- Kannada News Photo gallery Cricket photos ipl 202 David Warner to lead Delhi Capitals Axar Patel to be vice captain
IPL 2023: ಡೆಲ್ಲಿ ತಂಡಕ್ಕೆ ಹೊಸ ನಾಯಕ, ಅಕ್ಷರ್ಗೆ ಉಪನಾಯಕತ್ವ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸ್
IPL 2023: ವಾಸ್ತವವಾಗಿ ಕಳೆದ ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಡೆಲ್ಲಿ ತಂಡದ ನಾಯಕ ಪಂತ್ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಪಂತ್ ಅನುಪಸ್ಥಿತಿಯಲ್ಲಿ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.
Updated on: Mar 16, 2023 | 12:16 PM

ಡೇವಿಡ್ ವಾರ್ನರ್‌ಗೆ ಐಪಿಎಲ್ 2023 ರ ದೊಡ್ಡ ಜವಾಬ್ದಾರಿಯನ್ನು ವಹಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನಾಗಿ ಮಾಡಿದೆ. ಕಳೆದ ವರ್ಷವಷ್ಟೇ ತಂಡವನ್ನು ಸೇರಿಕೊಂಡಿದ್ದ ವಾರ್ನರ್‌ಗೆ ಡೆಲ್ಲಿ ತಂಡದ ನಾಯಕತ್ವ ಸಿಗುವುದು ಈ ಹಿಂದೆಯೇ ಖಚಿತವಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

ಆದರೀಗ ಅಧಿಕೃತ ಹೇಳಿಕೆ ನೀಡಿರುವ ಡೆಲ್ಲಿ ಫ್ರಾಂಚೈಸ್, ರಿಷಭ್ ಪಂತ್ ಗಾಯಗೊಂಡಿರುವ ಕಾರಣ ವಾರ್ನರ್‌ಗೆ ತಂಡದ ನಾಯಕತ್ವ ನೀಡಿರುವುದಾಗಿ ಹೇಳಿಕೊಂಡಿದೆ. ಹಾಗೆಯೇ ವಾರ್ನರ್ ಜೊತೆಗೆ ಅಕ್ಷರ್ ಪಟೇಲ್ಗೆ ತಂಡದ ಉಪನಾಯಕತ್ವವಹಿಸಿಕೊಡಲಾಗಿದೆ.

ವಾಸ್ತವವಾಗಿ ಕಳೆದ ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಡೆಲ್ಲಿ ತಂಡದ ನಾಯಕ ಪಂತ್ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಪಂತ್ ಅನುಪಸ್ಥಿತಿಯಲ್ಲಿ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.

2021ರ ಐಪಿಎಲ್ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್, ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ವಾರ್ನರ್ ಈ ಹಿಂದೆ ಹೈದರಾಬಾದ್ ತಂಡದ ನಾಯಕರಾಗಿದ್ದರು. ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ತಂಡ 2016 ರಲ್ಲಿ ಚಾಂಪಿಯನ್ ಆಗಿತ್ತು.

ಕಳೆದ ಸೀಸನ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ವಾರ್ನರ್, ಆಡಿದ 12 ಪಂದ್ಯಗಳಲ್ಲಿ 150 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 48 ರ ಸರಾಸರಿಯಲ್ಲಿ 432 ರನ್ ಬಾರಿಸಿದರು.

ಡೇವಿಡ್ ವಾರ್ನರ್ ಇದುವರೆಗೆ 162 ಐಪಿಎಲ್ ಪಂದ್ಯಗಳನ್ನಾಡಿದ್ದು ಇದರಲ್ಲಿ 42 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 5881 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 55 ಅರ್ಧ ಶತಕಗಳು ಸೇರಿವೆ.




