ರಶೀದ್ ಖಾನ್ ಲಿಸ್ಟ್ ಮಾಡಿರುವ ಟಾಪ್ 5 ಟಿ20 ಕ್ರಿಕೆಟ್ ಆಟಗಾರರಲ್ಲಿ ಮೊದಲ ಹೆಸರು ವಿರಾಟ್ ಕೊಹ್ಲಿ!
ರಶೀದ್ ಅವರ ಲಿಸ್ಟ್ನಲ್ಲಿ ಮೂವರು ಟಾಪ್ ಕ್ವಾಲಿಟಿ ಬ್ಯಾಟರ್ಗಳಿದ್ದರೆ ಇಬ್ಬರು ಆಲ್-ರೌಂಡರ್ಗಳು. ಅಂದಹಾಗೆ, ರಶೀದ್ ಪ್ರಕಾರ ನಂಬರ್ ವನ್ ಟಿ20 ಆಟಗಾರನೆಂದರೆ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ.
ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ತನ್ನ ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹೆಚ್ಚು ಜನಪ್ರಿಯ ಹಾಗೂ ಆಸಕ್ತಿಕರ ಮಾಡಲು ಐಸಿಸಿ ಹಲವಾರು ಸ್ಕೀಮ್ಗಳನ್ನು ಆರಂಭಿಸಿದೆ. ಅವುಗಳಲ್ಲೊಂದು ಅಂದರೆ, ಟಿ20 ಕ್ರಿಕೆಟ್ನಲ್ಲಿ ಟಾಪ್ 5 ಆಟಗಾರರು ಯಾರು ಅನ್ನೋದನ್ನು ವಿಶ್ವದ ಪ್ರಮುಖ ಆಟಗಾರರಿಂದ ಪಟ್ಟಿ ಮಾಡಿಸುವುದು. ಅಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ತಮ್ಮ ಟಾಪ್ 5 ಆಟಗಾರರನ್ನು ಲಿಸ್ಟ್ ಮಾಡಿದ್ದು ಅದರಲ್ಲಿ ಇಬ್ಬರು ಭಾರತೀಯರು!!
ರಶೀದ್ ಅವರ ಲಿಸ್ಟ್ನಲ್ಲಿ ಮೂವರು ಟಾಪ್ ಕ್ವಾಲಿಟಿ ಬ್ಯಾಟರ್ಗಳಿದ್ದರೆ ಇಬ್ಬರು ಆಲ್-ರೌಂಡರ್ಗಳು. ಅಂದಹಾಗೆ, ರಶೀದ್ ಪ್ರಕಾರ ನಂಬರ್ ವನ್ ಟಿ20 ಆಟಗಾರನೆಂದರೆ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ.
‘ವಿರಾಟ್ ಯಾವತ್ತೂ ಪಿಚ್ ಹೇಗಿದೆ ಅಂತ ಯೋಚನೆ ಮಾಡುವುದಿಲ್ಲ. ಅಂಕಣ ಹೇಗಾದರೂ ಇರಲಿ ಅವರು ರನ್ ಗಳಿಸುತ್ತಾರೆ. ಅವರನ್ನು ತಡೆಯುವುದು ಬಹಳ ಕಷ್ಟ,’ ಎಂದು ರಶೀದ್ ಹೇಳಿದ್ದಾರೆ.
ಪುರುಷರ ಟಿ20ಐ ಕ್ರಿಕೆಟ್ನಲ್ಲಿ ವಿರಾಟ್ ಅತ್ಯಧಿಕ ರನ್ ಗಳಿಸಿರುವ ಹೆಗ್ಗಳಿಕೆಯನ್ನು ಹೊಂದಿದ್ದು, ಇದುವರೆಗೆ ಆಡಿರುವ 90 ಪಂದ್ಯಗಳಿಂದ 52.65 ಸರಾಸರಿ ಮತ್ತು 139.04 ಸ್ಟ್ರೈಕ್ ರೇಟ್ನಲ್ಲಿ 3,159 ರನ್ ಗಳಿಸಿದ್ದಾರೆ.
ಕೊಹ್ಲಿ ಅವರ ಸಮಕಾಲೀನ ಮತ್ತು ನ್ಯೂಜಿಲೆಂಡ್ ಟೀಮಿನ ನಾಯಕ ಕೇನ್ ವಿಲಯಮ್ಸನ್ ಅವರನ್ನು ರಶೀದ್ ಎರಡನೇ ಸ್ಥಾನದಲ್ಲಿಟ್ಟಿದ್ದಾರೆ. ರಶೀದ್ ಮತ್ತು ಕೇನ್ ಐಪಿಎಲ್ನಲ್ಲಿ ಎಸ್ ಎರ್ ಹೆಚ್ ಪರ ಆಡುತ್ತಾರೆ. ಕೇನ್ ಅವರ ಶಾಂತ ಮನೋಭಾವ ತಂಡದ ಎಲ್ಲ ಸದಸ್ಯರಲ್ಲಿ ನಿರಾತಂಕ ಭಾವವನ್ನು ಸೃಷ್ಟಿಸುತ್ತದೆ ಎಂದು ರಶೀದ್ ಹೇಳುತ್ತಾರೆ. ಕೇನ್, ಟಿ20ಐ ಪಂದ್ಯಗಳಲ್ಲಿ 31 ರನ್ ಸರಾಸರಿ ಮತ್ತು 125 ಸ್ಟ್ರೈಕ್ ರೇಟ್ನೊಂದಿಗೆ 1,805 ರನ್ ಗಳಿಸಿದ್ದಾರೆ.
ರಶೀದ್ ಲಿಸ್ಟ್ನಲ್ಲಿರುವ ಮೂರನೇ ಟಾಪ್ ಬ್ಯಾಟರ್ ಎಂದರೆ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿ ವಿಲ್ಲಿಯರ್ಸ್. ‘ಅವರು ವಿಧ್ವಂಸಕ ಬ್ಯಾಟರ್. ತಮ್ಮ ತಂಡ ಎಷ್ಟೇ ನಾಜೂಕು ಸ್ಥಿತಿಯಲ್ಲಿದ್ದರೂ ರನ್ ಗಳಿಸುವ ಸಾಮರ್ಥ್ಯ ಅವರಲ್ಲಿದೆ. ಅಷ್ಟು ಮಾತ್ರವಲ್ಲ ಎದುರಾಳಿ ತಂಡದ ಬೌಲರ್ನ ಖ್ಯಾತಿ ಎಷ್ಟೇ ದೊಡ್ಡದಾಗಿದ್ದರೂ ಎಬಿಡಿ ಚಚ್ಚದೆ ಬಿಡಲಾರರು ಮತ್ತು ಯಾವುದೇ ಹೊಡೆತವನ್ನು ಅವರು ಬಾರಿಸಬಲ್ಲರು. ಕ್ಯಾಪ್ಟನ್ ಯಾರೇ ಆಗಿರಲಿ, ಎಬಿಡಿ ತನ್ನ ತಂಡದಲ್ಲಿರುವುದನ್ನು ಇಷ್ಟಪಡುತ್ತಾನೆ,’ ಎಂದು ರಶೀದ್ ಹೇಳಿದ್ದಾರೆ.
ಆಲ್-ರೌಂಡರ್ಗಳಲ್ಲಿ ರಶೀದ್ ಭಾರತದ ಹಾರ್ದಿಕ್ ಪಾಂಡ್ಯ ಮತ್ತು ವೆಸ್ಟ್ ಇಂಡೀಸ್ ನ ಕೈರನ್ ಪೊಲ್ಲಾರ್ಡ್ ಅವರನ್ನು ಆರಿಸಿದ್ದಾರೆ.
‘ಹಾರ್ದಿಕ್ ಮತ್ತು ಪೊಲ್ಲಾರ್ಡ್ ನನ್ನ ಪಟ್ಟಿಯಲ್ಲಿ ಯಾಕಿದ್ದಾರೆ ಅಂದರೆ, ಕೊನೆಯ 4-5 ಓವರ್ಗಳಲ್ಲಿ ಗೆಲ್ಲಲು 80-90 ರನ್ ಗಳ ಅವಶ್ಯಕತೆಯಿದ್ದರೆ ಗಳಿಸುವ ಸಾಮರ್ಥ್ಯ ಅವರಲ್ಲಿದೆ, ಮತ್ತು ಅವರ ಮೇಲೆ ಭಾರ ಹಾಕಿ ಕ್ಯಾಪ್ಟನ್ ನಿಶ್ಚಿಂತೆಯಿಂದ ಇರಬಹುದು,’ ಎಂದು ರಶೀದ್ ಹೇಳಿದ್ದಾರೆ.
ಮುಂಬೈ ಪರ ಐಪಿಎಲ್ ನಲ್ಲಿ ಆಡುವ ಹಾರ್ದಿಕ್ ಮತ್ತು ಪೊಲ್ಲಾರ್ಡ್ ಅವರ ವಿಧ್ವಂಸಕ ಬ್ಯಾಟಿಂಗ್ ಮತ್ತು ಉಪಯುಕ್ತ ಬೌಲಿಂಗ್ ಪ್ರದರ್ಶನಗಳನ್ನು ಎಸ್ ಅರ್ ಹೆಚ್ ಪರ ಆಡುವ ರಶೀದ್ ಪ್ರತಿ ಸೀಸನಲ್ಲಿ ಬಹಳ ಹತ್ತಿರದಿಂದ ಗಮನಿಸುತ್ತಾರೆ.
ಇದನ್ನೂ ಓದಿ: IPL 2021: ಧೋನಿ, ಪಂತ್, ಮೋರ್ಗನ್, ಕೊಹ್ಲಿ; ಈ ಐಪಿಎಲ್ನ ಟಾಪ್ ತಂಡಗಳ ಫ್ಲಾಪ್ ಕ್ಯಾಪ್ಟನ್ಸ್ ವರದಿ ಹೀಗಿದೆ