India vs New Zealand: ಭಾರತ- ನ್ಯೂಜಿಲೆಂಡ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ: ಐತಿಹಾಸಿಕ ಗೆಲುವಿನತ್ತ ಕೊಹ್ಲಿ ಕಣ್ಣು

| Updated By: Vinay Bhat

Updated on: Oct 31, 2021 | 8:41 AM

IND vs NZ, T20 World Cup: ಉಭಯ ತಂಡಗಳು ಟಿ20 ಪಂದ್ಯಗಳಲ್ಲಿ ಈವರೆಗೆ ಒಟ್ಟು 16 ಬಾರಿ ಮುಖಾಮುಖಿ ಆಗಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ 8 ರಲ್ಲಿ ಮತ್ತು ನ್ಯೂಜಿಲೆಂಡ್ ತಂಡ ಕೂಡ 8 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

India vs New Zealand: ಭಾರತ- ನ್ಯೂಜಿಲೆಂಡ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ: ಐತಿಹಾಸಿಕ ಗೆಲುವಿನತ್ತ ಕೊಹ್ಲಿ ಕಣ್ಣು
India vs New Zealand
Follow us on

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಪಾಕಿಸ್ತಾನ (Pakistan) ವಿರುದ್ಧ ಸೋತು ಅಭಿಯಾನ ಆರಂಭಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡ ಇಂದಿನ 28ನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ವಿರಾಟ್ ಕೊಹ್ಲಿ (Viral Kohli) ಹಾಗೂ ಕೇನ್ ವಿಲಿಯಮ್ಸನ್ (Kane Williamson) ಪಡೆಯ ಕಾದಾಟಕ್ಕೆ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವೇದಿಕೆ ಸಿದ್ದವಾಗಿದೆ. ಪಾಕಿಸ್ತಾನದ ವಿರುದ್ಧ ಟೀಮ್‌ ಇಂಡಿಯಾ (Team India) 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಟೂರ್ನಿಯಲ್ಲಿ ಭಾರತ ತಂಡ ನೀರಸ ಆರಂಭ ಕಂಡಿತ್ತು. ಹೀಗಾಗಿ ಸೆಮೀಸ್ ಹಂತಕ್ಕೇರುವ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಪಂದ್ಯ ಕ್ವಾರ್ಟಫೈನಲ್ ಹಣಾಹಣಿಯಂತಿದೆ. ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ (New Zealand Cricket Team) ಎದುರು ಗೆದ್ದಿಲ್ಲ, ಅಲ್ಲದೆ, ಕಳೆದ 18 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ತಂಡಕ್ಕೆ ಶರಣಾಗುತ್ತಾ ಬಂದಿರುವ ಭಾರತ ತಂಡ ಗೆಲುವಿನ ಬರ ಎದುರಿಸುತ್ತಿದೆ. ಇದೀಗ ಮಹತ್ವದ ಪಂದ್ಯದಲ್ಲಿ ಗೆಲುವಿನೊಂದಿಗೆ ಐತಿಹಾಸಿಕ ಗೆಲುವು ಕಾಣುತ್ತಾ ನೋಡಬೇಕಿದೆ.

ಈ ಪಂದ್ಯದಲ್ಲಿ ಸೊತ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ (ಸ್ಕಾಟ್ಲೆಂಡ್, ನಮಿಬಿಯಾ ಮತ್ತು ಆಫ್ಘಾನಿಸ್ತಾನದ ಎದುರು) ಜಯಿಸಬೇಕು. ಅದೇ ರೀತಿ ಈ ಪಂದ್ಯದಲ್ಲಿ ಗೆದ್ದ ತಂಡವು ಮುಂದಿನ ಮೂರು ಹಣಾಹಣಿಗಳಲ್ಲಿ ಒಂದರಲ್ಲಿ ಸೋಲಬೇಕು. ಆದರೆ ಕ್ರಿಕೆಟ್‌ ಲೋಕದಲ್ಲಿ ಈಗ ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ತಂಡಗಳ ಎದುರು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಗೆಲ್ಲುವ ಸಾಧ್ಯತೆಯೇ ಅತಿ ಹೆಚ್ಚು. ಆದ್ದರಿಂದ ಭಾನುವಾರ ನಡೆಯುವ ಪಂದ್ಯವು ಕುತೂಹಲದ ಗಣಿಯಾಗಿದೆ.

ಅಭ್ಯಾಸ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನು ಟೀಮ್ ಇಂಡಿಯಾ ಓಪನರ್​ಗಳಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್ ನೀಡಬೇಕಿದೆ. ನಾಯಕ ವಿರಾಟ್ ಕೊಹ್ಲಿ ಉಪಯುಕ್ತ ಕೊಡುಗೆ ತಂಡಕ್ಕೆ ಬಹಳಾ ಮುಖ್ಯ. ಆದರೆ, ಸೂರ್ಯಕುಮಾರ್ ಐಪಿಎಲ್​ನಿಂದಲೂ ಫಾರ್ಮ್​ನಲ್ಲಿಲ್ಲ. ಹೀಗಾಗಿ ಇವರ ಜಾಗಕ್ಕೆ ಇಶಾನ್ ಕಿಶನ್​ರನ್ನು ಆಯ್ಕೆ ಮಾಡುತ್ತಾರ ಎಂಬುದು ನೋಡಬೇಕಿದೆ. ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಒಂದು ಕಡೆಯಾದರೆ, ರವಿಂದ್ರ ಜಡೇಜಾ ಬ್ಯಾಟಿಂಗ್​ನಲ್ಲಿ ಬಲ ತುಂಬಲಿದ್ದಾರೆ.

ಇಂದಿನ ಪಂದ್ಯಕ್ಕೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಎದುರಾಳಿಯ ಒಂದು ವಿಕೆಟ್ ಕೂಡ ಕೀಳಲಿಲ್ಲ. ಹೀಗಾಗಿ ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಆಡುವ ಸಂಭವವಿದೆ. ವರುಣ್ ಚಕ್ರವರ್ತಿ ಅವರನ್ನು ಕೈಬಿಟ್ಟು ಆರ್. ಅಶ್ವಿನ್​ಗೆ ಅವಕಾಶ ಕೊಟ್ಟರೆ ಅಚ್ಚರಿ ಪಡಬೇಕಿಲ್ಲ.

ಇತ್ತ ಕಿವೀಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗುಪ್ಟಿಲ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಪ್ರಮುಖ ಬ್ಯಾಟರ್‌ಗಳು ಅಲಭ್ಯರಾದರೆ ಬೌಲಿಂಗ್ ಪಡೆ ಮೇಲೆ ಒತ್ತಡ ಹೆಚ್ಚಾಗಲಿದೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಆಡಂ ಮಿಲ್ನೆ, ಕೈಲ್ ಜೇಮಿಸನ್ ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯೇ ತಂಡದ ಶಕ್ತಿಯಾಗಿದೆ. ನ್ಯೂಜಿಲೆಂಡ್ ತಂಡ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಎದುರು ಮೇಲುಗೈ ಸಾಧಿಸಿರುವುದು ಅವರ ಪ್ಲಸ್ ಪಾಯಿಂಟ್ ಆಗಿದೆ.

ಉಭಯ ತಂಡಗಳು ಟಿ20 ಪಂದ್ಯಗಳಲ್ಲಿ ಈವರೆಗೆ ಒಟ್ಟು 16 ಬಾರಿ ಮುಖಾಮುಖಿ ಆಗಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ 8 ರಲ್ಲಿ ಮತ್ತು ನ್ಯೂಜಿಲೆಂಡ್ ತಂಡ ಕೂಡ 8 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

Jos Buttler: ಬಟ್ಲರ್ ಸ್ಫೋಟಕ ಆಟಕ್ಕೆ ನಲುಗಿದ ಆಸ್ಟ್ರೇಲಿಯಾ: ಇಂಗ್ಲೆಂಡ್ ಸೆಮಿ ಫೈನಲ್ ಹಾದಿ ಖಚಿತ

(Virat Kohli-led Indian cricket team take the field against New Zealand in T20 World Cup on Sunday)