AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ವಿರಾಟ್ ಶತಕದ ಬರ ನೀಗಲಿದೆ; ಕಿಂಗ್ ಕೊಹ್ಲಿಗೆ ಬ್ಯಾಟಿಂಗ್ ಪಾಠ ಮಾಡಿದ ಗುರು ದ್ರಾವಿಡ್

IND vs SA: ವಿರಾಟ್ ಕೊಹ್ಲಿಗೆ ದಕ್ಷಿಣ ಆಫ್ರಿಕಾದ ಬೌನ್ಸಿ ಮತ್ತು ವೇಗದ ಪಿಚ್ ಇಷ್ಟ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ 55.80 ಸರಾಸರಿಯಲ್ಲಿ 558 ರನ್ ಗಳಿಸಿದ್ದಾರೆ.

IND vs SA: ವಿರಾಟ್ ಶತಕದ ಬರ ನೀಗಲಿದೆ; ಕಿಂಗ್ ಕೊಹ್ಲಿಗೆ ಬ್ಯಾಟಿಂಗ್ ಪಾಠ ಮಾಡಿದ ಗುರು ದ್ರಾವಿಡ್
ದ್ರಾವಿಡ್, ಕೊಹ್ಲಿ
TV9 Web
| Edited By: |

Updated on: Dec 19, 2021 | 7:35 PM

Share

ಐಪಿಎಲ್ ನಾಯಕತ್ವ, ಟಿ20 ನಾಯಕತ್ವ, ಒಡಿಐ ನಾಯಕತ್ವ ಕಳೆದುಕೊಂಡ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಕಳೆದುಕೊಂಡಿದ್ದಾರೆ. ಆದಾಗ್ಯೂ, ಈ ಎಲ್ಲ ಸಂಗತಿಗಳನ್ನು ಮೀರಿ, ವಿರಾಟ್ ಕೊಹ್ಲಿಯ ಮನಸ್ಸಿನಲ್ಲಿರುವ ದೊಡ್ಡ ವಿಷಯವೆಂದರೆ ಬಹುಶಃ ಅವರ ಬ್ಯಾಟ್‌ನ ಮೌನ. 2 ವರ್ಷಗಳು ಕಳೆದಿವೆ, ವಿರಾಟ್ ಕೊಹ್ಲಿ ಯಾವುದೇ ಮಾದರಿಯಲ್ಲಿ ಶತಕ ಬಾರಿಸಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಾಗಲೀ, ಇಂಗ್ಲೆಂಡ್ ಪ್ರವಾಸದಲ್ಲಾಗಲೀ, ನ್ಯೂಜಿಲೆಂಡ್‌ನಲ್ಲಾಗಲೀ ಕೊಹ್ಲಿ ಬ್ಯಾಟ್ ಆಗಸ ನೋಡಲೇ ಇಲ್ಲ. ವಿರಾಟ್ ಕೊಹ್ಲಿ 70 ಶತಕಗಳಿಗೆ ಅಂಟಿಕೊಂಡಿದ್ದಾರೆ. ಆದಾಗ್ಯೂ, ಅವರ ಶತಕಗಳ ಮೇಲಿನ ಜಾಮ್ ಶೀಘ್ರದಲ್ಲೇ ತೆರವಾಗಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದ್ದು, ಭಾರತೀಯ ಟೆಸ್ಟ್ ನಾಯಕ ಖಂಡಿತವಾಗಿಯೂ ತನ್ನ ಶತಕಗಳ ಬರವನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ವಿರಾಟ್ ಕೊಹ್ಲಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಭ್ಯಾಸ ಬರದಿಂದ ಸಾಗಿದೆ.

ಕೊಹ್ಲಿಗೆ ದ್ರಾವಿಡ್ ಪಾಠ ವಿರಾಟ್ ಕೊಹ್ಲಿ ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಬಹುದು. ಅವರ ಬ್ಯಾಟ್‌ನಿಂದ 70 ಶತಕಗಳು ಬಂದಿವೆ ಆದರೆ ಎಷ್ಟೇ ದೊಡ್ಡ ಆಟಗಾರನಾಗಿದ್ದರೂ, ಅವರು ಖಂಡಿತವಾಗಿಯೂ ತಪ್ಪುಗಳನ್ನು ಮಾಡುತ್ತಾರೆ. ವಿರಾಟ್ ಅವರ ಈ ತಪ್ಪುಗಳ ಮೇಲೆ ಕೋಚ್ ರಾಹುಲ್ ದ್ರಾವಿಡ್ ಕಣ್ಣಿಟ್ಟಿದ್ದಾರೆ. ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಗಾಳಿಯಲ್ಲಿ ಡ್ರೈವ್ ಮಾಡಿದ್ದು, ನಂತರ ರಾಹುಲ್ ದ್ರಾವಿಡ್ ಅವರಿಗೆ ಏನೋ ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಅಬ್ಬರ ವಿರಾಟ್ ಕೊಹ್ಲಿಗೆ ದಕ್ಷಿಣ ಆಫ್ರಿಕಾದ ಬೌನ್ಸಿ ಮತ್ತು ವೇಗದ ಪಿಚ್ ಇಷ್ಟ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ 55.80 ಸರಾಸರಿಯಲ್ಲಿ 558 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧ ಶತಕ ಸೇರಿವೆ. ವಿರಾಟ್ ಕೊಹ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದಾಗ, ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 96 ರನ್ ಗಳಿಸಿದ್ದರು. ಕಳೆದ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು. ಈ ಬಾರಿಯ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿರುವ ಸೆಂಚೂರಿಯನ್‌ನಲ್ಲಿಯೇ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಸಿರುವುದು ಒಳ್ಳೆಯ ಸಂಗತಿ. ಇನ್ನು ವಿರಾಟ್ ಕೊಹ್ಲಿ ಬ್ಯಾಟ್ ಘರ್ಜಿಸಲಿದ್ದು, ಅವರ ಶತಕದ ಬರ ನೀಗಲಿದೆ ಎಂದು ನಿರೀಕ್ಷಿಸಲಾಗಿದೆ.

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ