ಜುಲೈ 4 ರಂದು ಮುಂಬೈನಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ 2024 ರ ವಿಜಯವನ್ನು ಸಂಭ್ರಮದಿಂದ ಆಚರಿಸಿತು. ಮುಂಬೈನ ಬೀದಿಗಳಲ್ಲಿ ಅಭಿಮಾನಿಗಳು ಟೀಂ ಇಂಡಿಯಾದ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ವಾಂಖೆಡೆ ಸ್ಟೇಡಿಯಂ ತನಕ ಟೀಂ ಇಂಡಿಯಾ ಮೆಗಾ ರೋಡ್ ಶೋ ನಡೆಸಿತು. ಟೀಂ ಇಂಡಿಯಾದ ಎಲ್ಲಾ ಆಟಗಾರರು ಬಸ್‌ನ ಮೇಲ್ಛಾವಣಿಯಲ್ಲಿ ಹಾಜರಿದ್ದು ಅಭಿಮಾನಿಗಳ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ವಿರಾಟ್ ಕೊಹ್ಲಿ ಕೂಡ ತಂಡದೊಂದಿಗೆ ಹಾಜರಿದ್ದು ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದರು. ಆ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ವಿಜಯೋತ್ಸವದ ಮೆರವಣಿಗೆ ನಡೆಸಿತು. ಇದರಲ್ಲಿ ವಿರಾಟ್ ಕೊಹ್ಲಿ ವಂದೇ ಮಾತರಂ ಹಾಡುತ್ತಾ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಆದರೆ ಈ ವಿಜಯೋತ್ಸವ ಮುಗಿದ ಕೂಡಲೇ ವಿರಾಟ್ ಕೊಹ್ಲಿ ರಾತ್ರೋರಾತ್ರಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ.
He loves his wife and kids so much. Was jet lagged from Barbados to Delhi, met PM, then took a flight to Mumbai with the team, did a roadshow, attended Wankhede event, danced and now without further delay heading to London. Not even a night’s rest.
What a guy, Virat Kohli🧿💗 pic.twitter.com/u6FFeK5gE2
— Alaska 🇮🇳❤️ (@alaskawhines) July 4, 2024
ಮುಂಬೈನಲ್ಲಿ ವಿಜಯೋತ್ಸವ ಪರೇಡ್ ಮುಗಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕಿಂಗ್ ಕೊಹ್ಲಿ ಲಂಡನ್‌ಗೆ ತೆರಳಿದರು. ವಾಸ್ತವವಾಗಿ ಅನುಷ್ಕಾ ಶರ್ಮಾ, ವಾಮಿಕ್ ಮತ್ತು ಅಕಾಯ್ ಲಂಡನ್‌ನಲ್ಲಿದ್ದಾರೆ, ಆದ್ದರಿಂದ ವಿರಾಟ್ ಕೊಹ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಲಂಡನ್‌ಗೆ ತೆರಳಿದ್ದಾರೆ. ಇದಕ್ಕೂ ಮುನ್ನ ವಿರಾಟ್ ದೆಹಲಿಯಲ್ಲಿ ತನ್ನ ಸಹೋದರ ಮತ್ತು ಸಹೋದರಿಯನ್ನು ಭೇಟಿ ಮಾಡಿದರು.
ಲಂಡನ್‌ಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಮರೈನ್ ಡ್ರೈವ್‌ನಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ಅವರು ಲಕ್ಷಾಂತರ ಅಭಿಮಾನಿಗಳ ನಡುವೆ ವಂದ್ ಮಾತರಂ ಘೋಷಣೆಗಳನ್ನು ಕೂಗಿದರು. ವಿರಾಟ್ ಮತ್ತು ರೋಹಿತ್ ಒಟ್ಟಿಗೆ ಟ್ರೋಫಿ ಎತ್ತಿ ಅಭಿಮಾನಿಗಳತ್ತ ನೋಡಿ ಜೋರಾಗಿ ಕೂಗಿದರು. ಇದಾದ ಬಳಿಕ ವಿಶ್ವ ಚಾಂಪಿಯನ್ ತಂಡ ಮುಂಬೈನ ವಾಂಖೆಡೆ ಸ್ಟೇಡಿಯಂ ತಲುಪಿದಾಗ ಸಾವಿರಾರು ಅಭಿಮಾನಿಗಳು ಇಬ್ಬರಿಗೂ ಜೈಕಾರ ಹಾಕಿದರು. ಈ ವೇಳೆ ಇಬ್ಬರೂ ಆಟಗಾರರು ಒಟ್ಟಿಗೆ ಡ್ಯಾನ್ಸ್ ಮಾಡಿದ್ದು ಕಂಡುಬಂತು.
Virat Kohli Sir में आज भी 18 साल के लड़के जैसी ऊर्जा है । आज king ने 140 करोड़ देशवशियो का दिल खुश कर दिया pic.twitter.com/Lc4yAHJ5Gz
— Pooja Bishnoi (@poojabishnoi36) July 4, 2024
2024 ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಇನ್ನಿಂಗ್ಸ್‌ಗಾಗಿ ಕೊಹ್ಲಿ ಪಂದ್ಯದ ಆಟಗಾರರಾಗಿಯೂ ಆಯ್ಕೆಯಾದರು. ಅಷ್ಟೇ ಅಲ್ಲ, ವಿಶ್ವಕಪ್ ಫೈನಲ್ ಬಳಿಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Fri, 5 July 24