ಪ್ರಸಿದ್ಧ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಸೆಲಿಬ್ರಿಟಿಗಳಿಗೆ ದೊಡ್ಡ ಶಾಕ್ ನೀಡಿದೆ. ಬಹುತೇಕ ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohi), ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (MS Dhoni) ಸೇರಿದಂತೆ ಅನೇಕ ಕ್ರಿಕೆಟಿಗರ ಪ್ರೊಫೈಲ್‌ಗಳಿಂದ ನೀಲಿ ಚಿಹ್ನೆ ಬ್ಯಾಡ್ಜ್‌ಗಳನ್ನು ತೆಗೆದು ಹಾಕಿದೆ. ಇದಕ್ಕೆ ಕಾರಣ ಟ್ವಿಟ್ಟರ್ನ ಹೊಸ ನಿಯಮ. ನೀಲಿ ಬ್ಯಾಡ್ಜ್ ಉಳಿಸಿಕೊಳ್ಳಲು ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕು. ಹೀಗಾಗಿ ಇದೀಗ ಚಂದಾದಾರರಿಲ್ಲದ ಪ್ರೊಫೈಲ್‌ಗಳಿಂದ ಟ್ವಿಟ್ಟರ್ ನೀಲಿ ಚಿಹ್ನೆ ಬ್ಯಾಡ್ಜ್‌ಗಳನ್ನು ಕಿತ್ತೆಸೆದಿದೆ.
ಕಂಪನಿಯು ಕಳೆದ ಏಪ್ರಿಲ್ 1ರಂದು ಲೆಗಸಿ ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿತ್ತು. ಆದರೆ ಇದೀಗ ಚಂದಾದಾರರಲ್ಲದ ಎಲ್ಲಾ ಖಾತೆಗಳಿಂದಲೂ ನೀಲಿ ಚಿಹ್ನೆಯನ್ನು ತೆಗೆಯುವ ನಿರ್ಧಾರ ಮಾಡಲಾಗಿದೆ. ಖಾತೆಯ ದೃಢೀಕರಣಕ್ಕಾಗಿ ನೀಲಿ ಚಿಹ್ನೆ ಅವಶ್ಯವಾಗಿದ್ದು, ಈ ನೀಲಿ ಚಿಹ್ನೆ ಪಡೆಯಲು ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು.
IPL 2023: RCB ಆಟಗಾರರ ಕೈಯಲ್ಲಿ ಪರ್ಪಲ್-ಆರೆಂಜ್ ಕ್ಯಾಪ್ಸ್
ಟ್ವಿಟ್ಟರ್ ಬ್ಲೂವನ್ನು ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್ ಎರಡರಲ್ಲೂ ಬಳಸಬಹುದಾಗಿದೆ ಜೊತೆಗೆ ಟ್ವಿಟರ್ ವೆಬ್‌ಸೈಟ್ ಬಳಸುವವರು ಕೂಡ ಬ್ಲೂ ಚೆಕ್‌ಮಾರ್ಕ್ ಅನ್ನು ಖರೀದಿಸಬಹುದು. ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬ್ಲೂ ಟಿಕ್‌ಮಾರ್ಕ್ ಮಾಸಿಕ ಸಬ್‌ಸ್ಕ್ರಿಪ್ಶನ್ ಶುಲ್ಕ ರೂ. 900 ಆಗಿದ್ದರೆ ವೆಬ್ ಬಳಕೆದಾರರಿಗೆ ಈ ಶುಲ್ಕ ರೂ. 650 ಇರಲಿದೆ. ವಾರ್ಷಿಕ ಸಬ್‌ಸ್ಕ್ರಿಪ್ಶನ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು 6,800 ರೂ. ವಾರ್ಷಿಕ ಚಂದಾದಾರಿಕೆಯನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು. ತಿಂಗಳಿಗೆ ಇದೇ ವೆಚ್ಚ 566 ರೂ. ಆಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾತೆಗಳು ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಲಾಗಿದೆ. ಯಶ್, ಅಲ್ಲು ಅರ್ಜುನ್, ಟ್ವಿಟ್ಟರ್ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುವ ಅಮಿತಾಭ್ ಬಚ್ಚನ್ ಸೇರಿ ಎಲ್ಲಾ ಸೆಲೆಬ್ರಿಟಿ ಟ್ವಿಟರ್ ಬಳಕೆದಾರರ ಬ್ಲೂ ಟಿಕ್ ಮಾಯವಾಗಿದೆ. ಇನ್ನು, ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 am, Fri, 21 April 23