Virat Kohli: ಪಂದ್ಯದ ನಡುವೆ 3 ಕಡೆಗಳಿಂದ ಕೊಹ್ಲಿ ಬಳಿ ಏಕಾಏಕಿ ಮೈದಾನಕ್ಕೆ ನುಗ್ಗಿದ ಗುಂಪು: ವಿಡಿಯೋ

IND vs SL 2nd Test: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಡುವೆ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಸೆಲ್ಫೀ ಕ್ಲಿಕ್ಕಿಸಲು ಚಿನ್ನಸ್ವಾಮಿ ಮೈದಾನಕ್ಕೇ ಅಭಿಮಾನಿಗಳು ಓಡಿ ಬಂದರು. ಫ್ಯಾನ್ಸ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲು ಪೊಲೀಸರಂತು ಹರಸಾಹಸ ಪಟ್ಟರು.

Virat Kohli: ಪಂದ್ಯದ ನಡುವೆ 3 ಕಡೆಗಳಿಂದ ಕೊಹ್ಲಿ ಬಳಿ ಏಕಾಏಕಿ ಮೈದಾನಕ್ಕೆ ನುಗ್ಗಿದ ಗುಂಪು: ವಿಡಿಯೋ
Virat Kohli IND vs SL 2nd Test
Follow us
TV9 Web
| Updated By: Vinay Bhat

Updated on:Mar 14, 2022 | 9:22 AM

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಭಾರತ (India vs Sri Lanka) ಗೆಲುವಿನತ್ತ ದಾಪುಗಾಲಿಡುತ್ತಿದೆ. ಟೀಮ್ ಇಂಡಿಯಾ ಗೆಲುವಿಗೆ ಲಂಕಾನ್ನರ 9 ವಿಕೆಟ್​ಗಳ ಅವಶ್ಯತೆಯಿದ್ದರೆ ಇತ್ತ ಸಿಂಹಳೀಯರಿಗೆ ಜಯ ಸಾಧಿಸಲು ಬರೋಬ್ಬರಿ 419 ರನ್​​ಗಳು ಬೇಕಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಲಂಕಾ 1 ವಿಕೆಟ್ ಕಳೆದುಕೊಂಡಿ 28 ರನ್ ಬಾರಿಸಿದೆ. ಇಂದು ಭಾರತೀಯ ಬೌಲರ್​ಗಳು ಅಬ್ಬರಿಸಿದರೆ ಮೂರೇ ದಿನಕ್ಕೆ ದ್ವಿತೀಯ ಟೆಸ್ಟ್ ಕೊನೆಗೊಳ್ಳಲಿದೆ. ನಿನ್ನೆ ಎರಡನೇ ದಿನದಾಟ ವಿಶೇಷ ಘಟನೆಯೊಂದು ನಡೆಯಿತು. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಜೊತೆ ಸೆಲ್ಫೀ ಕ್ಲಿಕ್ಕಿಸಲು ಚಿನ್ನಸ್ವಾಮಿ ಮೈದಾನಕ್ಕೇ ಅಭಿಮಾನಿಗಳು ಓಡಿ ಬಂದರು. ಫ್ಯಾನ್ಸ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲು ಪೊಲೀಸರಂತು ಹರಸಾಹಸ ಪಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಹೌದು, ವಿರಾಟ್ ಕೊಹ್ಲಿಯ ಎರಡನೇ ಹೋಮ್ ಗ್ರೌಂಡ್ ಎಂದೇ ಹೇಳಲಾಗುವ ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳು ಭಾರತ ಎಂದು ಕೂಗುವುದಕ್ಕಿಂತ ಹೆಚ್ಚು ವಿರಾಟ್ ಕೊಹ್ಲಿ, ಎಬಿಡಿ, ಆರ್​ಸಿಬಿ ಎಂಬ ಕೂಗು ಮೊಳಗಿದ್ದೇ ಹೆಚ್ಚು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಕೂಡ ಅಭಿಮಾನಿಗಳ ಜೊತೆ ಮೈದಾನದಿಂದಲೇ ಕೈ ಸನ್ನೆ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇದ್ದರು. ಕೊಹ್ಲಿ ತಮ್ಮ ಕೈಯಿಂದ ಹಾರ್ಟ್ ಸಿಂಬಲ್ ತೋರಿಸಿ ರೆಸ್ಪಾನ್ಸ್ ನೀಡಿದ್ದರು. ಮತ್ತೊಂದೆಡೆ ಎಬಿಡಿ, ಎಬಿಡಿ ಎಂದು ಕೂಗಿದ ತಕ್ಷಣ ಡಿವಿಲಿಯರ್ಸ್ ಅವರನ್ನು ಬ್ಯಾಟಿಂಗ್​ನಲ್ಲಿ ಇಮಿಟೇಟ್ ಮಾಡಿದರು.

ಇದರ ನಡುವೆ ಭಾನುವಾರ ಪಂದ್ಯದ ಮಧ್ಯೆ ಅಭಿಮಾನಿಗಳು ಸೆಕ್ಯುರಿಟಿ ಕಣ್ಣು ತಪ್ಪಿಸಿ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಲು ನೇರವಾಗಿ ಮೈದಾನಕ್ಕೆ ಓಡಿ ಬಂದರು. ದಿನದಾಟದ ಮುಕ್ತಾಯಕ್ಕೆ ಕೆಲವೇ ಹೊತ್ತು ಬಾಕಿ ಇರುವಾಗ ಮೈದಾನದ ಮೂರು ಕಡೆಯಿಂದ ಏಕಾಏಕಿ ಕೆಲ ಮಂದಿ ಮೈದಾನಕ್ಕೆ ನುಗ್ಗಿದರು. ಇವರನ್ನು ಹೊರಗೆ ಕಳುಹಿಸುವಷ್ಟರಲ್ಲಿ ಪೊಲೀಸರಿಗೆ ಸುಸ್ತಾಯಿತು. ಆದರೆ, ಕೊಹ್ಲಿ ಕೆಲ ಅಭಿಮಾನಿಗಳ ಜೊತೆ ಸೆಲ್ಫಿ ಕೂಡ ಕ್ಲಿಕ್ಕಿಸಿದರು. ಇಲ್ಲಿದೆ ನೋಡಿ ಆ ವಿಡಿಯೋ.

ಜೈಲು ಸೇರಿದ ಯುವಕರು:

ಏಕಾಏಕಿ ವಿರಾಟ್ ಕೊಹ್ಲಿ ಬಳಿಗೆ ನುಗ್ಗಿದ್ದ ಯುವಕರು ಇದೀಗ ಜೈಲು ಪಾಲಾಗಿದ್ದಾರೆ. ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆ ಹಿನ್ನಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲು ಮಾಡಲಾಗಿದ್ದು ನಾಲ್ವರ ಬಂಧನ ಮಾಡಲಾಗಿದೆ. ಇಂದು ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಗುಲ್ಬರ್ಗಾದ ಓರ್ವ  ಹಾಗೂ ಬೆಂಗಳೂರಿನ ಮೂವರು ಎಂದು ಗುರುತಿಸಲಾಗಿದೆ.

ಪ್ರವಾಸಿ ಶ್ರೀಲಂಕಾ ತಂಡದ ಎದುರು ಸವಾರಿ ಮುಂದುವರಿಸಿದ ಭಾರತ ತಂಡ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಿದೆ. ಪ್ರವಾಸಿ ತಂಡಕ್ಕೆ 447 ರನ್ ಗೆಲುವಿನ ಗುರಿ ನೀಡಿರುವ ರೋಹಿತ್ ಶರ್ಮ ಪಡೆ ಎರಡನೇ ಇನಿಂಗ್ಸ್‌ನಲ್ಲೂ ಆರಂಭಿಕ ಆಘಾತ ನೀಡಿದೆ. ಪಂದ್ಯವನ್ನು ಮೂರೇ ದಿನಗಳಲ್ಲಿ ಜಯಿಸಲು ಭಾರತಕ್ಕೆ 9 ವಿಕೆಟ್‌ಗಳಷ್ಟೇ ಬಾಕಿ ಉಳಿದಿವೆ. ದ್ವಿತೀಯ ದಿನದಾಟದಲ್ಲೂ ಬೌಲರ್​​ಗಳು ಮೇಲುಗೈ ಸಾಧಿಸಿದರು. ಒಟ್ಟು 14 ವಿಕೆಟ್‌ ಪತನಗೊಂಡವು. ಶ್ರೀಲಂಕಾ ಒಂದು ವಿಕೆಟಿಗೆ 28 ರನ್‌ ಮಾಡಿದ್ದು, ಸೋಲಿನತ್ತ ಮುಖ ಮಾಡಿದೆ.

ಮೊದಲ ದಿನದಂತ್ಯದಲ್ಲಿ 86 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಲಂಕಾ ತನ್ನ ಉಳಿದ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. ದ್ವಿತೀಯ ಸರದಿಯಲ್ಲಿ ಅಬ್ಬರಿಸಿದ್ದು ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್‌ ಬಾರಿಸಿದ್ದ ಅಯ್ಯರ್‌ ಇಲ್ಲಿ 67 ರನ್‌ (87 ಎಸೆತ, 9 ಬೌಂಡರಿ) ಹೊಡೆದು ಮತ್ತೆ ಟಾಪ್‌ ಸ್ಕೋರರ್‌ ಎನಿಸಿದರು. ರಿಷಭ್‌ ಪಂತ್‌ ತಮ್ಮ ಬಿರುಸಿನ ಆಟದ ಮೂಲಕ ಧಾರಾಳ ರಂಜನೆ ಒದಗಿಸಿದರು. ಕೇವಲ 28 ಎಸೆತಗಳಿಂದ ಅವರ ಅರ್ಧ ಶತಕ ಪೂರ್ತಿಗೊಂಡಿತು. ಭಾರತ 303 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಕ್ಕೆ ಗೆಲ್ಲಲು447 ರನ್‌ ಟಾರ್ಗೆಟ್ ನೀಡಿತು.

IND vs SL Test: ಮರೆಯಾಗುತ್ತಿದೆ ಟೆಸ್ಟ್ ಕ್ರಿಕೆಟ್​ನ ನೈಜ್ಯ ಬ್ಯಾಟಿಂಗ್: ಮತ್ತೆ ಮೂರೇ ದಿನಕ್ಕೆ ಮುಗಿಯುತ್ತಾ ದ್ವಿತೀಯ ಟೆಸ್ಟ್?

IPL 2022: ಪ್ರತಿ ಐಪಿಎಲ್​ನಲ್ಲೂ ಕೊನೆ ಗಳಿಗೆಯಲ್ಲಿ ಕೈಕೊಡುವ ಆಂಗ್ಲ ಕ್ರಿಕೆಟಿಗರನ್ನು ನಂಬುವುದಾದರೂ ಹೇಗೆ?

Published On - 8:53 am, Mon, 14 March 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್