AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ನಾಯಕನಾಗಿ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli's Record: ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 59 ರನ್​ ಬಾರಿಸಿದ್ದರು.

TV9 Web
| Edited By: |

Updated on: Apr 20, 2023 | 10:29 PM

Share
IPL 2023 PBKS vs RCB: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಮತ್ತೆ ಆರ್​ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಪಕ್ಕೆಲುಬಿನ ನೋವಿನಿಂದ ಬಳಲುತ್ತಿರುವ ಫಾಫ್ ಡುಪ್ಲೆಸಿಸ್ ಈ ಪಂದ್ಯದ ಫೀಲ್ಡಿಂಗ್​ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಹೀಗಾಗಿ ಫಾಫ್ ಅವರನ್ನು ಇಂಪ್ಯಾಕ್ಟ್ ಸಬ್​ ಆಗಿ ಆಯ್ಕೆ ಮಾಡಿ, ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು.

1 / 6
ಅದರಂತೆ ಮತ್ತೆ ಆರ್​ಸಿಬಿ ತಂಡದ ನಾಯಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 59 ರನ್​ ಬಾರಿಸಿದ್ದರು.

2 / 6
ಈ 59 ರನ್​ಗಳೊಂದಿಗೆ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ 6500 ರನ್​ ಕಲೆಹಾಕಿದ ವಿಶೇಷ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡರು. ವಿರಾಟ್ ಕೊಹ್ಲಿ ಆರ್​ಸಿಬಿ ಪರ ನಾಯಕರಾಗಿ 5333 ರನ್​ಳಿಸಿದರೆ, ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ ಆಗಿ 50 ಪಂದ್ಯಗಳಲ್ಲಿ 1570 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ 6500 ರನ್​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

3 / 6
ಇನ್ನು ಈ ಪಂದ್ಯದಲ್ಲಿ 5 ಫೋರ್​ಗಳನ್ನು ಬಾರಿಸುವ ಮೂಲಕ ಐಪಿಎಲ್​ನಲ್ಲಿ 600 ಫೋರ್ ಬಾರಿಸಿದ ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದು, ಒಟ್ಟು 730 ಫೋರ್ ಬಾರಿಸಿದ್ದಾರೆ. ಇದೀಗ 603 ಫೋರ್ ಸಿಡಿಸುವ ಮೂಲಕ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 6
ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ಪೂರೈಸುವುದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಹಾಫ್ ಸೆಂಚುರಿ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು, ಆಸ್ಟ್ರೇಲಿಯಾ ಆಟಗಾರ 96 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ 366 ಟಿ20 ಇನಿಂಗ್ಸ್​ಗಳ ಮೂಲಕ ಒಟ್ಟು 89 ಅರ್ಧಶತಕಗಳನ್ನು ಬಾರಿಸಿ ಹಾಫ್ ಸೆಂಚುರಿ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

5 / 6
ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 30 ಪ್ಲಸ್ ಸ್ಕೋರ್​ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ  ವಿರಾಟ್ ಕೊಹ್ಲಿ ಇದುವರೆಗೆ 100 ಬಾರಿ 30 ಕ್ಕಿಂತ ಹೆಚ್ಚಿನ ರನ್​ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

6 / 6
Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ

ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್

ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್

ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು

ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ

ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್

ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ

ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು