ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ 2024 ರ ಆರನೇ ಪಂದ್ಯದಲ್ಲಿ ಆರ್‌ಸಿಬಿ (RCB vs PBKS) 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಕೊಹ್ಲಿ ಸೋಮವಾರ ತಮ್ಮ ಫಾರ್ಮ್ಗೆ ಮರಳಿದರು. ಕೇವಲ 49 ಎಸೆತಗಳಲ್ಲಿ 77 ರನ್ ಸಿಡಿಸಿ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡವನ್ನು ಸೋಲಿಸಲು ಸಹಾಯ ಮಾಡಿದರು. ಕೊಹ್ಲಿ ಅವರ 77 ರನ್ಗಳ ನೆರವಿನಿಂದ ಆರ್‌ಸಿಬಿ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳ ಗುರಿ ಬೆನ್ನಟ್ಟಿತು. ಇದೀಗ ಈ ಪಂದ್ಯದ ನಡುವಣ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ ಪಂಜಾಬ್ ಆಟಗಾರನನ್ನು ನಿಂದಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅವರನ್ನು ನಿಂದಿಸುವ ಕೊಹ್ಲಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನ 13ನೇ ಓವರ್ ಆರಂಭಕ್ಕೂ ಮುನ್ನ ಈ ಘಟನೆ ನಡೆದಿದೆ. ಬ್ರಾರ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ, ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದ ಕೊಹ್ಲಿ, ಬ್ರಾರ್‌ಗೆ “Ruka jaa B******, saans to lene de” (ನಿಧಾನವಾಗಿ ಬೌಲಿಂಗ್ ಮಾಡು B******, ಉಸಿರಾಡಲು ಸ್ವಲ್ಪ ಸಮಯ ಕೊಡು) ಎಂದು ಬ್ರಾರ್‌ಗೆ ಕೊಹ್ಲಿ ಹೇಳಿದ್ದಾರೆ. ಇದರ ಆಡಿಯೋ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.
ರೋಚಕ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ನಲ್ಲಿ ಆರ್‌ಸಿಬಿ ನಾಯಕ ಡುಪ್ಲೆಸಿಸ್ ಏನೆಲ್ಲ ಹೇಳಿದ್ರು ಗೊತ್ತೇ?
— Cricket Videos (@cricketvid123) March 25, 2024
28 ವರ್ಷದ ಬ್ರಾರ್ ವಿರಾಟ್‌ನ ಕಾಮೆಂಟ್‌ಗಳಿಗೆ ತಲೆಕೆಡಿಸಿಕೊಂಡಿಲ್ಲ. 13 ನೇ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಕ್ಸ್‌ವೆಲ್ ಅವರನ್ನು ಔಟ್ ಮಾಡಿದರು. ಮ್ಯಾಕ್ಸಿ ಐದು ಎಸೆತಗಳಲ್ಲಿ ಮೂರು ರನ್‌ಗಳಸಿ ಔಟ್ ಆದರು. ಬಳಿಕ ಹರ್ಷಲ್ ಪಟೇಲ್ ಎಸೆದ 16ನೇ ಓವರ್‌ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಅನ್ನು ಕೂಡ ಹಿಡಿದರು.
ಕೊಹ್ಲಿ ಕೈಗೆ ಸಿಕ್ಕಿತು ಆರೆಂಜ್ ಕ್ಯಾಪ್: ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೆದ್ದಿತು ಆರ್‌ಸಿಬಿ
ಆರ್‌ಸಿಬಿ ವಿರುದ್ಧ ಹರ್‌ಪ್ರೀತ್ ಬೆಂಕಿ ಅಮೋಘ ಪ್ರದರ್ಶನ ನೀಡಿದರು. 28ರ ಹರೆಯದ ಕ್ರಿಕೆಟಿಗ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಓವರ್ ಬೌಲ್ ಮಾಡಿ ಕೇವಲ 13 ರನ್ ಬಿಟ್ಟುಕೊಟ್ಟರು. ಮ್ಯಾಕ್ಸ್‌ವೆಲ್ ಹೊರತಾಗಿ, ಅವರು ರಜತ್ ಪಾಟಿದಾರ್ ಅವರನ್ನು ಸಹ ಔಟ್ ಮಾಡಿದರು. ಇವರಿಬ್ಬರು ಕೂಡ ಕ್ಲೀನ್ ಬೌಲ್ಡ್ ಆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ