Mission World Cup Conclave: ಫುಟ್​ಬಾಲ್ ಪ್ರತಿಭಾನ್ವೇಷಣೆಗೆ ಟಿವಿ9 ಮರಾಠಿಯ ಮಹಾರಾಷ್ಟ್ರ ಮಹಾಸಂಕಲ್ಪ; 20 ಬಾಲಕರಿಗೆ ತರಬೇತಿ

ವಿಶ್ವಕಪ್ ಅಥವಾ ಒಲಿಂಪಿಕ್ಸ್‌ನಂತಹ ಕ್ರೀಡಾ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ಭಾರತ ಶ್ರೇಷ್ಠವಾಗಿ ಹೊರಹೊಮ್ಮುವ ದಿನ ಹೆಚ್ಚು ದೂರವಿಲ್ಲ ಎಂಬುದು ಖಾತರಿ ಇದೆ ಎಂದು ‘ಟಿವಿ9’ ನೆಟ್​​ವರ್ಕ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಬರುಣ್ ದಾಸ್ ಹೇಳಿದ್ದಾರೆ.

Mission World Cup Conclave: ಫುಟ್​ಬಾಲ್ ಪ್ರತಿಭಾನ್ವೇಷಣೆಗೆ ಟಿವಿ9 ಮರಾಠಿಯ ಮಹಾರಾಷ್ಟ್ರ ಮಹಾಸಂಕಲ್ಪ; 20 ಬಾಲಕರಿಗೆ ತರಬೇತಿ
ಎಫ್​ಸಿ ಬಾಯರ್ನ್ ಮಹಾರಾಷ್ಟ್ರ ಕಪ್​​ಗೆ ಆಯ್ಕೆಯಾದ 20 ಮಂದಿ ಬಾಲಕರನ್ನು ಮಹಾರಾಷ್ಟ್ರದ ಕ್ರೀಡಾ ಸಚಿವ ಗಿರೀಶ್ ಮಹಾಜನ್ ಅಭಿನಂದಿಸಿದರು. ‘ಟಿವಿ9’ ನೆಟ್​​ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ಹಾಗೂ ಇತರರು ಇದ್ದರು
Follow us
Ganapathi Sharma
|

Updated on:Mar 17, 2023 | 11:20 PM

ಮುಂಬೈ: ಮರಾಠಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಟಿವಿ9 ಮರಾಠಿ’ಯು ಭಾರತಕ್ಕೆ ಫುಟ್​ಬಾಲ್ ವಿಶ್ವಕಪ್​ ಗೆಲುವಿನ ಕನಸು (World Cup Football chance) ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಮಹಾರಾಷ್ಟ್ರ ಮಹಾಸಂಕಲ್ಪ (Maharashtracha Mahasankalp) ಮಿಷನ್ ವರ್ಲ್ಡ್ ಕಪ್’ ಸಮಾವೇಶವನ್ನು ಮಾರ್ಚ್​ 14ರಂದು ಮುಂಬೈಯಲ್ಲಿ ಆಯೋಜಿಸಿತ್ತು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸಾಕ್ಷಿಯಾಗಿದ್ದು, ದೇಶದ ಅತಿದೊಡ್ಡ ದೂರದರ್ಶನ ಜಾಲವಾದ ‘ಟಿವಿ9’ ಜತೆ ಜಾಗತಿಕ ಮಟ್ಟದ ಫುಟ್​​ಬಾಲ್ ಕ್ಲಬ್ ಎಫ್​ಸಿ ಬಾಯರ್ನ್​ (FC Bayern) ಮ್ಯೂನಿಚ್ ಕ್ಲಬ್ ಕೈಜೋಡಿಸಿತು. ಮೂಲಸೌಕರ್ಯ ಅಭಿವೃದ್ಧಿ, ವ್ಯಾಪಾರ, ಕ್ರೀಡೆ ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಮಹಾರಾಷ್ಟ್ರವು ದಾಪುಗಾಲಿಕ್ಕುತ್ತಿರುವುದನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ‘ಟಿವಿ9 ಮರಾಠಿ’ ಕೈಗೊಂಡ ಪ್ರಮುಖ ನಿರ್ಣಯದ ಅಂಗವಾಗಿ ಸಮಾವೇಶ ನೆರವೇರಿತು. ಇದರಲ್ಲಿ ದಿಗ್ಗಜರ ಸಮಾಗಮದೊಂದಿಗೆ ಫುಟ್‌ಬಾಲ್ ವಿಶ್ವಕಪ್‌ಗೆ ಭಾರತದ ಮಾರ್ಗಸೂಚಿಯನ್ನು ಪಟ್ಟಿಮಾಡಲಾಯಿತು. ಜತೆಗೆಮ ವಿಶ್ವದ ಪ್ರಮುಖ ಫುಟ್‌ಬಾಲ್ ಕ್ಲಬ್ ಎಂದೇ ಪರಿಗಣಿಸಲಾಗಿರುವ ಎಫ್​ಸಿ ಬಾಯರ್ನ್ ಭಾರತೀಯ ಆಯಾಮಕ್ಕನುಗುಣವಾಗಿ ಫುಟ್​​ಬಾಲ್ ಕುರಿತಾದ ತನ್ನ ತತ್ವವನ್ನು ಹಂಚಿಕೊಂಡಿತು.

ಎಫ್​ಸಿ ಬಾಯರ್ನ್ ತನ್ನ ‘ಮಿಯಾ ಸಾನ್ ಮಿಯಾ’ ಕಾರ್ಯಕ್ರಮದ ಮೂಲಕ ಜಾಗತಿಕವಾಗಿ ಯುವಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗೌರವ, ಮಹತ್ವಾಕಾಂಕ್ಷೆ, ನ್ಯಾಯಯುತ ಆಟ ಮತ್ತು ಟೀಮ್​ ಸ್ಪಿರಿಟ್​​ನೊಂದಿಗೆ ಆಡುವಂಥ ಮೌಲ್ಯಗಳ ಜತೆಗೆ ತರಬೇತಿ ನೀಡುತ್ತಿದೆ. ಪ್ರಸ್ತುತ ಹೊಂದಿರುವ ಸಹಭಾಗಿತ್ವದ ಅಡಿಯಲ್ಲಿ ಜ್ಞಾನ, ಸಂಪ್ರದಾಯ ಮತ್ತು ತರಬೇತಿ ವಿಧಾನಗಳ ನಿರಂತರ ವಿನಿಮಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ.

ಎಫ್​ಸಿ ಬಾಯರ್ನ್ ಮಹಾರಾಷ್ಟ್ರ ಕಪ್​​ಗೆ ಆಯ್ಕೆಯಾದ 20 ಮಂದಿ ಬಾಲಕರನ್ನು ಮಹಾರಾಷ್ಟ್ರದ ಕ್ರೀಡಾ ಸಚಿವ ಗಿರೀಶ್ ಮಹಾಜನ್ ಅಭಿನಂದಿಸಿದರು. ಈ ಬಾಲಕರು ತರಬೇತಿಗಾಗಿ ಜರ್ಮನಿಗೆ ತೆರಳಲಿದ್ದಾರೆ.

ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆಯತ್ತ ಭಾರತ; ಬರುಣ್ ದಾಸ್

ಭಾರತವು ವೈವಿಧ್ಯಮಯ ಕ್ಷೇತ್ರಗಳಲ್ಲಿ ಜಾಗತಿಕ ಕಾರ್ಯಸೂಚಿಯೊಂದಿಗೆ ಮುನ್ನಡೆಯುತ್ತಿದೆ. ಅರ್ಥಶಾಸ್ತ್ರ, ರಾಜಕೀಯದಿಂದ ತೊಡಗಿ ಇದೀಗ ಆಸ್ಕರ್​​ ವಿಭಾಗದಲ್ಲಿಯೂ ಜಾಗತಿಕವಾಗಿ ಪ್ರಭಾವ ಬೀರಲು ಆರಂಭಿಸಿದೆ. ವಿಶ್ವಕಪ್ ಅಥವಾ ಒಲಿಂಪಿಕ್ಸ್‌ನಂತಹ ಕ್ರೀಡಾ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಿ ಹೊರಹೊಮ್ಮುವ ದಿನ ಹೆಚ್ಚು ದೂರವಿಲ್ಲ ಎಂಬುದು ಖಾತರಿ ಇದೆ ಎಂದು ‘ಟಿವಿ9’ ನೆಟ್​​ವರ್ಕ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಬರುಣ್ ದಾಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮತ್ತು ಎಫ್​ಸಿ ಬಾಯರ್ನ್ ಮ್ಯೂನಿಚ್ ಕ್ಲಬ್ ಜತೆಗೂಡಿ ಕಾರ್ಯನಿರ್ವಹಿಸಲು ಟಿವಿ9 ನೆಟ್​ವರ್ಕ್ ಉತ್ಸುಕವಾಗಿದೆ. ವಿಶ್ವಕಪ್ ಫುಟ್ಬಾಲ್ ಕನಸನ್ನು ನನಸಾಗಿಸಲು ಹಾಗೂ ಭಾರತದಲ್ಲಿರುವ ಫುಟ್ಬಾಲ್ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಅವಕಾಶಗಳನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಬರುಣ್ ದಾಸ್ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ರಂಜಿತ್ ಸಿಂಗ್ ಡಿಯೋಲ್, ಸ್ಪೋರ್ಟ್ಸ್ ಕಮಿಷನರ್ ಮತ್ತು ಯುವಜನ ಸೇವೆಯ ಸುಹಾಸ್ ದಿವಾಸೆ ಹಾಗೂ ಇತರರು ಹಾಜರಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Fri, 17 March 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್