ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕಪ್ ಗೆಲ್ಲಲಿ ಎಂಬ ಲಕ್ಷಾಂತರ ಅಭಿಮಾನಿಗಳ ಹಾರೈಕೆ ಈ ಬಾರಿಯೂ ಫಲಿಸಲಿಲ್ಲ. ಐಪಿಎಲ್ 2021ರ (IPL 2021) ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ಗೆ ತಲುಪಿದ್ದ ಆರ್ಸಿಬಿ (RCB) ಒಂದು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದಲೇ ಹೊರಬಿದ್ದಿದೆ. ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ (IPL 2021 Eliminator) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ (RCB vs KKR) ಸೋಲುಕಂಡ ನೋವು ಒಂದುಕಡೆಯಾದರೆ ಇತ್ತ ವಿರಾಟ್ ಕೊಹ್ಲಿ (Virat Kohli) ಕಪ್ ಇಲ್ಲದೆ ನಾಯಕತ್ವಕ್ಕೆ ಗುಡ್ ಬೈ ಹೇಳಿರುವುದು ಮತ್ತೊಂದು ಕಡೆ. ಎರಡೆರಡು ನೋವನ್ನು ತುಂಬಿಕೊಂಡ ಕೊಹ್ಲಿ ಮೈದಾನದಲ್ಲೇ ಭಾವುಕರಾಗಿ ಒಂದು ಕ್ಷಣ ಕಣ್ಣಿನಿಂದ ನೀರು ಜಾರಿದ್ದು ಸುಳ್ಳಲ್ಲ (). ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ. ಅನೇಕ ಆರ್ಸಿಬಿ ಅಭಿಮಾನಿಗಳು ಕೂಡ ಕೊಹ್ಲಿಯನ್ನು ಈರೀತಿ ಕಂಡು ಬೇಸರಗೊಂಡಿದ್ದಾರೆ.
ಹೌದು, ಟಾಸ್ ಗೆದ್ದು ಅಚ್ಚರಿ ಎಂಬಂತೆ ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ನಿರ್ಧಾರ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಓಪನರ್ಗಳು ಮೊದಲ ವಿಕಟ್ಗೆ 49 ರನ್ಗಳ ಕಾಣಿಕೆ ನೀಡಿದರು. ದೇವದತ್ ಪಡಿಕ್ಕಲ್ 18 ಎಸೆತಗಳಲ್ಲಿ 21 ರನ್ ಕಲೆಹಾಕಿ ಔಟ್ ಆದರು. ಆದರೆ, ನಂತರ ಶುರುವಾಗಿದ್ದು ಸುನಿಲ್ ನರೈನ್ ಸ್ಪಿನ್ ಜಾದು. ಆರ್ಸಿಬಿಯ ಬೆನ್ನೆಲುಬುಗಳಾಗಿದ್ದ ಸ್ಟಾರ್ ಬ್ಯಾಟ್ಸ್ಮನ್ಗಳನ್ನ ತನ್ನ ಸ್ಪಿನ್ ಜಾದು ಮೂಲಕ ನರೈನ್ ಪೆವಿಲಿಯನ್ಗೆ ಅಟ್ಟಿದರು.
Feeling sad for only this guy??#viratkholi pic.twitter.com/55ovNj3Tc9
— Shekh Ayaz Nadwi ? (@Ayaz_Nadwi__07) October 11, 2021
Hold your head up, King. This is not the END !!
Let’s bring WC Home !! ?#viratkholi ❤ pic.twitter.com/LPDOZ3avwy— Cyril Sabu (@Cyrloo) October 11, 2021
ವರುಣ್ ಚಕ್ರವರ್ತಿ ಯಾವುದೇ ವಿಕೆಟ್ ಕೀಳಿಲ್ಲವಾದರೂ ಅವರು ನರೈನ್ಗೆ ನೀಡಿದ ಸಾತ್ ಅದ್ಭುತ. ಶ್ರೀಕರ್ ಭರತ್ 9 ರನ್ಗೆ ಔಟ್ ಆದರೆ, ಸೆಟ್ ಆಗಿದ್ದ ಕೊಹ್ಲಿ ಅನ್ನು 39 ರನ್ಗೆ ನರೈಸ್ ಪೆವಿಲಿಯನ್ಗೆ ಅಟ್ಟಿದರು. ಇನ್ನೆರಡು ಬಿಗ್ ವಿಕೆಟ್ಗಳಾದ ಎಬಿ ಡಿವಿಲಿಯರ್ಸ್ (11) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (15) ಅವರನ್ನೂ ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಆರ್ಸಿಬಿ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ಗಳ ಅಲ್ಪ ಮೊತ್ತ ಕಲೆಹಾಕಿತಷ್ಟೆ.
ಕಠಿಣ ಪಿಚ್ ಆದರೂ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಕೂಡ ಪವರ್ ಪ್ಲೇಯ ಕೊನೇಯ ಓವರ್ನಲ್ಲಿ ಶುಭ್ಮನ್ ಗಿಲ್ (29) ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ತ್ರಿಪಾಠಿ ಔಟ್ ಆದರೆ ವೆಂಕಟೇಶ್ ಅಯ್ಯರ್ ಕೂಡ ಬೇಗನೆ ನಿರ್ಗಸಿದರು. ಇಲ್ಲಿಂದ ಪಂದ್ಯ ರೋಚಕತೆ ಸೃಷ್ಟಿಸಿತು.
ಆದರೆ, ಈ ಸಂದರ್ಭ ಬಂದ ಸುನಿಲ್ ನರೈನ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 26 ರನ್ ಚಚ್ಚಿ ಪಂದ್ಯವನ್ನು ಕೆಕೆಆರ್ ಕಡೆ ವಾಲಿಸಿದರು. ನಂತರದ ಎರಡು ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳು ಗೆಲುವಿಗೆ ಹೋರಾಟ ನಡೆಸಿದರೂ ಅಂತಿಮ ಹಂತದಲ್ಲಿ ಅದು ಸಾಧ್ಯವಾಗಲಿಲ್ಲ. 19.4 ಓವರ್ನಲ್ಲಿ ಕೆಕೆಆರ್ ಗೆಲುವಿನ ದಡ ಮುಟ್ಟಿತು.
ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದರೂ ಹಿಂದಿನ ಸೀಸನ್ಗೆ ಹೋಲಿಸಿದರೆ ಈ ಸಲ ಅತ್ಯುತ್ತಮ ಪ್ರದರ್ಶನ ನೀಡಿದೆ. ಕೆಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಮುಂದಿನ ಆವೃತ್ತಿಗೆ ಮೆಗಾ ಆಕ್ಷನ್ ಇರುವ ಕಾರಣ ಆರ್ಸಿಬಿ ಯಾವ ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.
Harshal Patel: ಪಟ್ಟ ಶ್ರಮಕ್ಕೆ ಸಿಗದ ಫಲ: ಹರ್ಷಲ್ ಪಟೇಲ್ ಐತಿಹಾಸಿಕ ದಾಖಲೆ ನಿರ್ಮಿಸಲು ಕೈಕೊಟ್ಟ ಫೀಲ್ಡರ್ಗಳು
(Virat Kohli Crying After Losing RCB vs KKR IPL 2021 Eliminator Match Video goes Viral)