IND vs AUS: ಸಚಿನ್ ದಾಖಲೆ ಸರಿಗಟ್ಟುವ ತವಕದಲ್ಲಿ ಕಿಂಗ್ ಕೊಹ್ಲಿ; ಏಕದಿನದಲ್ಲೂ ಬರುತ್ತಾ ಶತಕ?

IND vs AUS: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 43 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 54.81 ಸರಾಸರಿಯಲ್ಲಿ ಒಟ್ಟು 2083 ರನ್ ಗಳಿಸಿದ್ದಾರೆ.

IND vs AUS: ಸಚಿನ್ ದಾಖಲೆ ಸರಿಗಟ್ಟುವ ತವಕದಲ್ಲಿ ಕಿಂಗ್ ಕೊಹ್ಲಿ; ಏಕದಿನದಲ್ಲೂ ಬರುತ್ತಾ ಶತಕ?
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Mar 16, 2023 | 2:20 PM

ಟೆಸ್ಟ್ ನಂತರ, ಇದೀಗ ಏಕದಿನ ಸರಣಿಯ ಸರದಿಯಾಗಿದ್ದು, ಶುಕ್ರವಾರದಿಂದ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸದ್ಯ ಟೆಸ್ಟ್ ಸರಣಿ ಸೋತಿರುವ ಕಾಂಗರೂಗಳಿಗೆ ಏಕದಿನ ಸರಣಿ ಗೆಲ್ಲಲೇಬೇಕಾದ ಒತ್ತಡವಿದೆ. ಆದರೆ ಭಾರತದಲ್ಲಿ ಭಾರತವನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಆಸಿಸ್ ಪಡೆಗೂ ತಿಳಿದಿದೆ. ಅದರಲ್ಲೂ ಮೂರು ಮಾದರಿಯಲ್ಲೂ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿಯನ್ನು (Virat Kohli) ಕಟ್ಟಿಹಾಕುವುದೇ ಆಸೀಸ್​ಗೆ ದೊಡ್ಡ ತಲೆನೋವಾಗಿದೆ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಏಕದಿನ ಶತಕದ ಬರ ನೀಗಿಸಿದ್ದ ವಿರಾಟ್, ನಂತರ ಶ್ರೀಲಂಕಾ ವಿರುದ್ಧ ಎರಡು ಶತಕ ಸಿಡಿಸಿದ್ದರು. ಆದರೆ ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯವನ್ನಾಡುತ್ತಿರುವ ಕೊಹ್ಲಿ ಶತಕ ಬಾರಿಸುವುದರೊಂದಿಗೆ ದೊಡ್ಡ ದಾಖಲೆಯನ್ನು ಸರಿಗಟ್ಟುವ ಹೊಸ್ತಿಲಿನಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 43 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 54.81 ಸರಾಸರಿಯಲ್ಲಿ ಒಟ್ಟು 2083 ರನ್ ಗಳಿಸಿದ್ದಾರೆ. ಹಾಗೆಯೇ ಭಾರತದಲ್ಲಿ ಒಟ್ಟು 107 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, ಇದರಲ್ಲಿ 5358 ರನ್ ಬಾರಿಸಿದ್ದಾರೆ. ಈ ಸಮಯದಲ್ಲಿ 58.87 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಖಾತೆಯಲ್ಲಿ 21 ಶತಕಗಳು ಸೇರಿವೆ. ಇದೀಗ ವಿರಾಟ್ ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಏಕದಿನ ಶತಕ ಬಾರಿಸಿದರೆ ಸಚಿನ್ ದಾಖಲೆಯನ್ನು ಸರಿಗಟ್ಟಲ್ಲಿದ್ದಾರೆ. ವಾಸ್ತವವಾಗಿ ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಏಕದಿನ ಶತಕಗಳನ್ನು ಬಾರಿಸಿದ್ದು, ಸದ್ಯ ವಿರಾಟ್ 8 ಶತಕ ಸಿಡಿಸಿದ್ದಾರೆ.

ಆಡಂ ಗಿಲ್​ಕ್ರಿಸ್ಟ್ ವಿಶ್ವದ ಶ್ರೀಮಂತ ಕ್ರಿಕೆಟಿಗನಾ? ಇಲ್ಲಿದೆ 3800 ಕೋಟಿ ಸಂಪತ್ತಿನ ಅಸಲಿ ಸತ್ಯ..!

ವಾಂಖೆಡೆಯಲ್ಲಿ ವಿರಾಟ್‌ ದಾಖಲೆ ಅದ್ಭುತ

ಸರಣಿಯ ಮೊದಲ ಏಕದಿನ ಪಂದ್ಯ ವಾಂಖೆಡೆಯಲ್ಲಿ ನಡೆಯುತ್ತಿದ್ದು, ಈ ಮೈದಾನದಲ್ಲಿ ವಿರಾಟ್ ಅವರ ದಾಖಲೆ ಅದ್ಭುತವಾಗಿದೆ. ವಿರಾಟ್ ವಾಂಖೆಡೆಯಲ್ಲಿ ಇದುವರೆಗೆ 5 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 66.25 ಸರಾಸರಿಯಲ್ಲಿ 265 ರನ್ ಗಳಿಸಿದ್ದಾರೆ. ಅಲ್ಲದೆ 2017ರಲ್ಲಿ ವಿರಾಟ್ ಇದೇ ಮೈದಾನದಲ್ಲಿ ಶತಕ ಬಾರಿಸಿದ್ದರು. ಸದ್ಯ ಅಹಮದಾಬಾದ್ ಟೆಸ್ಟ್‌ನಲ್ಲಿ 186 ರನ್ ಗಳಿಸಿ ಪಂದ್ಯಶ್ರೇಷ್ಠ ಎನಿಸಿಕೊಂಡಿರುವ ವಿರಾಟ್, ಏಕದಿನ ಮಾದರಿಯಲ್ಲೂ ಇದರ ಲಾಭ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

16 ಇನ್ನಿಂಗ್ಸ್‌ಗಳಲ್ಲಿ 5 ಬಾರಿ ಔಟ್

ಆದರೆ ಕೊಹ್ಲಿಗೆ ಆಸೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಶತಕ ಸಿಡಿಸುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಆಸೀಸ್ ಏಕದಿನ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಆಡಮ್ ಝಂಪಾ ಅವರಂತಹ ಬೌಲರ್‌ಗಳಿದ್ದಾರೆ. ಅದರಲ್ಲೂ ಝಂಪಾ ವಿರುದ್ಧ ಕೊಹ್ಲಿ ಆಟ ನಡೆಯುವುದಿಲ್ಲ ಎಂಬುದಕ್ಕೆ ಈ ಅಂಕಿ ಅಂಶ ಸಾಕ್ಷ್ಯ ನುಡಿಯುತ್ತಿದೆ. ಆಸೀಸ್ ವಿರುದ್ಧ ಕೊಹ್ಲಿ ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ಬಾರಿ ಝಂಪಾಗೆ ಬಲಿಯಾಗಿದ್ದಾರೆ. ಹೀಗಿರುವಾಗ ಈ ಬಾರಿಯ ಏಕದಿನ ಸರಣಿಯಲ್ಲಿ ವಿರಾಟ್‌ಗೆ ಝಂಪಾರನ್ನು ಎದುರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Thu, 16 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್