ದುಬೈ ಕ್ಯಾಪಿಟಲ್ಸ್​ ತಂಡಕ್ಕೆ ಡೇವಿಡ್ ವಾರ್ನರ್ ಎಂಟ್ರಿ

ILT20: ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ ಜನವರಿ 13 ರಿಂದ ಶುರುವಾಗಲಿದ್ದು, ಪೆಬ್ರವರಿ 12 ಕ್ಕೆ ಕೊನೆಗೊಳ್ಳಲಿದೆ. ಆರು ಫ್ರಾಂಚೈಸಿಗಳ ನಡುವಣ ಈ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ.

ದುಬೈ ಕ್ಯಾಪಿಟಲ್ಸ್​ ತಂಡಕ್ಕೆ ಡೇವಿಡ್ ವಾರ್ನರ್ ಎಂಟ್ರಿ
David Warner
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 21, 2023 | 8:32 PM

ಯುಎಇನಲ್ಲಿ ನಡೆಯಲಿರುವ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕಣಕ್ಕಿಳಿಯುವುದು ಖಚಿತವಾಗಿದೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ವಾರ್ನರ್ ಐಎಲ್​ಟಿ ಲೀಗ್​ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಈ ತಂಡ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯ ಒಡೆತನದಲ್ಲಿದೆ. ಹೀಗಾಗಿಯೇ ಹೊಸ ಲೀಗ್​ನಲ್ಲಿ ಆಡಲು ವಾರ್ನರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನು ಡೇವಿಡ್ ವಾರ್ನರ್ ಜೊತೆಗೆ ದುಬೈ ಕ್ಯಾಪಿಟಲ್ಸ್​ ಒಂದಷ್ಟು ಹೊಸ ಆಟಗಾರರೊಂದಿಗೆ ಕೂಡ ಒಪ್ಪಂದ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನ, ಅಫ್ಘಾನಿಸ್ತಾನದ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಝ್, ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸ್ಯಾಮ್ ಬಿಲ್ಲಿಂಗ್ಸ್, ಆಸ್ಟ್ರೇಲಿಯಾ ಆಂಡ್ರ್ಯೂ ಟೈಯಂತಹ ಸ್ಟಾರ್ ಆಟಗಾರರಿದ್ದಾರೆ.

ಹೀಗಾಗಿ ಈ ಬಾರಿ ದುಬೈ ಕ್ಯಾಪಿಟಲ್ಸ್​ ತಂಡ ಮತ್ತಷ್ಟು ಬಲಿಷ್ಠತೆಯೊಮದಿಗೆ ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಏಕೆಂದರೆ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ರೋವ್​ಮನ್ ಪೊವೆಲ್, ಝಿಂಬಾಬ್ವೆಯ ಸಿಕಂದರ್ ರಾಝ, ಇಂಗ್ಲೆಂಡ್​ನ ಜೋ ರೂಟ್​, ಶ್ರೀಲಂಕಾದ ದುಷ್ಮಂತ ಚಮೀರಾ ಈಗಾಗಲೇ ತಂಡದಲ್ಲಿದ್ದಾರೆ.

ಇದೀಗ ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖ ಆಟಗಾರರು ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದು, ಹೀಗಾಗಿ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್​ನಲ್ಲಿ ದುಬೈ ತಂಡದಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ದುಬೈ ಕ್ಯಾಪಿಟಲ್ಸ್ ತಂಡದ ಹೊಸ ಆಯ್ಕೆ: ದಸುನ್ ಶಾನಕ, ಡೇವಿಡ್ ವಾರ್ನರ್, ಮಾರ್ಕ್ ವುಡ್, ಮ್ಯಾಕ್ಸ್ ಹೋಲ್ಡನ್, ಮೊಹಮ್ಮದ್ ಮೊಹ್ಸಿನ್, ರಹಮಾನುಲ್ಲಾ ಗುರ್ಬಾಜ್, ನುವಾನ್ ತುಷಾರ, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸದೀರ ಸಮರವಿಕ್ರಮ ಮತ್ತು ಸ್ಯಾಮ್ ಬಿಲ್ಲಿಂಗ್ಸ್.

ದುಬೈ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಂಡ ಆಟಗಾರರು: ದುಷ್ಮಂತ ಚಮೀರಾ, ಜೋ ರೂಟ್, ರಾಜಾ ಅಕಿಫ್, ರೋವ್​ಮನ್ ಪೊವೆಲ್ ಮತ್ತು ಸಿಕಂದರ್ ರಾಝ.

ಸೀಸನ್-2 ಯಾವಾಗ ಶುರು?

ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ ಜನವರಿ 13 ರಿಂದ ಶುರುವಾಗಲಿದ್ದು, ಪೆಬ್ರವರಿ 12 ಕ್ಕೆ ಕೊನೆಗೊಳ್ಳಲಿದೆ. ಆರು ಫ್ರಾಂಚೈಸಿಗಳ ನಡುವಣ ಈ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ.

ಇದನ್ನೂ ಓದಿ: David Warner: ಹೊಸ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್

ಕಣದಲ್ಲಿರುವ ತಂಡಗಳಾವುವು?

  1. ಡಿಸರ್ಟ್​ ವೈಪರ್ಸ್​
  2. ಗಲ್ಫ್ ಜೈಂಟ್ಸ್
  3. ದುಬೈ ಕ್ಯಾಪಿಟಲ್ಸ್
  4. ಎಂಐ ಎಮಿರೇಟ್ಸ್​
  5. ಶಾರ್ಜಾ ವಾರಿಯರ್ಸ್
  6. ಅಬುಧಾಬಿ ನೈಟ್ ರೈಡರ್ಸ್​
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್