IND vs ENG 1st Test: ಒಂದಲ್ಲ, ಎರಡು ದಾಖಲೆ: ಮೊದಲ ಟೆಸ್ಟ್​ನಲ್ಲಿ ಇತಿಹಾಸ ಸೃಷ್ಟಿಸಲಿರುವ ವಿರಾಟ್ ಕೊಹ್ಲಿ

|

Updated on: Jan 21, 2024 | 9:29 AM

Virat Kohli Record, IND vs ENG 1ts Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಜನವರಿ 25 ರಿಂದ ಮಾರ್ಚ್ 11 ರವರೆಗೆ ನಡೆಯಲಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯು ಜನವರಿ 25 ರಿಂದ ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೂತನ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

IND vs ENG 1st Test: ಒಂದಲ್ಲ, ಎರಡು ದಾಖಲೆ: ಮೊದಲ ಟೆಸ್ಟ್​ನಲ್ಲಿ ಇತಿಹಾಸ ಸೃಷ್ಟಿಸಲಿರುವ ವಿರಾಟ್ ಕೊಹ್ಲಿ
Virat Kohli IND vs ENG 1st Test
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜನವರಿ 25 ರಿಂದ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಇದುವರೆಗೆ ಭಾರತದ ಮೂವರು ಬ್ಯಾಟರ್​ಗಳು ಮಾತ್ರ ಈ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 152 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ ನಾಲ್ಕನೇ ಭಾರತೀಯ ಹಾಗೂ ಭಾರತದ ಸಕ್ರಿಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಮಾತ್ರ 9,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಸಕ್ರಿಯ ಬ್ಯಾಟರ್ಸ್ ಆಗಿದ್ದಾರೆ.

ಕೊಹ್ಲಿ 152 ರನ್ ಗಳಿಸಿದಾಗ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ ಹಾಗೂ ಪ್ರಸ್ತುತ ಆಡುತ್ತಿರುವ ಕ್ರಿಕೆಟಿಗರಲ್ಲಿ ಈ ದಾಖಲೆಯನ್ನು ಮಾಡಿದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಕೊಹ್ಲಿ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8,848 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಗಳಿಸಿರುವ 15,921 ರನ್ ವಿಶ್ವದ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ.

ILT20: ಗುರ್ಬಾಝ್ ಅಬ್ಬರ: ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಜಯ

ಇದನ್ನೂ ಓದಿ
ಏರ್ಪೋರ್ಟ್​ನಲ್ಲಿ ಕೊಹ್ಲಿ: ಆಯೋಧ್ಯೆ or ಹೈದರಾಬಾದ್​ಗಾ?: ಫ್ಯಾನ್ ಪ್ರಶ್ನೆ
Mohammed Shami: ಮೊಹಮ್ಮದ್ ಶಮಿ ಕಂಬ್ಯಾಕ್ ಮತ್ತಷ್ಟು ವಿಳಂಬ..!
ಕೊಹ್ಲಿ-ರೋಹಿತ್ ಮಾತ್ರವಲ್ಲ ಭಾರತದ ಯಾವ ಆಟಗಾರರಿಗೆಲ್ಲ ಆಹ್ವಾನಿಸಲಾಗಿದೆ?
ಇಂದಿನಿಂದ ಭಾರತದ ತರಬೇತಿ ಶಿಬಿರ: ಪ್ರ್ಯಾಕ್ಟೀಸ್ ನಡುವೆ ಅಯೋಧ್ಯೆ ದರ್ಶನ?

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ಗಳು:

  • ಸಚಿನ್ ತೆಂಡೂಲ್ಕರ್ – 15,921 ರನ್
  • ರಾಹುಲ್ ದ್ರಾವಿಡ್ – 13,288 ರನ್
  • ಸುನಿಲ್ ಗವಾಸ್ಕರ್ – 10,122 ರನ್
  • ವಿರಾಟ್ ಕೊಹ್ಲಿ – 8,848 ರನ್

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಸಕ್ರಿಯ ಬ್ಯಾಟರ್​ಗಳು:

  • ಜೋ ರೂಟ್ (ಇಂಗ್ಲೆಂಡ್) – 11,416 ರನ್
  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) – 9527 ರನ್
  • ವಿರಾಟ್ ಕೊಹ್ಲಿ (ಭಾರತ) – 8,848 ರನ್
  • ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) – 8,263 ರನ್

ಕೊಹ್ಲಿಗೆ ಬೇಕು 9 ರನ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ರನ್ ಗಳಿಸಿದ ತಕ್ಷಣ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಜೊತೆ ವಿಶೇಷ ಸ್ಥಾನ ಹಂಚಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರು ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಕೊಹ್ಲಿ 9 ರನ್ ಗಳಿಸಿದ ತಕ್ಷಣ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 2000 ರನ್ ಗಳಿಸಿದ ಮೂರನೇ ಭಾರತೀಯ ಆಟಗಾರನಾಗಲಿದ್ದಾರೆ. ಕೊಹ್ಲಿ ಸದ್ಯ ಇಂಗ್ಲೆಂಡ್ ವಿರುದ್ಧ 1991 ರನ್ ಗಳಿಸಿದ್ದಾರೆ.

ಜನವರಿ 25 ರಿಂದ ಟೆಸ್ಟ್ ಆರಂಭ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜನವರಿ 25 ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಟೆಸ್ಟ್ ಜನವರಿ 25 ರಿಂದ ಮಾರ್ಚ್ 11 ರವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ಫೈನಲ್ ತಲುಪಲು ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಈ ಐದು ಪಂದ್ಯಗಳ ಟೆಸ್ಟ್ ಸರಣಿಯು ನಿರ್ಣಾಯಕವಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ವೇಳಾಪಟ್ಟಿ:

  • ಮೊದಲ ಟೆಸ್ಟ್ ಪಂದ್ಯ, ಜನವರಿ 25-29, ಬೆಳಗ್ಗೆ 9.30, ಹೈದರಾಬಾದ್.
  • ಎರಡನೇ ಟೆಸ್ಟ್ ಪಂದ್ಯ, ಫೆಬ್ರವರಿ 2-6, ಬೆಳಗ್ಗೆ 9.30, ವಿಶಾಖಪಟ್ಟಣ.
  • ಮೂರನೇ ಟೆಸ್ಟ್ ಪಂದ್ಯ, ಫೆಬ್ರವರಿ 15-19, ಬೆಳಿಗ್ಗೆ 9.30, ರಾಜ್‌ಕೋಟ್.
  • ನಾಲ್ಕನೇ ಟೆಸ್ಟ್ ಪಂದ್ಯ, 23-27 ಫೆಬ್ರವರಿ, 9.30, ರಾಂಚಿ.
  • ಐದನೇ ಟೆಸ್ಟ್ ಪಂದ್ಯ, ಮಾರ್ಚ್ 7-11, ಬೆಳಿಗ್ಗೆ 9.30, ಧರ್ಮಶಾಲಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sun, 21 January 24