- Kannada News Photo gallery Cricket photos Adam Gilchrist Responds his net worth richest cricketer in the world
ಆಡಂ ಗಿಲ್‌ಕ್ರಿಸ್ಟ್ ವಿಶ್ವದ ಶ್ರೀಮಂತ ಕ್ರಿಕೆಟಿಗನಾ? ಇಲ್ಲಿದೆ 3800 ಕೋಟಿ ಸಂಪತ್ತಿನ ಅಸಲಿ ಸತ್ಯ..!
ಇದೀಗ ಈ ಎಲ್ಲಾ ವದಂತಿಗೆ ಸ್ವತಃ ಗಿಲ್‌ಕ್ರಿಸ್ಟ್ ಅವರೇ ತೆರೆ ಎಳೆದಿದ್ದು, ವರ್ಲ್ಡ್ ಇಂಡೆಕ್ಸ್ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಇರುವ ಗಿಲ್‌ಕ್ರಿಸ್ಟ್ ನಾನಲ್ಲ ಎಂದಿದ್ದಾರೆ.
Updated on:Mar 16, 2023 | 1:10 PM

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಸುದ್ದಿಯೆಂದರೆ, ಅದು ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿ. ವರ್ಲ್ಡ್ ಇಂಡೆಕ್ಸ್ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ವಿಶ್ವದ10 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಆ ಪಟ್ಟಿ ನೋಡಿದ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆಂದರೆ ಆ ಪಟ್ಟಿಯ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಡಂ ಗಿಲ್‌ಕ್ರಿಸ್ಟ್ ಹೆಸರಿತ್ತು. ಈ ಆಸೀಸ್ ಕ್ರಿಕೆಟಿಗನ ಸಂಪತ್ತು 3800 ಕೋಟಿ ಇದೆ ಎಂದು ಉಲ್ಲೇಖ ಮಾಡಲಾಗಿತ್ತು.

ಆ ಬಳಿಕ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಇದೀಗ ಈ ಎಲ್ಲಾ ವದಂತಿಗೆ ಸ್ವತಃ ಗಿಲ್‌ಕ್ರಿಸ್ಟ್ ಅವರೇ ತೆರೆ ಎಳೆದಿದ್ದು, ವರ್ಲ್ಡ್ ಇಂಡೆಕ್ಸ್ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಇರುವ ಗಿಲ್‌ಕ್ರಿಸ್ಟ್ ನಾನಲ್ಲ ಎಂದಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಆಡಂ ಗಿಲ್ ಕ್ರಿಸ್ಟ್, ನನ್ನ ಸಂಪತ್ತು 3800 ಕೋಟಿ ಅಲ್ಲ. ನಾನು ಸಚಿನ್-ವಿರಾಟ್ ಮತ್ತು ಧೋನಿಗಿಂತಲೂ ಶ್ರೀಮಂತರಲ್ಲ. ಅಲ್ಲದೆ 3800 ಕೋಟಿ ಆಸ್ತಿ ಹೊಂದಿರುವ ಆಡಂ ಗಿಲ್‌ಕ್ರಿಸ್ಟ್ ಬೇರೊಬ್ಬ ವ್ಯಕ್ತಿ ಎಂದಿದ್ದಾರೆ. ಹೀಗಾಗಿ ಈ ವರದಿ ಸುಳ್ಳು ಎಂದು ಬರೆದುಕೊಂಡಿದ್ದಾರೆ.

ವಾಸ್ತವವಾಗಿ, ವರ್ಲ್ಡ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಆಡಮ್ ಗಿಲ್‌ಕ್ರಿಸ್ಟ್ ಅವರು ಫಿಟ್‌ನೆಸ್ ಜಿಮ್ ಸೆಂಟರ್ನ ಮಾಲೀಕರಾಗಿದ್ದಾರೆ. ಆಡಂ ಗಿಲ್‌ಕ್ರಿಸ್ಟ್ ಅಮೇರಿಕಾ ನಿವಾಸಿಯಾಗಿದ್ದು, ಅವರು F45 ಫಿಟ್‌ನೆಸ್ ಜಿಮ್ ನಡೆಸುತ್ತಿದ್ದಾರೆ. ಅಮೇರಿಕಾ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಜಿಮ್ ಫ್ರಾಂಚೈಸಿಗಳನ್ನು ಗಿಲ್‌ಕ್ರಿಸ್ಟ್ ಹೊಂದಿದ್ದಾರೆ ಎಂದು ಫ್ಯಾಕ್ಟ್ ಚೆಕ್ನಲ್ಲಿ ತಿಳಿದುಬಂದಿದೆ.

ಹೀಗಾಗಿ ಪ್ರಸ್ತುತ ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಕ್ರಿಕೆಟಿಕ ಎಂಬ ಖ್ಯಾತಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ. 2023 ರಲ್ಲಿ ಸಚಿನ್ ಅವರ ನಿವ್ವಳ ಮೌಲ್ಯ 170 ಮಿಲಿಯನ್ ಡಾಲರ್ ಆಗಿದೆ. ಅವರ ನಂತರದ ಸ್ಥಾನದಲ್ಲಿ 115 ಮಿಲಿಯನ್ ಡಾಲರ್ ಆಸ್ತಿ ಹೊಂದಿರುವ ಧೋನಿ ಇದ್ದಾರೆ. ಹಾಗೆಯೇ112 ಮಿಲಿಯನ್ ಡಾಲರ್ ಆಸ್ತಿಯೊಂದಿಗೆ ಭಾರತದ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಕ್ರಿಕೆಟಿಗನ ವಿಚಾರಕ್ಕೆ ಬಂದರೆ, ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 750 ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇವರ ಬಳಿಕ 300 ಕೋಟಿ ಆಸ್ತಿ ಹೊಂದಿರುವ ಸ್ಟೀವ್ ಸ್ಮಿತ್ ಇದ್ದಾರೆ.
Published On - 1:03 pm, Thu, 16 March 23




