Virat Kohli: ಫ್ರೀ-ಹಿಟ್ ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್​ಗೆ ಬೈದಾ ವಿರಾಟ್ ಕೊಹ್ಲಿ?: ವಿಡಿಯೋ

|

Updated on: Mar 18, 2023 | 9:51 AM

Hardik Pandya, IND vs AUS 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಕ್ರೀಸ್​ನಲ್ಲಿ ಇರುವಾಗ 18ನೇ ಓವರ್​ನಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಇದರಿಂದ ವಿರಾಟ್ ಕೊಹ್ಲಿ ಕೋಪಗೊಂಡರು.

Virat Kohli: ಫ್ರೀ-ಹಿಟ್ ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್​ಗೆ ಬೈದಾ ವಿರಾಟ್ ಕೊಹ್ಲಿ?: ವಿಡಿಯೋ
Hardik Pandya and Virat Kohli
Follow us on

ಟೆಸ್ಟ್ ಸರಣಿ ಬಳಿಕ ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ (India vs Australia) ಭರ್ಜರಿ ಆರಂಭ ಪಡೆದುಕೊಂಡಿದೆ. ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೆಎಲ್ ರಾಹುಲ್ (KL Rahul) ಅವರ ಅಜೇಯ 75 ರನ್ ಮತ್ತು ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದಿಂದ ಭಾರತ 39.5 ಓವರ್​ನಲ್ಲೇ 189 ರನ್​ಗಳ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿತು. ಇದರ ನಡುವೆ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ನಲ್ಲಿ ಹಾರ್ದಿಕ್​ ಪಾಂಡ್ಯ (Hardik Pandya) ಕ್ರೀಸ್​ನಲ್ಲಿ ಇರುವಾಗ ವಿಶೇಷ ಘಟನೆಯೊಂದು ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪ್ರಥಮ ಏಕದಿನ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುನ್ನಡೆಸಿದರು. ಬೌಲಿಂಗ್​ನಲ್ಲಿ 1 ವಿಕೆಟ್ ಪಡೆದರೆ, ಬ್ಯಾಟಿಂಗ್​ನಲ್ಲಿ 25 ರನ್​​ಗಳ ಕಾಣಿಕೆ ನೀಡಿದರು. ಹಾರ್ದಿಕ್ ನಾಯಕತ್ವದಲ್ಲಿ ಆಸೀಸ್ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಬಂದ ಟೀಮ್ ಇಂಡಿಯಾ ಕಳಪೆ ಆರಂಭ ಪಡೆದುಕೊಂಡಿತು. 10.2 ಓವರ್ ಆಗುವ ಹೊತ್ತಿಗೆ ಪ್ರಮುಖ 4 ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಭಾರತಕ್ಕೆ ಜೊತೆಯಾಟದೊಂದಿಗೆ ರನ್ ಕೂಡ ಮುಖ್ಯವಾಗಿತ್ತು. ರಾಹುಲ್ ಜೊತೆಸೇರಿದ ಹಾರ್ದಿಕ್ ಇನ್ನಿಂಗ್ಸ್ ಕಟ್ಟಲು ಹೊರಟರು. 5ನೇ ವಿಕೆಟ್​ಗೆ ಇವರಿಬ್ಬರು 44 ರನ್​ ಪೇರಿಸಿದರು. ಪಾಂಡ್ಯ ಕಡೆಯಿಂದ ಮೂರು ಫೋರ್ ಮತ್ತು ಒಂದು ಸಿಕ್ಸರ್ ಬಂದವು.

ಇದನ್ನೂ ಓದಿ
Hardik Pandya: ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ಯಾರು ಕಾರಣ?: ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳೇನು ಕೇಳಿ
Mission World Cup Conclave: ಫುಟ್​ಬಾಲ್ ಪ್ರತಿಭಾನ್ವೇಷಣೆಗೆ ಟಿವಿ9 ಮರಾಠಿಯ ಮಹಾರಾಷ್ಟ್ರ ಮಹಾಸಂಕಲ್ಪ; 20 ಬಾಲಕರಿಗೆ ತರಬೇತಿ
IND vs AUS: ಚಿರತೆಯಂತೆ ಜಿಗಿದು ಜಡೇಜಾ ಹಿಡಿದ ಕ್ಯಾಚ್​ಗೆ ದಂಗಾದ ಕಾಂಗರೂಗಳು! ವಿಡಿಯೋ ನೋಡಿ
ಬಾಮೈದುನನ ಮದುವೆಯಲ್ಲಿ ಮಡದಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ರೋಹಿತ್; ವಿಡಿಯೋ ನೋಡಿ

IND vs AUS: ಆಸೀಸ್ ತಂಡದಲ್ಲಿ ದಿಡೀರ್ ಬದಲಾವಣೆ; ಆಡಲು ಬಂದ ಆಟಗಾರ ಹೋಟೆಲ್​ಗೆ ವಾಪಸ್

ಹಾರ್ದಿಕ್ ಕ್ರೀಸ್​ನಲ್ಲಿ ಇರುವಾಗ 18ನೇ ಓವರ್​ನಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಮಾರ್ಕಸ್ ಸ್ಟೋಯಿನಿಸ್ 4ನೇ ಎಸೆತ ಬೌಲಿಂಗ್ ಮಾಡುವಾಗ ಗೆರೆ ದಾಟಿದ್ದರಿಂದ ಅಂಪೈರ್ ನೋ-ಬಾಲ್ ಎಂದು ಘೋಷಿಸಿ ಫ್ರೀ-ಹಿಟ್ ನೀಡಿದರು. ಅತ್ತ ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಇದ್ದರು. ಫ್ರೀ ಹಿಟ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವ ಹಾರ್ದಿಕ್ ಈ ಬಾರಿ ವೈಫಲ್ಯ ಅನುಭವಿಸಿ ಕೇವಲ 1 ರನ್ ಅಷ್ಟೇ ಕಲೆಹಾಕಿದರು. ಇದರಿಂದ ಡಗೌಟ್​ನಲ್ಲಿದ್ದ ವಿರಾಟ್ ಕೊಹ್ಲಿ ಸಂತಸಗೊಳ್ಳಲಿಲ್ಲ. ಕೊಹ್ಲಿ ಅವರು ಹಾರ್ದಿಕ್ ಮೇಲೆ ಕೋಪಗೊಂಡ ಘಟನೆ ನಡೆದಿದೆ. ಕೊಹ್ಲಿ ಅವರ ರಿಯಾಕ್ಷನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಈ ಪಂದ್ಯದಲ್ಲಿ ಟಾಸ್ ಸೊತ ಆಸ್ಟ್ರೇಲಿಯಾ ಬ್ಯಾಟಿಂಗ್​ಗೆ ಇಳಿಯಿತು. ಆದರೆ, ಮಿಚೆಲ್ ಮಾರ್ಶ್ ಬಿಟ್ಟರೆ ಉಳಿದ ಎಲ್ಲ ಬ್ಯಾಟರ್​ಗಳು ಭಾರತೀಯ ಬೌಲಿಂಗ್ ದಾಳಿಗೆ ಪೆವಿಲಿಯನ್ ಸೇರಿಕೊಂಡರು. ಮಾರ್ಶ್ 65 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್​ನೊಂದಿಗೆ 81 ರನ್ ಕಲೆಹಾಕಿದರೆ, ಜೋಶ್ ಇಂಗ್ಲಿಸ್ 26 ಮತ್ತು ನಾಯಕ ಸ್ಟೀವ್ ಸ್ಮಿತ್ 22 ರನ್ ಗಳಿಸಿದರು. ಪರಿಣಾಮ ಆಸ್ಟ್ರೇಲಿಯಾ 35.4 ಓವರ್​ನಲ್ಲಿ 188 ರನ್​ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಕಳಪೆ ಆರಂಭ ಪಡೆದುಕೊಂಡಿತು. ಇಶಾನ್ ಕಿಶನ್ 3 ರನ್ , ಶುಭ್​ಮನ್ ಗಿಲ್ 20, ವಿರಾಟ್ ಕೊಹ್ಲಿ 4 ಹಾಗೂ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ಹಾರ್ದಿಕ್ 25 ರನ್​ಗಳ ಕಾಣಿಕೆ ನೀಡಿದರು. ನಂತರ 6ನೇ ವಿಕೆಟ್​ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಬೊಂಬಾಟ್ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಹುಲ್ 91 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್​ನೊಂದಿಗೆ ಅಜೇಯ 75 ರನ್ ಚಚ್ಚಿದರೆ, ಜಡೇಜಾ 69 ಎಸೆತಗಳಲ್ಲಿ 5 ಫೋರ್​ನೊಂದಿಗೆ ಅಜೇಯ 45 ರನ್ ಗಳಿಸಿ ಭಾರತ 39.5 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ ಜಯ ಸಾಧಿಸುವಂತೆ ಮಾಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:51 am, Sat, 18 March 23