ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ಹಗಲು ರಾತ್ರಿ ಟೆಸ್ಟ್ ಪಂದ್ಯ ಸಂಪೂರ್ಣ ಟೀಮ್ ಇಂಡಿಯಾ ಕಡೆ ವಾಲಿದೆ. ರೋಹಿತ್ (Rohit Sharma) ಪಡೆ ಲಂಕಾಕ್ಕೆ ಗೆಲ್ಲಲು 447 ರನ್ಗಳ ಬೃಹತ್ ಟಾರ್ಗೆಟ್ ನೀಡಿದ್ದು, ಎರಡನೇ ಇನ್ನಿಂಗ್ಸ್ನಲ್ಲೂ ಆರಂಭಿಕ ವೈಫಲ್ಯ ಅನುಭವಿಸಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 28 ರನ್ಗೆ 1 ವಿಕೆಟ್ ಕಳೆದುಕೊಂಡಿದೆ. ಸಿಂಹಳೀಯರಿಗೆ ಗೆಲ್ಲಲು 419 ರನ್ಗಳ ಅವಶ್ಯಕತೆಯಿದೆ. ಲಂಕಾ ಭಾರತೀಯ ಬೌಲರ್ಗಳನ್ನು ಎದುರಿಸಲಾಗದೆ ಇಂದೇ ಆಲೌಟ್ ಆದರೆ ಮೂರೇ ದಿನಕ್ಕೆ ಈ ಟೆಸ್ಟ್ ಪಂದ್ಯ ಕೂಡ ಕೊನೆಗೊಳ್ಳಲಿದೆ. ಪಂದ್ಯ ಹೇಗೆ ಇದ್ದರೂ ಉಭಯ ತಂಡದ ಆಟಗಾರರ ನಡುವೆ ಉತ್ತಮ ಬಾಂಧವ್ಯವಿದೆ. ಇದಕ್ಕೆ ದ್ವಿತೀಯ ಟೆಸ್ಟ್ನಲ್ಲಿ ಟೀಮ್ ಇಂಡಿಯಾ (Team India) ಡಿಕ್ಲೇರ್ ಘೋಷಿಸಿದಾಗ ನಡೆದ ಈ ಘಟನೆಯೇ ಸಾಕ್ಷಿ.
303 ರನ್ ಗಳಿಸಿ ಭಾರತ ಡಿಕ್ಲೇರ್ ಘೋಷಿಸಿದಾಗ ಶ್ರೀಲಂಕಾ ಆಟಗಾರರು ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಆಟಗಾರರು ಬರುತ್ತಿರುವ ಕಡೆಗೆ ಬಂದು ಲಂಕಾದ ಸ್ಟಾರ್ ವೇಗಿ ಸುರಂಗ ಲಕ್ಮಲ್ ಅವರಿಗೆ ಕೈಕೊಟ್ಟು ಶುಭಕೋರಿದರು. ಅಷ್ಟಕ್ಕು ಕೊಹ್ಲಿ-ದ್ರಾವಿಡ್ ಅವರು ಲಕ್ಮಲ್ಗೆ ಶುಭಕೋರಲು ಕಾರಣ ಇದು ಅವರ ಕೊನೇಯ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ.
ಹೌದು, ಸದ್ಯ ಸಾಗುತ್ತಿರುವ ಭಾರತ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಸುರಂಗ ಲಕ್ಮಲ್ ಅವರ ವಿದಾಯದ ಟೆಸ್ಟ್ ಪಂದ್ಯವಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, “ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೇಯ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಸುರಂಗ ಲಕ್ಮಲ್ ಅವರಿಗೆ ಶುಭಕೋರಿದರು” ಎಂದು ಬರೆದುಕೊಂಡಿದೆ.
Head Coach Rahul Dravid and former #TeamIndia Captain @imVkohli congratulate Suranga Lakmal as he is all set to bid adieu to international cricket.@Paytm #INDvSL pic.twitter.com/Vroo0mlQLB
— BCCI (@BCCI) March 13, 2022
ಶ್ರೀಲಂಕಾ ಪರ 70 ಟೆಸ್ಟ್ ಪಂದ್ಯಗಳನ್ನು ಆಡಿರುವ ಲಕ್ಮಲ್ 171 ವಿಕೆಟ್ ಕಿತ್ತಿದ್ದಾರೆ. ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ನಾಲ್ಕನೇ ಬೌಲರ್ ಲಕ್ಮಲ್ ಆಗಿದ್ದಾರೆ. ನಾಲ್ಕು ಬಾರಿ ಐದು ವಿಕೆಟ್ ಸಾಧನೆ ಇವರ ಖಾತೆಯಲ್ಲಿದೆ. ಗೆಲುವಿನೊಂದಿಗೆ ಲಕ್ಮಲ್ ಅವರಿಗೆ ವಿದಾಯ ಹೇಳಲು ಶ್ರೀಲಂಕಾ ಎದುರು ನೋಡುತ್ತಿದೆ. ಆದರೆ, ಲಂಕಾಕ್ಕೆ ಗೆಲುವು ಕಬ್ಬಿಣದ ಕಡಲೆಯಂತಾಗಿದೆ. ಲಂಕಾ ಕೈಯಲ್ಲಿ 9 ವಿಕೆಟ್ಗಳಷ್ಟೆ ಇದ್ದು ಗೆಲುವಿಗೆ ಇನ್ನೂ 419 ರನ್ಗಳ ಅವಶ್ಯಕತೆಯಿದೆ.
ಲಂಕಾಗೆ ಇಂಜುರಿ ಕಾಟ:
ಭಾರತ ಪ್ರವಾಸಕ್ಕೆ ಬಂದ ನಂತರ ಶ್ರೀಲಂಕಾ ತಂಡವು ತನ್ನ ಆಟಗಾರರ ಫಿಟ್ನೆಸ್ ಸಮಸ್ಯೆಯಿಂದ ನಿರಂತರವಾಗಿ ತೊಂದರೆಗೊಳಗಾಗುತ್ತಿದೆ. T20I ಸರಣಿಯಲ್ಲಿ ಪ್ರಮುಖ ಆಟಗಾರರನ್ನು ಗಾಯದಿಂದ ಕಳೆದುಕೊಂಡ ಬಳಿಕ ಟೆಸ್ಟ್ ಸರಣಿಯಲ್ಲೂ ಇದೇ ಸಮಸ್ಯೆ ಎದುರಿಸುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ನ ಎರಡನೇ ದಿನದಂದು ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಗಾಯಗೊಂಡಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ಶ್ರೀಲಂಕಾದ ಮೊದಲ ಆಟಗಾರ ಜಯವಿಕ್ರಮ ಅಲ್ಲ. ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಅವರಿಗಿಂತ ಮೊದಲು, ವೇಗದ ಬೌಲರ್ ಲಹಿರು ಕುಮಾರ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದರು. ಇನ್ನು ಎರಡನೇ ಟೆಸ್ಟ್ಗೆ ಎರಡು ದಿನ ಇರುವಾಗ ಬ್ಯಾಟರ್ ಪಾತುಮ್ ನಿಸಂಕಾ ಕೂಡ ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಬೆಂಗಳೂರು ಟೆಸ್ಟ್ನಿಂದ ಹೊರಗುಳಿದಿದ್ದರು.
Women’s World Cup 2022: ಮುಂದಿನ ಪಂದ್ಯಕ್ಕೆ ಅಭ್ಯಾಸ ಬಿಟ್ಟು ಭಾರತೀಯ ವನಿತೆಯರು ಕಾಣಿಸಿಕೊಂಡಿದ್ದೆಲ್ಲಿ ಗೊತ್ತೇ?
Virat Kohli: ಪಂದ್ಯದ ನಡುವೆ 3 ಕಡೆಗಳಿಂದ ಕೊಹ್ಲಿ ಬಳಿ ಏಕಾಏಕಿ ಮೈದಾನಕ್ಕೆ ನುಗ್ಗಿದ ಗುಂಪು: ವಿಡಿಯೋ