IND vs SL: ಬರೋಬ್ಬರಿ 5 ವರ್ಷಗಳ ಬಳಿಕ ಈ ವಿಚಾರದಲ್ಲಿ ಕೊಹ್ಲಿಗೆ ಶಾಕ್ ಕೊಟ್ಟ ಶ್ರೀಲಂಕಾ..!

Virat Kohli: 2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೊಹ್ಲಿ 50ರ ಸರಾಸರಿಯಿಂದ 49.55ಕ್ಕೆ ಕುಸಿದಿರುವುದು ಕೂಡ ಕಾಕತಾಳೀಯ. ಸದ್ಯ ಕೊಹ್ಲಿ ರನ್ ಸರಾಸರಿ 49.95 ಆಗಿದೆ.

IND vs SL: ಬರೋಬ್ಬರಿ 5 ವರ್ಷಗಳ ಬಳಿಕ ಈ ವಿಚಾರದಲ್ಲಿ ಕೊಹ್ಲಿಗೆ ಶಾಕ್ ಕೊಟ್ಟ ಶ್ರೀಲಂಕಾ..!
ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Mar 13, 2022 | 8:59 PM

ವಿರಾಟ್ ಕೊಹ್ಲಿ (Virat Kohli) ಕಳೆದ ಕೆಲವು ವರ್ಷಗಳಿಂದ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಪ್ರತಿ ಫಾರ್ಮ್ಯಾಟ್‌ನಲ್ಲಿ ಅದೇ ಕಳಪೆ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಕೊಹ್ಲಿ ಬ್ಯಾಟ್‌ನಿಂದ ದೊಡ್ಡ ಸ್ಕೋರ್‌ಗಳನ್ನು ಗಳಿಸುತ್ತಿಲ್ಲ. 71 ನೇ ಶತಕಕ್ಕೆ ಬರೋಬ್ಬರಿ ಎರಡೂವರೆ ವರ್ಷಗಳಿಂದ ಕಾಯಬೇಕಾಗಿದೆ. ಶ್ರೀಲಂಕಾ ಎದುರುಗಿನ ಸರಣಿ (India vs Sri Lanka)ಯಲ್ಲಿ ಕೊಹ್ಲಿಯ ಶತಕಗಳ ಬರ ಮುಕ್ತಾಯಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಎರಡೂ ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿ ಕೊಹ್ಲಿ ಬೇಗನೆ ಪೆವಿಲಿಯನ್‌ ಸೇರಿದರು. ಜೊತೆಗೆ 71ನೇ ಶತಕದ ನಿರೀಕ್ಷೆಯೂ ಹಾಗೆಯೇ ಉಳಿಯಿತು. ಐದು ವರ್ಷಗಳ ನಂತರ ಶ್ರೀಲಂಕಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಲೆಕ್ಕಾಚಾರವನ್ನು ಬದಲಾಯಿಸಿತು. ಈ ಬಾರಿ ವಿರಾಟ್​ಗೆ ಭಾರೀ ಹಿನ್ನಡೆಯಾಗಿದ್ದು, ಟೆಸ್ಟ್ ಸರಾಸರಿಯನ್ನು 50ಕ್ಕಿಂತ ಕೆಳಗಿಳಿಸಿದೆ.

ತನ್ನ ಎರಡನೇ ತವರು ಮೈದಾನದಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದರಿಂದ್ದ ಇಲ್ಲಿ ಅವರು ಶತಕ ಬಾರಿಸುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಅದಕ್ಕೆ ಪೂರಕವೆಂಬಂತೆ ಶ್ರೀಲಂಕಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ವಿರಾಟ್‌ಗೆ ಎರಡು ದಿನಗಳಲ್ಲಿ ಎರಡು ಬಾರಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಲಾಯಿತು. ಆದರೆ ಕೊಹ್ಲಿ ಎರಡು ಬಾರಿಯೂ ಶತಕ ಗಳಿಸುವಲ್ಲಿ ವಿಫಲರಾದರು.

5 ವರ್ಷಗಳ ನಂತರ ಸರಾಸರಿ 50 ಕ್ಕಿಂತ ಕಡಿಮೆ ಈ ಪಂದ್ಯದಲ್ಲಿ ಕೋಹ್ಲಿ ಅರ್ಧ ಶತಕ ಕೂಡ ಮಾಡಲಾಗಲಿಲ್ಲ. ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 50 ರನ್ ಗಳಿಸಲು ವಿಫಲರಾದರು. ಇದು ಕೊಹ್ಲಿಯ ಅತ್ಯುತ್ತಮ ವೃತ್ತಿಜೀವನದ ಅಂಕಿಅಂಶಗಳ ಮೇಲೆ ಆಳವಾದ ಪರಿಣಾಮ ಬೀರಿದೆ. ಬೆಂಗಳೂರು ಟೆಸ್ಟ್‌ನಲ್ಲಿ ಕೊಹ್ಲಿ ತನ್ನ ಸರಾಸರಿಯನ್ನು ಹಾಗೆಯೇ ಕಾಪಾಡಿಕೊಳ್ಳಲು 43 ರನ್‌ಗಳು ಬೇಕಾಗಿದ್ದವು. ಆದರೆ, ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 36 ರನ್ (23, 13) ಗಳಿಸಿದರು. ಇದು ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿಯನ್ನು 50ಕ್ಕಿಂತ ಕಡಿಮೆಗೆ ಇಳಿಸಿತು. ಒಮ್ಮೆ 55 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದ ಕೊಹ್ಲಿ ಐದು ವರ್ಷಗಳಲ್ಲಿ ಮೊದಲ ಬಾರಿಗೆ 50ಕ್ಕಿಂತ ಕೆಳಗೆ ಇಳಿದಿದ್ದಾರೆ.

2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೊಹ್ಲಿ 50ರ ಸರಾಸರಿಯಿಂದ 49.55ಕ್ಕೆ ಕುಸಿದಿರುವುದು ಕೂಡ ಕಾಕತಾಳೀಯ. ಸದ್ಯ ಕೊಹ್ಲಿ ರನ್ ಸರಾಸರಿ 49.95 ಆಗಿದೆ.

ಅದ್ಧೂರಿ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದ ಕೊಹ್ಲಿ ತಮ್ಮ ನೆಚ್ಚಿನ ಮೈದಾನದಲ್ಲಿ ಎರಡೂ ಇನ್ನಿಂಗ್ಸ್​ಗಳಲ್ಲಿ ಎಡವಿದರು. ಮೊದಲ ಇನ್ನಿಂಗ್ಸ್‌ನಲ್ಲಂತೂ ಕೊಹ್ಲಿ ಮತ್ತೊಮ್ಮೆ ಕಡಿಮೆ ಬೌನ್ಸ್‌ನಿಂದ ವಿಕೆಟ್ ಕಳೆದುಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಧನಂಜಯ ಡಿಸಿಲ್ವಾ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಅವರ ಶಾರ್ಟ್ ಬಾಲ್‌ನಲ್ಲಿ ಔಟಾದರು. ಸದ್ಯ ಕೊಹ್ಲಿ ತಮ್ಮ ಸರಾಸರಿಯನ್ನು 50ಕ್ಕೂ ಅಧಿಕಕ್ಕೆ ಏರಿಸಲು ಜುಲೈವರೆಗೆ ಕಾಯಬೇಕಿದೆ. ಭಾರತ ತಂಡ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲದರೂ ಕೊಹ್ಲಿ ಶತಕ ಗಳಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

Published On - 8:58 pm, Sun, 13 March 22