ILT20: ಗುರ್ಬಾಝ್ ಅಬ್ಬರ: ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಜಯ
Dubai Capitals vs MI Emirates: ಎಂಐ ಎಮಿರೇಟ್ಸ್ ನೀಡಿದ 160 ರನ್ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಡೇವಿಡ್ ವಾರ್ನರ್ ಕೇವಲ 1 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ರಹಮಾನುಲ್ಲಾ ಗುರ್ಬಾಝ್ ಹಾಗೂ ಜೇಕ್ ಪ್ರೇಸರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ಟೂರ್ನಿಯ 2ನೇ ಪಂದ್ಯದಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಎಂಐ ಎಮಿರೇಟ್ಸ್ ತಂಡದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ದುಬೈ ಕ್ಯಾಪಿಟಲ್ಸ್ (Dubai Capitals) ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡಕ್ಕೆ ಆರಂಭಿಕ ಆಟಗಾರ ಮಹಮ್ಮದ್ ವಸೀಮ್ ಉತ್ತಮ ಆರಂಭ ಒದಗಿಸಿದ್ದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಸೀಮ್ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದರು. ಇನ್ನು ಆ್ಯಂಡ್ರೆ ಫ್ಲೆಚರ್ 18 ಎಸೆತಗಳಲ್ಲಿ 30 ರನ್ ಸಿಡಿಸಿದರೆ, ಕೊನೆಯ ಹಂತದಲ್ಲಿ ಟಿಮ್ ಡೇವಿಡ್ 27 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಎಂಐ ಎಮಿರೇಟ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ದುಬೈ ಕ್ಯಾಪಿಟಲ್ಸ್ ಪರ 4 ಓವರ್ಗಳನ್ನು ಬೌಲ್ ಮಾಡಿದ ಜೇಸನ್ ಹೋಲ್ಡರ್ ಹಾಗೂ ಸಿಕಂದರ್ ರಾಝ ತಲಾ 4 ವಿಕೆಟ್ ಕಬಳಿಸಿ ಮಿಂಚಿದರು.
160 ರನ್ಗಳ ಸ್ಪರ್ಧಾತ್ಮಕ ಗುರಿ:
ಎಂಐ ಎಮಿರೇಟ್ಸ್ ನೀಡಿದ 160 ರನ್ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಡೇವಿಡ್ ವಾರ್ನರ್ ಕೇವಲ 1 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ರಹಮಾನುಲ್ಲಾ ಗುರ್ಬಾಝ್ ಹಾಗೂ ಜೇಕ್ ಪ್ರೇಸರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗುರ್ಬಾಝ್ ಕೇವಲ 39 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 81 ರನ್ ಚಚ್ಚಿದರು. ಮತ್ತೊಂದೆಡೆ ಪ್ರೇಸರ್ 25 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 54 ರನ್ ಸಿಡಿಸಿದರು.
ಈ ಮೂಲಕ ಗುರ್ಬಾಝ್-ಪ್ರೇಸರ್ ಜೋಡಿ 2ನೇ ವಿಕೆಟ್ಗೆ 113 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಈ ಮೂಲಕ 16 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ ದುಬೈ ಕ್ಯಾಪಿಟಲ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಎಂಐ ಎಮಿರೇಟ್ಸ್ ಪ್ಲೇಯಿಂಗ್ 11: ಆಂಡ್ರೆ ಫ್ಲೆಚರ್ , ಮುಹಮ್ಮದ್ ವಸೀಮ್ , ನಿಕೋಲಸ್ ಪೂರನ್ (ನಾಯಕ) , ಅಂಬಾಟಿ ರಾಯುಡು , ಕೋರಿ ಆಂಡರ್ಸನ್ , ಟಿಮ್ ಡೇವಿಡ್ , ವಿಲ್ ಸ್ಮೀಡ್ , ಡ್ವೇನ್ ಬ್ರಾವೋ , ಅಕೇಲ್ ಹೋಸೇನ್ , ಝಹೂರ್ ಖಾನ್ , ಟ್ರೆಂಟ್ ಬೌಲ್ಟ್ , ಫಝಲ್ಹಕ್ ಫಾರೂಕಿ.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ದುಬೈ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ) , ರಹಮಾನುಲ್ಲಾ ಗುರ್ಬಾಝ್ , ಸ್ಯಾಮ್ ಬಿಲ್ಲಿಂಗ್ಸ್ , ರೋವ್ಮನ್ ಪೊವೆಲ್ , ಸಿಕಂದರ್ ರಾಝ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ರಾಹುಲ್ ಚೋಪ್ರಾ (ವಿಕೆಟ್ ಕೀಪತ್) , ಅಕಿಫ್ ರಾಜಾ , ದುಷ್ಮಂತ ಚಮೀರಾ , ಜೇಸನ್ ಹೋಲ್ಡರ್ , ಪಾಲ್ ವ್ಯಾನ್ ಮೀಕೆರೆನ್ , ಜೇಕ್ ಫ್ರೇಸರ್.