Jasprit Bumrah: 5 ವಿಕೆಟ್ ಉರುಳಿಸಿ ವಿಶೇಷ ಸಾಧಕರ ಪಟ್ಟಿಗೆ ಸೇರಿದ ಜಸ್ಪ್ರೀತ್ ಬುಮ್ರಾ
India vs Sri Lanka 2nd Test: ಟೀಮ್ ಇಂಡಿಯಾದ 11 ಬೌಲರುಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದು ಮಿಂಚಿದ್ದರು. ಅವರೆಂದರೆ...
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ (India vs Sri Lanka 2nd Test) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದರು. ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಬುಮ್ರಾ ಶ್ರೀಲಂಕಾ ತಂಡವನ್ನು ಕೇವಲ 109 ರನ್ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಗೂ ಟೀಮ್ ಇಂಡಿಯಾ ವೇಗಿ ಸೇರ್ಪಡೆಯಾದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಭಾರತ 12ನೇ ಬೌಲರ್ ಎನಿಸಿಕೊಂಡರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ ಪಂದ್ಯಕ್ಕೂ ಮುನ್ನ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 295 ವಿಕೆಟ್‌ಗಳನ್ನು ಪಡೆದಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 120 ವಿಕೆಟ್, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 113 ವಿಕೆಟ್ ಮತ್ತು ಟಿ20ಯಲ್ಲಿ 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಲಂಕಾ ವಿರುದ್ದದ ಪಂದ್ಯದಲ್ಲಿ 10 ಓವರ್ಗಳಲ್ಲಿ ಕೇವಲ 24 ರನ್ ನೀಡಿ 5 ವಿಕೆಟ್ ಉರುಳಿಸುವ ಮೂಲಕ ತಮ್ಮ 300 ವಿಕೆಟ್ ಪೂರೈಸಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ 11 ಬೌಲರುಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದು ಮಿಂಚಿದ್ದರು. ಅವರೆಂದರೆ…
1- ಅನಿಲ್ ಕುಂಬ್ಳೆ (956 ವಿಕೆಟ್)
2- ಹರ್ಭಜನ್ ಸಿಂಗ್ (711 ವಿಕೆಟ್)
3- ಕಪಿಲ್ ದೇವ್ (687 ವಿಕೆಟ್)
4- ಅಶ್ವಿನ್ (648* ವಿಕೆಟ್)
5- ಜಹೀರ್ ಖಾನ್ (610 ವಿಕೆಟ್)
6- ಜಾವಗಲ್ ಶ್ರೀನಾಥ್ (551 ವಿಕೆಟ್)
7- ರವೀಂದ್ರ ಜಡೇಜಾ (477* ವಿಕೆಟ್)
8- ಇಶಾಂತ್ ಶರ್ಮಾ (434 ವಿಕೆಟ್)
9- ಮೊಹಮ್ಮದ್ ಶಮಿ (378* ವಿಕೆಟ್)
10- ಅಜಿತ್ ಅಗರ್ಕರ್ (349 ವಿಕೆಟ್)
11- ಇರ್ಫಾನ್ ಪಠಾಣ್ (301 ವಿಕೆಟ್)
ಇದೀಗ 2016 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಜಸ್ಪ್ರೀತ್ ಬುಮ್ರಾ 180 ಇನಿಂಗ್ಸ್ಗಳಿಂದ 300 ವಿಕೆಟ್ ಕಬಳಿಸಿ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ ಒಟ್ಟು 1347 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IND vs SL: Jasprit Bumrah completed 300 Wickets)