IPL 2022: ಪ್ರತಿ ಐಪಿಎಲ್​ನಲ್ಲೂ ಕೊನೆ ಗಳಿಗೆಯಲ್ಲಿ ಕೈಕೊಡುವ ಆಂಗ್ಲ ಕ್ರಿಕೆಟಿಗರನ್ನು ನಂಬುವುದಾದರೂ ಹೇಗೆ?

IPL 2022: ಆ್ಯಶಸ್ ಸರಣಿಯ ಸೋಲು ಕೂಡ ಆಂಗ್ಲ ಆಟಗಾರರ ಹಿಂದೆ ಸರಿಯಲು ಒಂದು ಕಾರಣ. ಆಸ್ಟ್ರೇಲಿಯ ಕಳೆದ ತಿಂಗಳು ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.

IPL 2022: ಪ್ರತಿ ಐಪಿಎಲ್​ನಲ್ಲೂ ಕೊನೆ ಗಳಿಗೆಯಲ್ಲಿ ಕೈಕೊಡುವ ಆಂಗ್ಲ ಕ್ರಿಕೆಟಿಗರನ್ನು ನಂಬುವುದಾದರೂ ಹೇಗೆ?
ಇಂಗ್ಲೆಂಡ್ ತಂಡ
Follow us
TV9 Web
| Updated By: Vinay Bhat

Updated on: Mar 14, 2022 | 6:47 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕೆ ತಕ್ಕಂತೆ ಎಲ್ಲಾ ತಂಡಗಳು ಸಿದ್ದತೆ ನಡೆಸಿಕೊಂಡಿವೆ. ಆದರೆ ಅದಕ್ಕೂ ಮುನ್ನ ಕೆಲವು ತಂಡಗಳು ಆಟಗಾರರ ಗಾಯದಿಂದ ತತ್ತರಿಸಿವೆ. ಗಾಯದ ಸಮಸ್ಯೆಯಿಂದಾಗಿ ಹಲವು ಪ್ರಮುಖ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ತಂಡದ ಯೋಜನೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆ ಸಮಯದಲ್ಲಿ ಟೂರ್ನಿಯಿಂದ ಹೊರಹೋಗುವ ಆಟಗಾರನಿಗೆ ಸಮಾನವಾದ ಇನ್ನೊಬ್ಬ ಆಟಗಾರನನ್ನು ಹುಡುಕುವುದಾದರೂ ಹೇಗೆ? ಇದು ಎಲ್ಲಾ ಫ್ರಾಂಚೈಸಿಗಳು ಎದುರಿಸುತ್ತಿರುವ ಮುಖ್ಯ ಸಮಸ್ಯೆಯಾಗಿದೆ. ವಿಶೇಷವಾಗಿ ಇಂಗ್ಲೆಂಡ್ ಕ್ರಿಕೆಟಿಗರಿಂದ ಐಪಿಎಲ್ ಫ್ರಾಂಚೈಸಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಜೇಸನ್ ರಾಯ್ ನಂತರ ಈಗ ಅಲೆಕ್ಸ್ ಹೇಲ್ಸ್ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೆಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡಬೇಕಿತ್ತು. ಜೇಸನ್ ರಾಯ್ ಅವರನ್ನು ಗುಜರಾತ್ ಟೈಟನ್ಸ್ ಖರೀದಿಸಿತ್ತು. ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಜೋಫ್ರಾ ಆರ್ಚರ್ ಅವರಂತೆ ಗಾಯಗೊಂಡಿದ್ದು ಈ ಐಪಿಎಲ್​ನಲ್ಲಿ ಆಡುವುದು ಅನುಮಾನವಾಗಿದೆ.

ಹೇಲ್ಸ್ ಮತ್ತು ರಾಯ್ ಅವರಂತೆ, ವುಡ್ ಗಾಯದ ಕಾರಣ ನೀಡಿ IPL ನಿಂದ ಹಿಂದೆ ಸರಿಯಬಹುದು. ಇವರನ್ನು ಲಕ್ನೋ ಸೂಪರ್ ಜೈಂಟ್ಸ್ 7.5 ಕೋಟಿಗೆ ಖರೀದಿಸಿದ್ದು. ವುಡ್ ನಿರ್ಧಾರದ ಮೇಲೆ ಲಕ್ನೋ ತನ್ನ ಯೋಜನೆಗಳನ್ನು ಬದಲಿಸಬೇಕಾಗಿದೆ. ಅಲ್ಲದೆ ವುಡ್ ಅಲಭ್ಯತೆ ತಂಡದ ಮೇಲೆ ಗಾಡ ಪರಿಣಾಮ ಬೀರಬಹುದಾಗಿದೆ. ಆಂಗ್ಲ ಕ್ರಿಕೆಟಿಗರ ಈ ವರ್ತನೆ ಈ ಮೊದಲೆನಲ್ಲ ಕಳೆದ ವರ್ಷವೂ ಹಲವು ಆಂಗ್ಲ ಕ್ರಿಕೆಟಿಗರು ವಿವಿದ ಕಾರಣ ನೀಡಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.

ಅಸಂಬದ್ಧ ಕಾರಣಗಳು ಆಟಗಾರರನ್ನು ಕೋಟಿ ಕೋಟಿ ನೀಡಿ ಖರೀದಿಸುವ ಫ್ರಾಂಚೈಸಿಯೂ ಅವರ ಸಾಮಥ್ರ್ಯಕ್ಕೆ ತಕ್ಕಂತೆ ಕೆಲವು ಯೋಜನೆಗಳನ್ನು ಮಾಡುತ್ತದೆ. ಆದರೆ ಕೆಲವೊಮ್ಮ ತುರ್ತು ಅಥವಾ ಇಂಜುರಿಯಿಂದ ಆಟಗಾರರು ಐಪಿಎಲ್​ನಿಂದ ಹಿಂದೆ ಸರಿದರೆ ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಇದನ್ನೇ ಕಾರಣವಾಗಿಟ್ಟುಕೊಳ್ಳುವ ಆಂಗ್ಲ ಕ್ರಿಕೆಟಿಗನ್ನು ಭವಿಷ್ಯದಲ್ಲಿ ಖರೀದಿಸುವ ಮೊದಲು ಫ್ರಾಂಚೈಸಿಗಳು ಖಂಡಿತವಾಗಿಯೂ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಫ್ರಾಂಚೈಸಿಯ ಕೆಲವು ಮೂಲಗಳು ಇನ್‌ಸೈಟ್ ಸ್ಪೋರ್ಟ್ಸ್‌ಗೆ ತಿಳಿಸಿವೆ.

ಅಸಮಾಧಾನಗೊಂಡಿರುವ ಫ್ರಾಂಚೈಸಿಗಳು ಆಂಗ್ಲ ಆಟಗಾರರು ಮತ್ತೆ ಐಪಿಎಲ್​ಗೆ ವಾಪಸಾತಿ ಮಾಡುವುದು ದೊಡ್ಡ ವಿಚಾರವೆನ್ನಲ್ಲ. ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುವ ಅವಕಾಶವಿರುವಾಗ ಯಾವ ಆಟಗಾರನು ಈ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಫ್ರಾಂಚೈಸಿಗಳು ಅವರ ನಡವಳಿಕೆಯಿಂದ ಅತೃಪ್ತರಾಗಿದ್ದಾರೆ. ಈಗಾಗಲೇ ಐಪಿಎಲ್​ನಿಂದ ಹಿಂದೆ ಸರಿದಿರುವ ರಾಯ್ ಮತ್ತು ಹೇಲ್ಸ್ ಬಯೋಬಬಲ್ ಕಾರಣವನ್ನು ನೀಡುತ್ತಿದ್ದಾರೆ. ಈಗ ಐಪಿಎಲ್ ತೊರೆಯುತ್ತಿರುವ ಇವರಿಗೆ ಹರಾಜಿಗೂ ಮೊದಲು ನಿಯಮಗಳು ತಿಳಿದಿರಲಿಲ್ಲವೇ? ಎಂದು ಫ್ರಾಂಚೈಸಿಗಳು ಮತ್ತು ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಆಂಗ್ಲ ಆಟಗಾರರ ಮೇಲೆ ನೆಗೆಟಿವ್ ಪರಿಣಾಮ ಬೀರುವುದಂತೂ ಖಂಡಿತ.

ಆಶಸ್ ಸೋಲು ಪ್ರಮುಖ ಕಾರಣ ಆ್ಯಶಸ್ ಸರಣಿಯ ಸೋಲು ಕೂಡ ಆಂಗ್ಲ ಆಟಗಾರರ ಹಿಂದೆ ಸರಿಯಲು ಒಂದು ಕಾರಣ. ಆಸ್ಟ್ರೇಲಿಯ ಕಳೆದ ತಿಂಗಳು ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಆ ಸಂದರ್ಭದಲ್ಲಿ ಆಂಗ್ಲ ಕ್ರಿಕೆಟಿಗರ ಮೇಲೆ ದೇಶದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಶಸ್​ನಲ್ಲಿ ಆಟಗಾರರ ಕಳಪೆ ಪ್ರದರ್ಶನಕ್ಕೆ ಐಪಿಎಲ್ ಕಾರಣೌಎಂದು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗರು ಆರೋಪಿಸಿದ್ದರು. ಹೀಗಾಗಿ ಆಂಗ್ಲ ಆಟಗಾರರು ಐಪಿಎಲ್​ನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಇದರಿಂದ ಫ್ರಾಂಚೈಸಿಗಳು ತಲೆ ಕೇಡಿಸಿಕೊಳ್ಳುವಂತ್ತಾಗಿದೆ.

ಇದನ್ನೂ ಓದಿ:IND vs SL: ಪಂತ್ ಬ್ಯಾಟಿಂಗ್ ಅಬ್ಬರಕ್ಕೆ ಕಪಿಲ್ ದೇವ್ ಅವರ 40 ವರ್ಷದ ಹಳೆಯ ದಾಖಲೆ ಉಡೀಸ್..!