ಐಪಿಎಲ್ ನಾಯಕತ್ವ, ಟಿ20 ನಾಯಕತ್ವ, ಒಡಿಐ ನಾಯಕತ್ವ ಕಳೆದುಕೊಂಡ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಕಳೆದುಕೊಂಡಿದ್ದಾರೆ. ಆದಾಗ್ಯೂ, ಈ ಎಲ್ಲ ಸಂಗತಿಗಳನ್ನು ಮೀರಿ, ವಿರಾಟ್ ಕೊಹ್ಲಿಯ ಮನಸ್ಸಿನಲ್ಲಿರುವ ದೊಡ್ಡ ವಿಷಯವೆಂದರೆ ಬಹುಶಃ ಅವರ ಬ್ಯಾಟ್‌ನ ಮೌನ. 2 ವರ್ಷಗಳು ಕಳೆದಿವೆ, ವಿರಾಟ್ ಕೊಹ್ಲಿ ಯಾವುದೇ ಮಾದರಿಯಲ್ಲಿ ಶತಕ ಬಾರಿಸಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಾಗಲೀ, ಇಂಗ್ಲೆಂಡ್ ಪ್ರವಾಸದಲ್ಲಾಗಲೀ, ನ್ಯೂಜಿಲೆಂಡ್‌ನಲ್ಲಾಗಲೀ ಕೊಹ್ಲಿ ಬ್ಯಾಟ್ ಆಗಸ ನೋಡಲೇ ಇಲ್ಲ. ವಿರಾಟ್ ಕೊಹ್ಲಿ 70 ಶತಕಗಳಿಗೆ ಅಂಟಿಕೊಂಡಿದ್ದಾರೆ. ಆದಾಗ್ಯೂ, ಅವರ ಶತಕಗಳ ಮೇಲಿನ ಜಾಮ್ ಶೀಘ್ರದಲ್ಲೇ ತೆರವಾಗಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದ್ದು, ಭಾರತೀಯ ಟೆಸ್ಟ್ ನಾಯಕ ಖಂಡಿತವಾಗಿಯೂ ತನ್ನ ಶತಕಗಳ ಬರವನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ವಿರಾಟ್ ಕೊಹ್ಲಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಭ್ಯಾಸ ಬರದಿಂದ ಸಾಗಿದೆ.
ಕೊಹ್ಲಿಗೆ ದ್ರಾವಿಡ್ ಪಾಠ
ವಿರಾಟ್ ಕೊಹ್ಲಿ ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಬಹುದು. ಅವರ ಬ್ಯಾಟ್‌ನಿಂದ 70 ಶತಕಗಳು ಬಂದಿವೆ ಆದರೆ ಎಷ್ಟೇ ದೊಡ್ಡ ಆಟಗಾರನಾಗಿದ್ದರೂ, ಅವರು ಖಂಡಿತವಾಗಿಯೂ ತಪ್ಪುಗಳನ್ನು ಮಾಡುತ್ತಾರೆ. ವಿರಾಟ್ ಅವರ ಈ ತಪ್ಪುಗಳ ಮೇಲೆ ಕೋಚ್ ರಾಹುಲ್ ದ್ರಾವಿಡ್ ಕಣ್ಣಿಟ್ಟಿದ್ದಾರೆ. ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಗಾಳಿಯಲ್ಲಿ ಡ್ರೈವ್ ಮಾಡಿದ್ದು, ನಂತರ ರಾಹುಲ್ ದ್ರಾವಿಡ್ ಅವರಿಗೆ ಏನೋ ವಿವರಿಸಿದ್ದಾರೆ.
Getting Test-match ready ? ?
? Snippets from #TeamIndia's first practice session ahead of the first #SAvIND Test. pic.twitter.com/QkrdgqP959
— BCCI (@BCCI) December 19, 2021
ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಅಬ್ಬರ
ವಿರಾಟ್ ಕೊಹ್ಲಿಗೆ ದಕ್ಷಿಣ ಆಫ್ರಿಕಾದ ಬೌನ್ಸಿ ಮತ್ತು ವೇಗದ ಪಿಚ್ ಇಷ್ಟ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ 55.80 ಸರಾಸರಿಯಲ್ಲಿ 558 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧ ಶತಕ ಸೇರಿವೆ. ವಿರಾಟ್ ಕೊಹ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದಾಗ, ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 96 ರನ್ ಗಳಿಸಿದ್ದರು. ಕಳೆದ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು. ಈ ಬಾರಿಯ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿರುವ ಸೆಂಚೂರಿಯನ್‌ನಲ್ಲಿಯೇ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಸಿರುವುದು ಒಳ್ಳೆಯ ಸಂಗತಿ. ಇನ್ನು ವಿರಾಟ್ ಕೊಹ್ಲಿ ಬ್ಯಾಟ್ ಘರ್ಜಿಸಲಿದ್ದು, ಅವರ ಶತಕದ ಬರ ನೀಗಲಿದೆ ಎಂದು ನಿರೀಕ್ಷಿಸಲಾಗಿದೆ.