ಬಳಿಕ ಬೌಲಿಂಗ್​ನಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರು. ಇಕ್ಬಾಲ್ ಅವರ ಆಲ್ ರೌಂಡ್ ಪ್ರದರ್ಶನದಿಂದ ನಾರ್ವೆ ತಂಡ 43 ರನ್​ಗಳಿಂದ ಜಯಗಳಿಸಿತು.

Published On - 5:52 pm, Sun, 9 October 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ