BWF World Championship: ಬೆಳ್ಳಿಗೆ ತೃಪ್ತಿ ಪಟ್ಟ ಕಿಡಂಬಿ ಶ್ರೀಕಾಂತ್! ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನ
BWF World Championship: ಸ್ಪೇನ್‌ನ ಹುಯೆಲ್ವಾದಲ್ಲಿ ನಡೆದ BWF ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೀಕಾಂತ್ ಅವರನ್ನು 21-14, 21-20 ರಿಂದ ಮಣಿಸುವ ಮೂಲಕ ಸಿಂಗಾಪುರದ ಕೀನ್ ಯೆವ್ ಲೋಹ್ ಪ್ರಶಸ್ತಿಯನ್ನು ಗೆದ್ದರು.

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರ ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ. ಸ್ಪೇನ್‌ನ ಹುಯೆಲ್ವಾದಲ್ಲಿ ನಡೆದ BWF ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೀಕಾಂತ್ ಅವರನ್ನು 21-14, 21-20 ರಿಂದ ಸಿಂಗಾಪುರದ ಕೀನ್ ಯೆವ್ ಲೋಹ್ ಮಣಿಸಿ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಭಾರತ ಎರಡನೇ ವಿಶ್ವ ಚಾಂಪಿಯನ್ ಆಗುವ ಅವಕಾಶದಿಂದ ಹೊರಗುಳಿದಿತ್ತು. ಆದರೆ, ಈ ಸೋಲಿನ ನಡುವೆಯೂ ಕಿಡಂಬಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಶ್ರೀಕಾಂತ್ ಆಕ್ರಮಣಕಾರಿ ರೀತಿಯಲ್ಲಿ ಪಂದ್ಯ ಆರಂಭಿಸಿದರು. 12ನೇ ಶ್ರೇಯಾಂಕದ ಸ್ಟಾರ್ ಭಾರತದ ಆಟಗಾರ ಮೊದಲ ಗೇಮ್‌ನಲ್ಲಿ ತ್ವರಿತವಾಗಿ ಪಾಯಿಂಟ್ಸ್ ಕಲೆಹಾಕಿದರು. ಮೊದಲ ಗೇಮ್‌ನ ಅರ್ಧದ ವೇಳೆಗೆ ಕಿಡಂಬಿ 11-7ರಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ ವಿರಾಮದ ನಂತರ ಪರಿಸ್ಥಿತಿ ವೇಗವಾಗಿ ಬದಲಾಯಿತು. ಲೋಹ್ ಶೀಘ್ರದಲ್ಲೇ ಪುನರಾಗಮನವನ್ನು ಮಾಡಿದರು ಮತ್ತು 17-13 ಮುನ್ನಡೆ ಪಡೆದರು. ಇಲ್ಲಿ ಕಿಡಂಬಿ ಮತ್ತೊಮ್ಮೆ ಪಾಯಿಂಟ್ ಪಡೆದರು, ಆದರೆ ಅವರು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಂಗಾಪುರದ ಆಟಗಾರ ತಮ್ಮ ಅದ್ಭುತ ಪ್ರದರ್ಶನದ ಬಲದಿಂದ ಕೇವಲ 16 ನಿಮಿಷಗಳಲ್ಲಿ 21-15 ರಿಂದ ಗೇಮ್ ಅನ್ನು ಗೆದ್ದುಕೊಂಡರು.
ಎರಡನೇ ಗೇಮ್‌ನಲ್ಲಿ ಆರಂಭದಿಂದಲೂ ಪೈಪೋಟಿ ಹೆಚ್ಚಿತ್ತು. ಉಭಯ ಆಟಗಾರರು ಒಂದರ ಹಿಂದೆ ಒಂದರಂತೆ ಪಾಯಿಂಟ್ಸ್ ಪಡೆದು ಬಹಳ ಹೊತ್ತು ಸಮಬಲದಲ್ಲಿ ಇದ್ದರು. ಸ್ಕೋರ್ 9-9 ರಲ್ಲಿ ಸಮವಾಯಿತು. ಇಲ್ಲಿ ಲೋಹ್ ಸತತ ಎರಡು ಪಾಯಿಂಟ್‌ಗಳೊಂದಿಗೆ ವಿರಾಮ ತೆಗೆದುಕೊಂಡು 11-9 ಮುನ್ನಡೆ ಸಾಧಿಸಿದರು. ಪಂದ್ಯದ ದ್ವಿತೀಯಾರ್ಧದಲ್ಲಿ ಮತ್ತೆ ಬಿರುಸಿನ ಹೋರಾಟ ನಡೆದು ಪಂದ್ಯದಲ್ಲಿ ಹಿನ್ನಡೆ ಕಂಡಿದ್ದ ಕಿಡಂಬಿ ದಿಟ್ಟ ತಿರುಗೇಟು ನೀಡಿ 14-14ರಲ್ಲಿ ಸಮಬಲ ಸಾಧಿಸಿದರು.
ಇಲ್ಲಿಂದ ಉಭಯ ಆಟಗಾರರು ತಲಾ ಒಂದೊಂದು ಅಂಕ ಪಡೆಯುತ್ತಲೇ ಬಂದರು. ಒಂದು ಹಂತದಲ್ಲಿ ಪಂದ್ಯ 18-18ರಲ್ಲಿ ಸಮಬಲಗೊಂಡಿತು. ನಂತರ ಕಿಡಂಬಿ ಅವರ ತಪ್ಪುಗಳ ಲಾಭ ಪಡೆದ ಲೋಹ್ 20-18ರ ಮುನ್ನಡೆ ಪಡೆದರು. ಶ್ರೀಕಾಂತ್ ಸತತ ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿದರು, ಆದರೆ ಅಂತಿಮವಾಗಿ ಲೋಹ್ 22-20 ಗೇಮ್‌ನೊಂದಿಗೆ ಪಂದ್ಯವನ್ನು ಗೆದ್ದರು.
ದಿಗ್ಗಜರನ್ನು ಸೋಲಿಸಿ ಚಾಂಪಿಯನ್ ಆದ ಲೋಹ್ 24ರ ಹರೆಯದ ಲೋಹ್ ಅವರ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಇದಾಗಿದೆ. ಸಿಂಗಾಪುರದ ಯುವ ತಾರೆ ಈಗಾಗಲೇ ಮೊದಲ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಮತ್ತು ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದ್ದರು. ನಂತರ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಎಚ್ ಎಸ್ ಪ್ರಣಯ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಲೋಹ್ ಮತ್ತೊಮ್ಮೆ ಡೆನ್ಮಾರ್ಕ್‌ನ 3ನೇ ಶ್ರೇಯಾಂಕದ ಆಂಡ್ರೆಸ್ ಆಂಟೊನ್ಸೆನ್ ಅವರನ್ನು ಸೋಲಿಸಿದರು.
ಯಮಗುಚಿ ಚಾಂಪಿಯನ್ ಮಹಿಳೆಯರ ಸಿಂಗಲ್ಸ್ನಲ್ಲಿ ಮತ್ತೊಮ್ಮೆ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ತೈವಾನ್ ನ ತೈ ತ್ಸು ಪ್ರಶಸ್ತಿಯಿಂದ ವಂಚಿತರಾದರು. ತೈ ತ್ಸು ಅವರನ್ನು ಜಪಾನಿನ ದಿಗ್ಗಜ ಅಕಾನೆ ಯಮಗುಚಿ 21-14, 21-11 ಸೆಟ್‌ಗಳಿಂದ ಸೋಲಿಸಿ ಎರಡನೇ ಬಾರಿ ಪ್ರಶಸ್ತಿ ಗೆದ್ದರು. ಈ ಮೂಲಕ ತೈ ತ್ಸು ಈ ವರ್ಷ ಸತತ ಎರಡನೇ ದೊಡ್ಡ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು. ಇದಕ್ಕೂ ಮುನ್ನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಸೋಲನುಭವಿಸಬೇಕಾಯಿತು.
Published On - 8:24 pm, Sun, 19 December 21