RCB New Captain: ಡು ಪ್ಲೆಸಿಸ್‌ಗೆ ಆರ್‌ಸಿಬಿ ನಾಯಕತ್ವ! ಟಿ20ಯಲ್ಲಿ ಫಾಫ್ ಪ್ರದರ್ಶನ ಹೇಗಿದೆ ಗೊತ್ತಾ?
Faf du Plessis: ಕಳೆದ ತಿಂಗಳ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ರೂಪಾಯಿಗೆ ಆರ್‌ಸಿಬಿ ಖರೀದಿಸಿತ್ತು. ಈಗ ಅವರು ವಿರಾಟ್ ಕೊಹ್ಲಿ ನಂತರ ಹೊಸ ನಾಯಕನಾಗಿ ನೇಮಕಗೊಂಡಿದ್ದಾರೆ. ಜೊತೆಗೆ ಆರ್‌ಸಿಬಿಯ 7ನೇ ನಾಯಕರಾಗಿದ್ದಾರೆ.
ಫಾಫ್ ಡು ಪ್ಲೆಸಿಸ್ ಅವರು ತಮ್ಮ ವೃತ್ತಿಜೀವನದಲ್ಲಿ ದೇಶ ಮತ್ತು ದೇಶೀಯ ತಂಡಗಳಿಗಾಗಿ 79 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ಅವರ ತಂಡಗಳು 43 ಪಂದ್ಯಗಳನ್ನು ಗೆದ್ದರೆ, 34 ಪಂದ್ಯಗಳಲ್ಲಿ ಸೋತಿವೆ. ಒಂದು ಪಂದ್ಯ ಟೈ ಆಗಿದ್ದು ಒಂದು ಪಂದ್ಯ ಅನಿರ್ದಿಷ್ಟವಾಗಿತ್ತು. ಅಂದರೆ, ಅವರ ಒಟ್ಟಾರೆ ಗೆಲುವಿನ ಶೇಕಡಾವಾರು 55.76 ಆಗಿದೆ. ಅಂದರೆ, ನಾಯಕತ್ವದಲ್ಲಿ ಅವರ ಪ್ರದರ್ಶನ ಉತ್ತಮವಾಗಿದೆ.
3 / 4
ಡು ಪ್ಲೆಸಿಸ್ ಆರ್‌ಸಿಬಿಯ ಏಳನೇ ನಾಯಕನಾಗಲಿದ್ದಾರೆ. ಕಳೆದ ತಿಂಗಳು ನಡೆದ ಹರಾಜಿನಲ್ಲಿ ಅವರನ್ನು 7 ಕೋಟಿ ರೂ.ಗೆ ಆರ್‌ಸಿಬಿ ಖರೀದಿಸಿತ್ತು. ಇದಕ್ಕೂ ಮೊದಲು ಅವರು ಸಿಎಸ್‌ಕೆಯಲ್ಲಿ ಮಾತ್ರ ಇದ್ದರು. ಅವರ ಐಪಿಎಲ್ ದಾಖಲೆ ಅದ್ಭುತವಾಗಿದೆ. ಐಪಿಎಲ್‌ನ 100 ಪಂದ್ಯಗಳಲ್ಲಿ ಡು ಪ್ಲೆಸಿಸ್ 2935 ರನ್ ಗಳಿಸಿದ್ದಾರೆ, ಇದರಲ್ಲಿ ಅವರು 34 ಸರಾಸರಿ ಮತ್ತು 131 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕಳೆದ ಋತುವಿನಲ್ಲಿ ಅವರು 633 ರನ್ ಗಳಿಸಿ ಸಿಎಸ್‌ಕೆಯನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.