IND vs SL Test: ಮರೆಯಾಗುತ್ತಿದೆ ಟೆಸ್ಟ್ ಕ್ರಿಕೆಟ್​ನ ನೈಜ್ಯ ಬ್ಯಾಟಿಂಗ್: ಮತ್ತೆ ಮೂರೇ ದಿನಕ್ಕೆ ಮುಗಿಯುತ್ತಾ ದ್ವಿತೀಯ ಟೆಸ್ಟ್?

India vs Sri Lanka Pink Ball Test: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ- ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯ ಇದೇ ಸಾಲಿಗೆ ಸೇರಿವಂತೆ ಗೋಚರಿಸುತ್ತದೆ. ಮೊದಲ ಟೆಸ್ಟ್ ಕದನ ಮೂರೇ ದಿನಕ್ಕೆ ಅಂತ್ಯ ಕಂಡಿತ್ತು. ಇದುಕೂಡ ಅದೇರೀತಿ ಕೊನೆಗೊಳ್ಳುವಂತೆ ಕಾಣುತ್ತಿದೆ.

IND vs SL Test: ಮರೆಯಾಗುತ್ತಿದೆ ಟೆಸ್ಟ್ ಕ್ರಿಕೆಟ್​ನ ನೈಜ್ಯ ಬ್ಯಾಟಿಂಗ್: ಮತ್ತೆ ಮೂರೇ ದಿನಕ್ಕೆ ಮುಗಿಯುತ್ತಾ ದ್ವಿತೀಯ ಟೆಸ್ಟ್?
IND vs SL 2nd Test
Follow us
TV9 Web
| Updated By: Vinay Bhat

Updated on: Mar 14, 2022 | 7:34 AM

ಇಂದಿನ ದಿನಗಳಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ (Test Cricket) ಪಂದ್ಯಗಳು ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ಕೆಲ ಕ್ರಿಕೆಟ್ ಪಂಡಿತರ ವಾದ. ಇದಕ್ಕೆ ಕಾರಣ ಕೂಡ ಅವರು ನೀಡಿದ್ದಾರೆ. ಐದು ದಿನಗಳ ಟೆಸ್ಟ್ ಪಂದ್ಯ ಎರಡು ಅಥವಾ ಮೂರು ದಿನದಲ್ಲೇ ಮುಕ್ತಾಯಗೊಳ್ಳುವುದು ಅಥವಾ ಈಗ ತಂಡದಲ್ಲಿರುವ ಬ್ಯಾಟರ್​ಗಳಿಗೆ ತಾಳ್ಮೆಯೇ ಇಲ್ಲ ಎಂಬಂತೆ, ಟೆಸ್ಟ್​ ಕ್ರಿಕೆಟ್​ನ ಕಲೆ ಮರೆತಂತೆ ಆಟ ಆಡುತ್ತಿದ್ದಾರೆ ಎಂಬುದು ಕೆಲ ವರ್ಗದವರ ಅಭಿಪ್ರಾಯ. ಇದಕ್ಕೆ ಸಾಕ್ಷಿ ಎಂಬಂತೆ ಅನೇಕ ಟೆಸ್ಟ್ ಪಂದ್ಯಗಳು ನಡೆದಿವೆ. ಸದ್ಯ ಬೆಂಗಳೂರಿನ ಚಿನ್ನಸ್ವಾಮಿ (Chinnswami) ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ- ಶ್ರೀಲಂಕಾ (India vs Sri Lanka) ಎರಡನೇ ಟೆಸ್ಟ್ ಪಂದ್ಯ ಇದೇ ಸಾಲಿಗೆ ಸೇರಿವಂತೆ ಗೋಚರಿಸುತ್ತದೆ. ಮೊದಲ ಟೆಸ್ಟ್ ಕದನ ಮೂರೇ ದಿನಕ್ಕೆ ಅಂತ್ಯ ಕಂಡಿತ್ತು. ಇದುಕೂಡ ಅದೇರೀತಿ ಕೊನೆಗೊಳ್ಳುವಂತೆ ಕಾಣುತ್ತಿದೆ. ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 30 ವಿಕೆಟ್​ಗಳು ಉರುಳಿದ್ದು, ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 28 ರನ್​ಗೆ 1 ವಿಕೆಟ್ ಕಳೆದುಕೊಂಡಿದೆ. ಸಿಂಹಳೀಯರಿಗೆ ಗೆಲ್ಲಲು 419 ರನ್​ಗಳ ಅವಶ್ಯಕತೆಯಿದೆ. ಭಾರತೀಯ ಬೌಲರ್​ಗಳು ಬೆಂಕಿಯ ಚೆಂಡು ಉಗುಳುತ್ತಿದ್ದು ನಿತ್ತು ಆಡುವ ಬ್ಯಾಟರ್​ಗಳು ಇಲ್ಲದ ಕಾರಣ ಇಂದೇ ಭಾರತದ ಜಯದೊಂದಿಗೆ ಎರಡನೇ ಟೆಸ್ಟ್ ಮುಕ್ತಾಯಗೊಳ್ಳುವ ಸಂಭವವಿದೆ.

ದ್ವಿತೀಯ ದಿನದಾಟದಲ್ಲೂ ಬೌಲರ್​​ಗಳು ಮೇಲುಗೈ ಸಾಧಿಸಿದರು. ಒಟ್ಟು 14 ವಿಕೆಟ್‌ ಪತನಗೊಂಡವು. ಶ್ರೀಲಂಕಾ ಒಂದು ವಿಕೆಟಿಗೆ 28 ರನ್‌ ಮಾಡಿದ್ದು, ಸೋಲಿನತ್ತ ಮುಖ ಮಾಡಿದೆ. ಭಾರತದ 252 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬಾಗಿ ಶ್ರೀಲಂಕಾ 109ಕ್ಕೆ ಕುಸಿಯಿತು. ಮೊದಲ ದಿನದಂತ್ಯದಲ್ಲಿ 86 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಲಂಕಾ ತನ್ನ ಉಳಿದ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. 2ನೇ ದಿನದಾಟದ 5.5 ಓವರ್‌ಗಳಲ್ಲಿ ಉಳಿದ ಎಲ್ಲಾ ವಿಕೆಟ್‌ಗಳನ್ನು ಭಾರತೀಯ ಬೌಲಿಂಗ್ ಪಡೆ ಕಬಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು. ಜಸ್​​ಪ್ರೀತ್ 5 ವಿಕೆಟ್ ಕಿತ್ತ ಸಾಧನೆ ಮಾಡಿದರು.

ನಂತರ ಭಾರತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ, ರೋಹಿತ್ ಶರ್ಮಾ 48ನ್‌ಗಳಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದರು. ಇನ್ನು ಉತ್ತಮವಾಗಿ ಆಡುತ್ತಿದ್ದ ಹನುಮ ವಿಹಾರಿ ಕೂಡ 35 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ನಿರಾಸೆ ಅನುಭವಿಸಿದ್ದು 13 ರನ್‌ಗಳಿಗೆ ಔಟ್ ಆದರು. ದ್ವಿತೀಯ ಸರದಿಯಲ್ಲಿ ಅಬ್ಬರಿಸಿದ್ದು ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್‌ ಬಾರಿಸಿದ್ದ ಅಯ್ಯರ್‌ ಇಲ್ಲಿ 67 ರನ್‌ (87 ಎಸೆತ, 9 ಬೌಂಡರಿ) ಹೊಡೆದು ಮತ್ತೆ ಟಾಪ್‌ ಸ್ಕೋರರ್‌ ಎನಿಸಿದರು.

ರಿಷಭ್‌ ಪಂತ್‌ ತಮ್ಮ ಬಿರುಸಿನ ಆಟದ ಮೂಲಕ ಧಾರಾಳ ರಂಜನೆ ಒದಗಿಸಿದರು. ಕೇವಲ 28 ಎಸೆತಗಳಿಂದ ಅವರ ಅರ್ಧ ಶತಕ ಪೂರ್ತಿಗೊಂಡಿತು. ಇದು ಭಾರತದ ಟೆಸ್ಟ್‌ ಚರಿತ್ರೆಯ ಅತೀ ವೇಗದ ಫಿಫ್ಟಿ. ಕಪಿಲ್‌ದೇವ್‌ 1982ರ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ಥಾನ ವಿರುದ್ಧ 30 ಎಸೆತಗಳಲ್ಲಿ ಅರ್ಧ ಶತಕ ಹೊಡೆದದ್ದು ಭಾರತದ ದಾಖಲೆಯಾಗಿತ್ತು. 40 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿತು. ಇನ್ನುಳಿದಂತೆ ಮೊಹಮ್ಮದ್ ಶಮಿ (16*), ರವಿಚಂದ್ರನ್ ಅಶ್ವಿನ್ (13) ಹಾಗೂ ಅಕ್ಷರ್ ಪಟೇಲ್ (9) ರನ್ ಗಳಿಸಿದರು.

ಅಂತಿಮವಾಗಿ ಭಾರತ 9 ವಿಕೆಟ್‌ಗೆ 303 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಹೀಗಾಗಿ ಶ್ರೀಲಂಕಾ ತಂಡ 447 ರನ್‌ಗಳ ಬೃಹತ್ ಗುರಿಯನ್ನು ಪಡೆದಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದೆ. ಆದರೆ ಎರಡನೇ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಲಹಿರು ತಿರಿಮನ್ನೆ ಅವರನ್ನು ಬೂಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ನಂತರ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಮುಂದುವರಿಸಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

IPL 2022: ಪ್ರತಿ ಐಪಿಎಲ್​ನಲ್ಲೂ ಕೊನೆ ಗಳಿಗೆಯಲ್ಲಿ ಕೈಕೊಡುವ ಆಂಗ್ಲ ಕ್ರಿಕೆಟಿಗರನ್ನು ನಂಬುವುದಾದರೂ ಹೇಗೆ?

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ