IND vs AUS: ಚಿರತೆಯಂತೆ ಜಿಗಿದು ಜಡೇಜಾ ಹಿಡಿದ ಕ್ಯಾಚ್ಗೆ ದಂಗಾದ ಕಾಂಗರೂಗಳು! ವಿಡಿಯೋ ನೋಡಿ
IND vs AUS: ಲದೀಪ್ ಯಾದವ್ ಮಾಡಿದ ಪಂದ್ಯದ 23ನೇ ಓವರ್ನ ನಾಲ್ಕನೇ ಎಸೆತದಲ್ಲಿ ಲಬುಶೇನ್, ಥರ್ಡ್ ಮ್ಯಾನ್ ಕಡೆಗೆ ಆಡಿದರು. ಆದರೆ ಅಲ್ಲೇ ನಿಂತಿದ್ದ ರವೀಂದ್ರ ಜಡೇಜಾ, ಚೆಂಡು ತನ್ನೆಡೆಗೆ ಬರುವುದನ್ನು ಗಮನಿಸಿ, ಗಾಳಿಯಲ್ಲಿ ಜಿಗಿದು ಸುಂದರವಾದ ಒನ್ ಹ್ಯಾಂಡ್ ಕ್ಯಾಚ್ ಪಡೆದರು.
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಮೊದಲ ಏಕದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯುತ್ತಿದೆ. ಬಹಳ ದಿನಗಳಿಂದ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದ ಜಡೇಜಾ (Ravindra Jadeja), ಬಾರ್ಡರ್ ಗವಾಸ್ಕರ್ (Border Gavaskar Trophy) ಟೆಸ್ಟ್ ಸರಣಿಯ ಮೂಲಕ ತಂಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಇಡೀ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಜಂಟಿಯಾಗಿ ಬಾಚಿಕೊಂಡಿದ್ದರು. ಇದೀಗ ಏಕದಿನ ಸರಣಿಯಲ್ಲೂ ಕಮಾಲ್ ಮಾಡುತ್ತಿರುವ ಜಡೇಜಾ, ಅದ್ಭುತ ಫೀಲ್ಡಿಂಗ್ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಸ್ಮಿತ್ ವಿಕೆಟ್ ಬಳಿಕ ಬಂದು, ನಿದಾನವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದ ಲಬುಶೇನ್ (Marnus Labuschagne) ಅವರ ಕ್ಯಾಚನ್ನು ಅದ್ಭುತವಾಗಿ ಹಿಡಿಯುವುದರೊಂದಿಗೆ ಜಡೇಜಾ ತಮ್ಮ ಹಳೆಯ ಆಟವನ್ನು ಪ್ರದರ್ಶಿಸಿದ್ದಾರೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾಕ್ಕೆ ಮಿಚೆಲ್ ಮಾರ್ಷ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ನೆರವಾದರು. ಮಿಚೆಲ್ ಮಾರ್ಷ್, ನಾಯಕ ಸ್ಟೀವನ್ ಸ್ಮಿತ್ ಜೊತೆ ಸೇರಿ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿತು. ಈ ಜೋಡಿ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸ್ಮಿತ್ರನ್ನು ಬಲಿ ಪಡೆಯುವುದರೊಂದಿಗೆ ಪಾಂಡ್ಯ ತಂಡಕ್ಕೆ ಎರಡನೇ ಯಶಸ್ಸು ತಂದುಕೊಟ್ಟರು.
IND vs AUS: ಆಸೀಸ್ ತಂಡದಲ್ಲಿ ದಿಡೀರ್ ಬದಲಾವಣೆ; ಆಡಲು ಬಂದ ಆಟಗಾರ ಹೋಟೆಲ್ಗೆ ವಾಪಸ್
ಮಾರ್ಷ್ ಅರ್ಧಶತಕ
ಸ್ಮಿತ್ ನಂತರ ಬಂದ ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್ ಅವರೊಂದಿಗೆ ಮೂರನೇ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿದರು. ಮಿಚೆಲ್ ಮಾರ್ಷ್ ಶತಕದ ಹಾದಿಯಲ್ಲಿದ್ದರು. ಆದರೆ ಮಿಚೆಲ್ ಜಡೇಜಾ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ಗೆ ಕ್ಯಾಚಿತ್ತು ಔಟಾದರು. ಮಾರ್ಷ್ 65 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 81 ರನ್ ಗಳಿಸಿದರು. ಮಿಚೆಲ್ ಔಟಾಗುವುದರೊಂದಿಗೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು.
ಜಡೇಜಾ ಸೂಪರ್ ಕ್ಯಾಚ್
ಮಾರ್ಷ್ ನಂತರ ಬಂದ ಜೋಶ್ ಇಂಗ್ಲಿಸ್, ಲಬುಶೇನ್ ಜೊತೆಗೂಡಿ ಆಸೀಸ್ ಇನ್ನಿಂಗ್ಸ್ ಉಳಿಸಲು ಪ್ರಯತ್ನಿಸುತ್ತಿದ್ದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 10 ರನ್ ಸೇರಿಸಿದರು. ಆದರೆ ಕುಲದೀಪ್ ಯಾದವ್ ಮಾಡಿದ ಪಂದ್ಯದ 23ನೇ ಓವರ್ನ ನಾಲ್ಕನೇ ಎಸೆತದಲ್ಲಿ ಲಬುಶೇನ್, ಥರ್ಡ್ ಮ್ಯಾನ್ ಕಡೆಗೆ ಆಡಿದರು. ಆದರೆ ಅಲ್ಲೇ ನಿಂತಿದ್ದ ರವೀಂದ್ರ ಜಡೇಜಾ, ಚೆಂಡು ತನ್ನೆಡೆಗೆ ಬರುವುದನ್ನು ಗಮನಿಸಿ, ಗಾಳಿಯಲ್ಲಿ ಜಿಗಿದು ಸುಂದರವಾದ ಒನ್ ಹ್ಯಾಂಡ್ ಕ್ಯಾಚ್ ಪಡೆದರು. ಜಡೇಜಾ ಹಿಡಿದ ಲಬುಶೇನ್ ಕ್ಯಾಚ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
What a catch by Ravindra Jadeja – he's an best fielder in the world.#jadeja #INDvsAUS #AUSvINDpic.twitter.com/obgWINP4nq
— ?⭐? (@superking1815) March 17, 2023
ಆಸೀಸ್ ಆಲೌಟ್
ಸದ್ಯ ಆಸ್ಟ್ರೇಲಿಯಾದ ಇನ್ನಿಂಗ್ಸ್ ಮುಗಿದಿದ್ದು, ಭಾರತದ ವೇಗಿಗಳ ದಾಳಿಗೆ ನಲುಗಿದ ಕಾಂಗರೂಗಳು ಕೇವಲ 188 ರನ್ಗಳಿಗೆ ಆಲೌಟ್ ಆಗಿದ್ದಾರೆ. ತಂಡದ ಪರ ಮಾರ್ಷ್ ಅತ್ಯಧಿಕ 81 ರನ್ಗಳಿಸಿದರೆ, ನಾಯಕ ಸ್ಮಿತ್ 21 ಹಾಗೂ ಜೋಶ್ ಇಂಗ್ಲಿಸ್ 26 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಆಸೀಸ್ ತಂಡದ ಮತ್ತ್ಯಾವ ಆಟಗಾರನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುವ ಸಾಹಸ ಮಾಡಲಿಲ್ಲ. ಭಾರತದ ಪರ ಶಮಿ ಹಾಗೂ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಜಡೇಜಾ 2 ವಿಕೆಟ್, ನಾಯಕ ಪಾಂಡ್ಯ ಹಾಗೂ ಕುಲ್ದೀಪ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 17 March 23