AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs MI: ಭರ್ಜರಿ ಸೇಲ್ ಆಗುತ್ತಿದೆ ಆರ್​ಸಿಬಿ-ಮುಂಬೈ ಪಂದ್ಯದ ಟಿಕೆಟ್: ಖಾಲಿಯಾಗುವ ಮುನ್ನ ಬುಕ್ ಮಾಡಿ

IPL 2023: ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಇದೀಗ ಈ ಪಂದ್ಯದ ಟಿಕೆಟ್ ಖರೀದಿಗೆ ಸಿಗುತ್ತಿದೆ.

Vinay Bhat
|

Updated on:Mar 16, 2023 | 10:46 AM

Share
ಭಾರತದಲ್ಲಿ ದೇಶೀಯ ಟೂರ್ನಿಗಳ ಹಬ್ಬ ಆರಂಭವಾಗಿದೆ. ಸದ್ಯ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು ರೋಚಕತೆ ಸೃಷ್ಟಿಸಿದೆ. ಇದಾದ ಬಳಿಕ ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚಾಲನೆ ಸಿಗಲಿದೆ. ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು ಮಾರ್ಚ್ 31 ರಂದು ಮೊದಲ ಪಂದ್ಯ ಏರ್ಪಡಿಸಲಾಗಿದೆ.

1 / 7
ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಇದೀಗ ಈ ಪಂದ್ಯದ ಟಿಕೆಟ್ ಖರೀದಿಗೆ ಸಿಗುತ್ತಿದೆ.

2 / 7
ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಆರಂಭಿಕ ಬೆಲೆ 2,310 ರೂ. ಯಿಂದ ಇದ್ದು 42,000 ರೂ. ವರೆಗಿನ ಟಿಕೆಟ್ ಖರೀದಿಗೆ ಲಭ್ಯವಿದೆ. ಈಗಾಗಲೇ ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕೂಡಲೇ ಖರೀದಿಸಿದರೆ ಬುಕ್ ಮಾಡಬಹುದು.

3 / 7
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲ ಪಂದ್ಯದ ಟಿಕೆಟ್ ಈಗಲೇ ಬುಕ್ ಮಾಡಲು ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಆರ್​ಸಿಬಿ vs ಮುಂಬೈ ಟಿಕೆಟ್ ಬೆಲೆ ಇಂತಿದೆ: 2310 ರೂ., 3300ರೂ., 4840ರೂ., 6049ರೂ., 9075ರೂ., 10890ರೂ., 24200ರೂ., 42350ರೂ.

4 / 7
ಇದರ ನಡುವೆ ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಆಘಾತ ಉಂಟಾಗಿದೆ. ಇಂಗ್ಲೆಂಡ್​ನ ಯುವ ಆಲ್​ರೌಂಡರ್ ವಿಲ್ ಜಾಕ್ಸ್ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಆರ್​ಸಿಬಿ ಇವರನ್ನು ಹರಾಜಿನಲ್ಲಿ ಬರೋಬ್ಬರಿ 3.2 ಕೋಟಿ ನೀಡಿ ಖರೀದಿಸಿತ್ತು. ಇದೀಗ ಗಾಯಗೊಂಡಿರುವುದರಿಂದ ವಿಲ್ ಜಾಕ್ಸ್​ ಐಪಿಎಲ್​ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.

5 / 7
ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ರಜತ್ ಪಾಟಿದಾರ್, ಶಹಬಾಜ್ ಅಹಮದ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವನಿಂದು ಹಸರಂಗ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಅವಿನಾಶ್ ಸಿಂಗ್, ಸೋನು ಯಾದವ್, ಆಕಾಶ್ ದೀಪ್.

6 / 7
ಮಾರ್ಚ್ 31 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದ್ದು ಮೇ 28 ಕ್ಕೆ ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿದೆ.

7 / 7

Published On - 10:46 am, Thu, 16 March 23

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು

60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್

ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್

ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು

ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು

ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್

ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!

ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?