ಕ್ರಿಕೆಟ್ ಲೋಕದ ಇಬ್ಬರು ಮಾಜಿ ಕ್ರಿಕೆಟಿಗರು ಇಂದು ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಅನುಭವಿ ಆಫ್ ಸ್ಪಿನ್ನರ್ ಕ್ಲೈಡ್ ಬಟ್ಸ್ (Clyde Butts) ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರಲ್ಲದೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಜೋ ಸೊಲೊಮನ್ ಕೂಡ ಇಂದು ಇಹಲೋಕ ತ್ಯಜಿಸಿದ್ದಾರೆ. ಗಯಾನಾ ತಂಡದ ಮಾಜಿ ನಾಯಕ ಮತ್ತು ವೆಸ್ಟ್ ಇಂಡೀಸ್‌ನ (West Indies) ಆಫ್ ಸ್ಪಿನ್ನರ್ ಶುಕ್ರವಾರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಸ್ವತಃ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೇ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮಂಡಳಿ ಗಯಾನಾ ಮಾಜಿ ನಾಯಕ ಮತ್ತು ವೆಸ್ಟ್ ಇಂಡೀಸ್ ಆಫ್ ಸ್ಪಿನ್ನರ್ ಕ್ಲೈಡ್ ಬಟ್ಸ್ ಇಂದು ಸಂಜೆ ನಿಧನರಾಗಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದೆ.
ಕ್ಲೈಡ್ ಬಟ್ಸ್ 1980 ರ ದಶಕದ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದರಯ.1985 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಬಟ್ಸ್ ಅವರು 1988 ರಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ವೆಸ್ಟ್ ಇಂಡೀಸ್ ಪರ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಇದರಲ್ಲಿ 10 ವಿಕೆಟ್ ಜೊತೆಗೆ 108 ರನ್ ಸಹ ಬಾರಿಸಿದ್ದರು. ಅದೇ ಸಮಯದಲ್ಲಿ ಅವರು 87 ಪ್ರಥಮ ದರ್ಜೆ ಪಂದ್ಯಗಳಲ್ಲಿ 348 ವಿಕೆಟ್ಗಳನ್ನು ಪಡೆದಿದ್ದರೆ, 32 ಲಿಸ್ಟ್ ಎ ಪಂದ್ಯಗಳಲ್ಲಿ 32 ವಿಕೆಟ್ಗಳನ್ನು ಪಡೆದಿದ್ದರು.
Sad news out of Guyana.
Clyde Butts, the former Guyana captain and West Indies off-spinner; and former West Indies Chairman of Selectors passed away this evening
We offer sincere condolences to his family, friends and loved ones. May he Rest in Peace. pic.twitter.com/88QqKPZeR2
— Windies Cricket (@windiescricket) December 8, 2023
More sad news.
Joe Solomon, the former Guyana and West Indies batsman passed away today.
He was famous for the run out which led to the famous tied Test in 1960 at the Gabba.
We extend sincere condolences to his family, friends and loved ones. May he Rest in Peace. pic.twitter.com/vDLO9ZnBDk
— Windies Cricket (@windiescricket) December 8, 2023
ಕ್ಲೈಡ್ ಬಟ್ಸ್ ಅವರೊಂದಿಗೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಜೋ ಸೊಲೊಮನ್ ಕೂಡ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೊಲೊಮನ್ ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೋ ಸೊಲೊಮನ್ ತಮ್ಮ 7 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 1 ಶತಕ ಮತ್ತು 9 ಅರ್ಧ ಶತಕ ಸೇರಿದಂತೆ ಒಟ್ಟು 1326 ರನ್ ಕಲೆಹಾಕಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Sat, 9 December 23