ಶೇಕ್ ಹ್ಯಾಂಡ್ ಮಾಡಿ ವಿರಾಟ್ ಕೊಹ್ಲಿಯನ್ನೇ ನೋಡುತ್ತಾ ನಿಂತ ಜಯ್ ಶಾ; ಮುಂದೇನಾಯ್ತು?
ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ರೋಚಕ ಫೈನಲ್ನಲ್ಲಿ ಕಪ್ನ ತನ್ನದಾಗಿಸಿಕೊಂಡಿದೆ. ವಿಶ್ವಕಪ್ನ ಮುಂಬೈಗೆ ತರಲಾಯಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರದರ್ಶಿಸಲಾಯಿತು. ಈ ವೇಳೆ ಜಯ್ ಶಾ ಅವರಿಗೆ ವಿರಾಟ್ ಕೊಹ್ಲಿ ಶೇಕ್ ಹ್ಯಾಂಡ್ ಮಾಡಿದ ದೃಶ್ಯ ವೈರಲ್ ಆಗಿದೆ.
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಇರೋ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 27 ಕೋಟಿ ಹಿಂಬಾಲಕರು ಇದ್ದಾರೆ. ಕೊಹ್ಲಿಗೆ ಫ್ಯಾನ್ಸ್ ಆಗದವರೇ ಇಲ್ಲ ಎಂದರೂ ತಪ್ಪಾಗಲಾರದು. ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕೂಡ ವಿರಾಟ್ ಅವರ ಅಭಿಮಾನಿ. ಇತ್ತೀಚೆಗೆ ವೈರಲ್ ಆಗಿರೋ ವಿಡಿಯೋ ಇದಕ್ಕೆ ಸಾಕ್ಷಿ.
ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ರೋಚಕ ಫೈನಲ್ನಲ್ಲಿ ಕಪ್ನ ತನ್ನದಾಗಿಸಿಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಟಿ20ಗೆ ವಿದಾಯ ಹೇಳಿದ್ದಾರೆ. ವಿಶ್ವಕಪ್ನ ಮುಂಬೈಗೆ ತರಲಾಯಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರದರ್ಶಿಸಲಾಯಿತು. ಈ ವೇಳೆ ಜಯ್ ಶಾ ಅವರಿಗೆ ವಿರಾಟ್ ಕೊಹ್ಲಿ ಶೇಕ್ ಹ್ಯಾಂಡ್ ಮಾಡಿದ ದೃಶ್ಯ ವೈರಲ್ ಆಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿರಲಿಲ್ಲ: ಸಂಜಯ್ ಮಂಜ್ರೇಕರ್
ಜಯ್ ಶಾ ಅವರು ಮೊದಲು ಕೆಲ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಿದರು. ಆ ಬಳಿಕ ಬಂದಿದ್ದು ವಿರಾಟ್ ಕೊಹ್ಲಿ. ಅವರ ಕೈನ ಜಯ್ ಶಾ ಕುಲುಕಿದರು. ಇದಾದ ಬೆನ್ನಲ್ಲೇ ಅವರನ್ನೇ ನೋಡುತ್ತಾ ನಿಂತುಬಿಟ್ಟರು. ಜಯ್ ಶಾ ವಿರಾಟ್ನ ನೋಡುವುದರಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ನಂತರ ಬಂದ ಆಟಗಾರರಿಗೆ ಕೈ ಕುಲುಕುವುದನ್ನೇ ಮರೆತುಬಿಟ್ಟರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Jay Shah is so me 🥹❤️😭
(The way he kept staring at Virat Kohli and forgot to shake hands 😂)#ViratKohli #IndianCricketTeam #T20WorldCupChampion #T20WorldCup #jayShah pic.twitter.com/HT6C4lFeKO
— Naina_H (@NH_hope13) July 4, 2024
ಮುಂಬೈನಲ್ಲಿ ಜುಲೈ 4 ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುಂಬೈನ ಮರೀನ್ ಡ್ರೈವ್ನಲ್ಲಿ ವಿಶ್ವಕಪ್ನ ತೆಗೆದುಕೊಂಡು ಹೋಗಲಾಗಿದೆ. ಕ್ರಿಕೆಟ್ ಆಟಗಾರರು ವಾಹನದಲ್ಲಿ ಇದನ್ನು ಕೊಂಡೊಯ್ದಿದ್ದಾರೆ. ಈ ವೇಳೆ ಲಕ್ಷಾಂತರ ಜನರು ನೆರೆದಿದ್ದರು. ಅದೇ ರೀತಿ ವಾಂಖೆಡೆ ಸ್ಟೇಡಿಯಂ ಪೂರ್ತಿಯಾಗಿತ್ತು. ವಿರಾಟ್, ರೋಹಿತ್ ಸೇರಿ ವಿಶ್ವಕಪ್ ಆಡಿದ ಎಲ್ಲರೂ ಇಲ್ಲಿಗೆ ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.