ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

ICC Womens World Cup: ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 141 ರನ್‌ಗಳ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ

ಪೃಥ್ವಿಶಂಕರ
|

Updated on:Mar 13, 2022 | 6:00 PM

ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 141 ರನ್‌ಗಳ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಪಾಯಿಂಟ್ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ.

1 / 5
ಆಸ್ಟ್ರೇಲಿಯಾ ಮೂರು ಪಂದ್ಯಗಳನ್ನು ಆಡಿದೆ. ಮೂರು ಗೆಲುವಿನೊಂದಿಗೆ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಾರಿತು. ಮೂರು ಪಂದ್ಯಗಳನ್ನು ಆಡಿರುವ ಭಾರತ ತಂಡ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಎರಡನೇ ಸ್ಥಾನ ಪಡೆದಿದೆ.

2 / 5
ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

ದಕ್ಷಿಣ ಆಫ್ರಿಕಾ ಎರಡು ಗೆಲುವು ಮತ್ತು ಎರಡು ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದೆ. ನಾಲ್ಕು ಅಂಕಗಳಿದ್ದರೂ ಕಡಿಮೆ ನಿವ್ವಳ ರನ್ ರೇಟ್‌ನಿಂದಾಗಿ ನಾಲ್ಕನೇ ಸ್ಥಾನದಲ್ಲಿದೆ.

3 / 5
ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

ವೆಸ್ಟ್ ಇಂಡೀಸ್ ತಂಡ ಐದನೇ ಸ್ಥಾನದಲ್ಲಿದೆ. ತಂಡ ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ 2ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಭಾರತದ ವಿರುದ್ಧ ಮೊದಲ ಸೋಲು ಕಂಡಿತು. ನಾಲ್ಕು ಅಂಕಗಳಿದ್ದರೂ .. ಕಡಿಮೆ ನಿವ್ವಳ ದರದಿಂದಾಗಿ ಐದನೇ ಸ್ಥಾನದಲ್ಲಿದೆ.

4 / 5
ICC Womens World Cup: ಭಾರತದ ನಂ.1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ; ಪಾಯಿಂಟ್ ಪಟ್ಟಿ ವಿವರ ಹೀಗಿದೆ

ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ 2 ಪಂದ್ಯಗಳನ್ನು ಆಡಿದ್ದು, ಒಂದನ್ನು ಗೆದ್ದಿಲ್ಲ. ಆದಾಗ್ಯೂ, ಇಂಗ್ಲೆಂಡ್ ಆರನೇ ಮತ್ತು ಬಾಂಗ್ಲಾದೇಶ ಏಳನೇ ಸ್ಥಾನದಲ್ಲಿದೆ. ಇದೇ ವೇಳೆ ಹ್ಯಾಟ್ರಿಕ್ ಸೋಲು ಕಂಡ ಪಾಕಿಸ್ತಾನ ತಂಡ ಕೊನೆಯ ಸ್ಥಾನ ಗಳಿಸಿದೆ.

5 / 5

Published On - 5:52 pm, Sun, 13 March 22

Follow us