AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ತಂಡದ ಉಪನಾಯಕ ಯಾರು..?

Ipl 2022 RCB Vice Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್.

IPL 2022: RCB ತಂಡದ ಉಪನಾಯಕ ಯಾರು..?
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 13, 2022 | 4:50 PM

ಐಪಿಎಲ್ ಸೀಸನ್ 15 ಗಾಗಿ (IPL 2022) ಆರ್​ಸಿಬಿ (RCB)ತಂಡವು ನಾಯಕನನ್ನು ಘೋಷಿಸಿದೆ. ನಿರೀಕ್ಷೆಯಂತೆ ಫಾಫ್ ಡುಪ್ಲೆಸಿಸ್​ಗೆ ನಾಯಕನ ಪಟ್ಟ ಸಿಕ್ಕಿದೆ. ಇದರ ಬೆನ್ನಲ್ಲೇ ಹುಟ್ಟಿಕೊಂಡ ಮತ್ತೊಂದು ಪ್ರಶ್ನೆ ಎಂದರೆ ಯಾರು ಉಪನಾಯಕ ಎಂಬುದು. ಸಾಮಾನ್ಯವಾಗಿ ಐಪಿಎಲ್​ನಲ್ಲಿ ಉಪನಾಯಕನ ಘೋಷಣೆ ಮಾಡುವುದಿಲ್ಲ. ಇದಾಗ್ಯೂ ಎಲ್ಲಾ ತಂಡಗಳಲ್ಲೂ ಉಪನಾಯಕ ಇರುತ್ತಾರೆ. ಇದೇ ಆರ್​ಸಿಬಿ ತಂಡಕ್ಕೆ ಕಳೆದ ಕೆಲ ಸೀಸನ್​ಗಳಲ್ಲಿ ಎಬಿ ಡಿವಿಲಿಯರ್ಸ್​ ಉಪನಾಯಕರಾಗಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂದರೆ ನಾಯಕನ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ಆಟಗಾರನನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆರ್​ಸಿಬಿ ಯಾರನ್ನು ಉಪನಾಯಕನ್ನಾಗಿ ಆಯ್ಕೆ ಮಾಡಲಿದೆ ಎಂಬುದೇ ಪ್ರಶ್ನೆ.

ಏಕೆಂದರೆ ತಂಡದಲ್ಲಿ ಅತಿರಥ-ಮಹಾರಥರಂತಹ ಆಟಗಾರರಿದ್ದಾರೆ. ಅಂದರೆ ನಾಯಕತ್ವ ಬೇಡ ಎಂದಿರುವ ವಿರಾಟ್ ಕೊಹ್ಲಿ ಒಂದೆಡೆಯಾದರೆ, ನಾಯಕತ್ವನ್ನು ನಿರೀಕ್ಷಿಸಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ದಿನೇಶ್ ಕಾರ್ತಿಕ್ ಮತ್ತೊಂದೆಡೆ ಇದ್ದಾರೆ. ಹೀಗಾಗಿ ಇವರಲ್ಲಿ ಒಬ್ಬರಿಗೆ ಉಪನಾಯಕನ ಸ್ಥಾನ ಸಿಗಬಹುದು. ಇಲ್ಲಿ ವಿರಾಟ್ ಕೊಹ್ಲಿ ತಂಡದ ಕ್ಯಾಪ್ಟನ್ಸಿ ಬೇಡ ಎಂದಿರುವ ಕಾರಣ ಉಪನಾಯಕನಾಗಿ ಸ್ಥಾನ ಅಲಂಕರಿಸುವುದು ಕೂಡ ಅನುಮಾನ.

ಇನ್ನೊಂದೆಡೆ ನಾಯಕನಾಗಿ ವಿದೇಶಿ ಆಟಗಾರನ ಆಯ್ಕೆ ಮಾಡಿರುವ ಆರ್​ಸಿಬಿ ಉಪನಾಯಕನಾಗಿ ಭಾರತೀಯ ಆಟಗಾರನಿಗೆ ಮಣೆ ಹಾಕಬಹುದು. ಏಕೆಂದರೆ ಐಪಿಎಲ್​ನಲ್ಲಿ ನಾಯಕ ಹಾಗೂ ಉಪನಾಯಕನ ಆಯ್ಕೆ ವೇಳೆ ಗಮನಿಸಲಾಗುವ ಮುಖ್ಯ ವಿಷಯ ಎಂದರೆ ಇಡೀ ಟೂರ್ನಿಗೆ ಲಭ್ಯರಿರಲಿದ್ದಾರಾ ಎಂಬುದು. ಅಂದರೆ ಸೌತ್ ಆಫ್ರಿಕಾ ತಂಡದಿಂದ ನಿವೃತ್ತಿ ಹೊಂದಿರುವ ಫಾಫ್ ಡುಪ್ಲೆಸಿಸ್​ಗೆ ನಾಯಕನ ಸ್ಥಾನ ನೀಡಲಾಗಿದೆ. ಇನ್ನು ಉಪನಾಯಕನಾಗಿ ಭಾರತೀಯ ಆಟಗಾರನಿಗೆ ಮಣೆಹಾಕಬಹುದು. ಏಕೆಂದರೆ ಭಾರತೀಯ ಆಟಗಾರರು ಇಡೀ ಟೂರ್ನಿಗೆ ಲಭ್ಯರಿರುತ್ತಾರೆ.

ಇದಲ್ಲದೆ ಈ ಹಿಂದೆ ಆರ್​ಸಿಬಿ ತಂಡದ ಸ್ಟ್ರಾಟಜಿ ಕೂಡ ಹಾಗೆಯೇ ಇದೆ. ಏಕೆಂದರೆ ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದ ವೇಳೆ ತಂಡದ ಉಪನಾಯಕನ ಸ್ಥಾನ ನೀಡಿದ್ದು ವಿದೇಶಿ ಆಟಗಾರರಿಗೆ. ಅದರಂತೆ ಶೇನ್ ವಾಟ್ಸನ್, ಎಬಿ ಡಿವಿಲಿಯರ್ಸ್ ಆರ್​ಸಿಬಿ ತಂಡದ ವೈಸ್ ಕ್ಯಾಪ್ಟನ್ ಆಗಿದ್ದರು. ಇದೀಗ ವಿದೇಶಿ ಆಟಗಾರನಿಗೆ ನಾಯಕನ ಸ್ಥಾನ ನೀಡಿರುವ ಕಾರಣ ಉಪನಾಯಕನಾಗಿ ಭಾರತೀಯ ಆಟಗಾರ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿದೆ. ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿರುವ ಕಾರ್ತಿಕ್ ಈ ಹಿಂದೆ ಕೆಕೆಆರ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹಾಗೆಯೇ ತಮಿಳುನಾಡು ತಂಡ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕಳೆದ ಬಾರಿ ಆರ್​ಸಿಬಿ ವಿಕೆಟ್ ಕೀಪರ್ ಆಗಿದ್ದ ಎಬಿಡಿಗೆ ಉಪನಾಯಕನ ಸ್ಥಾನ ನೀಡಿರುವ ಕಾರಣ, ಈ ಬಾರಿ ಕೂಡ 30 ಯಾರ್ಡ್ ಸರ್ಕಲ್​ನಲ್ಲೇ ಇರುವ ಆಟಗಾರನಿಗೆ ವೈಸ್ ಕ್ಯಾಪ್ಟನ್ ಪಟ್ಟ ಸಿಗಲಿದೆ. ಅದರಂತೆ ಆರ್​ಸಿಬಿ ತಂಡದ ಉಪನಾಯಕನಾಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್​ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: Who is the vice captain of RCB?)

ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್