ಬೆಂಗಳೂರಿನಲ್ಲಿ 2 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಅದರಲ್ಲೂ 4 ವರ್ಷಗಳ ಬಳಿಕ ಟೆಸ್ಟ್ ಪಂದ್ಯದ ಆತಿಥ್ಯ ಲಭಿಸಿರುವುದರಿಂದ ಕ್ರಿಕೆಟ್ ಫ್ಯಾನ್ಸ್ ಫುಲ್ ಜೋಶ್‌ನಲ್ಲಿದ್ದಾರೆ. ಕೊರೊನಾ ಹಾವಳಿ ಹತೋಟಿಗೆ ಬಂದಿರುವುದರಿಂದ ಸ್ಟೇಡಿಯಂ ಪೂರ್ಣ ಪ್ರಮಾಣದಲ್ಲಿ ವೀಕ್ಷಕರಿಗೆ ತೆರೆಯಲ್ಪಡುವುದು ಈ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಹಿನ್ನೆಲೆ ಒಂದು ವಾರದಿಂದ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೈದಾನದ ಹಲವು ಕಡೆ ಗೋಪುರಗಳನ್ನು ನಿರ್ಮಿಸಲಾಗಿದೆ. ಪಂದ್ಯದ 5 ದಿನ ಭದ್ರತೆಗೆ 700 ಸಿಬ್ಬಂದಿಯನ್ನ ನಿಯೋಜಿಸಲಾಗಿದೆ,. ಅಹಿತಕರ ಘಟನೆ ನಡೆಯದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ