ರಜತ್ ಪಾಟಿದಾರ್ ಶತಕ: ಭಾರತ A vs ಇಂಗ್ಲೆಂಡ್ L ಪಂದ್ಯ ಡ್ರಾ..!
India A vs England Lions: ದ್ವಿತೀಯ ಇನಿಂಗ್ಸ್ನಲ್ಲಿ 489 ರನ್ಗಳ ಗುರಿ ಪಡೆದ ಭಾರತ ಎ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿಯಿತು. ಇದಾಗ್ಯೂ ಸಾಯಿ ಸುದರ್ಶನ್ 97 ರನ್ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಝ್ ಖಾನ್ 55 ರನ್ ಬಾರಿಸಿದರೆ, ಮಾನವ್ ಸುತಾರ್ 89 ರನ್ಗಳ ಕೊಡುಗೆ ನೀಡಿದರು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್-ಭಾರತ ಎ ತಂಡಗಳ ನಡುವಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಎ (India A) ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ಪರ ಕೀಟನ್ ಜೆನ್ನಿಂಗ್ಸ್ (154) ಹಾಗೂ ನಾಯಕ ಜೋಶ್ ಬೊಹಾನನ್ (125) ಭರ್ಜರಿ ಶತಕ ಬಾರಿಸಿದ್ದರು.
ಈ ಶತಕಗಳ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 553 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಪರ ರಜತ್ ಪಾಟಿದಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
158 ಎಸೆತಗಳನ್ನು ಎದುರಿಸಿದ ಪಾಟಿದಾರ್ 5 ಸಿಕ್ಸ್ ಹಾಗೂ 19 ಫೋರ್ಗಳೊಂದಿಗೆ 151 ರನ್ ಸಿಡಿಸಿದರು. ಇದಾಗ್ಯೂ ಇತರೆ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಭಾರತ ಎ ತಂಡದ ಮೊದಲ ಮೊದಲ ಇನಿಂಗ್ಸ್ ಕೇವಲ 227 ರನ್ಗಳಿಗೆ ಅಂತ್ಯವಾಯಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ತಂಡವು 6 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
489 ರನ್ಗಳ ಗುರಿ:
ದ್ವಿತೀಯ ಇನಿಂಗ್ಸ್ನಲ್ಲಿ 489 ರನ್ಗಳ ಗುರಿ ಪಡೆದ ಭಾರತ ಎ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿಯಿತು. ಇದಾಗ್ಯೂ ಸಾಯಿ ಸುದರ್ಶನ್ 97 ರನ್ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಝ್ ಖಾನ್ 55 ರನ್ ಬಾರಿಸಿದರೆ, ಮಾನವ್ ಸುತಾರ್ 89 ರನ್ಗಳ ಕೊಡುಗೆ ನೀಡಿದರು.
ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಸ್ ಭರತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. 165 ಎಸೆತಗಳನ್ನು ಎದುರಿಸಿದ ಭರತ್ 15 ಫೋರ್ಗಳೊಂದಿಗೆ ಅಜೇಯ 116 ರನ್ ಬಾರಿಸಿದರು. ಅದರಂತೆ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 426 ರನ್ ಕಲೆಹಾಕುವ ಮೂಲಕ ಭಾರತ ಎ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇಂಗ್ಲೆಂಡ್ ಲಯನ್ಸ್ ಪ್ಲೇಯಿಂಗ್ 11: ಕೀಟನ್ ಜೆನ್ನಿಂಗ್ಸ್ , ಅಲೆಕ್ಸ್ ಲೀಸ್ , ಮ್ಯಾಥ್ಯೂ ಫಿಶರ್ , ಡ್ಯಾನ್ ಮೌಸ್ಲಿ , ಜ್ಯಾಕ್ ಕಾರ್ಸನ್ , ಕ್ಯಾಲಮ್ ಪಾರ್ಕಿನ್ಸನ್ , ಜೇಮ್ಸ್ ರೆವ್ , ಆಲಿವರ್ ರಾಬಿನ್ಸನ್ ( ವಿಕೆಟ್ ಕೀಪರ್ ) , ಜೋಶ್ ಬೊಹಾನನ್ (ನಾಯಕ) , ಬ್ರೈಡನ್ ಕಾರ್ಸೆ , ಮ್ಯಾಥ್ಯೂ ಪಾಟ್ಸ್.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಭಾರತ ಎ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ (ನಾಯಕ) , ಸಾಯಿ ಸುದರ್ಶನ್ , ರಜತ್ ಪಾಟಿದಾರ್ , ಸರ್ಫರಾಜ್ ಖಾನ್ , ಪ್ರದೋಶ್ ಪಾಲ್ , ಶ್ರೀಕರ್ ಭರತ್ ( ವಿಕೆಟ್ ಕೀಪರ್ ) , ಮಾನವ್ ಸುತಾರ್ , ಪುಲ್ಕಿತ್ ನಾರಂಗ್ , ತುಷಾರ್ ದೇಶಪಾಂಡೆ , ನವದೀಪ್ ಸೈನಿ , ವಿಧ್ವತ್ ಕಾವೇರಪ್ಪ
Published On - 7:49 am, Sun, 21 January 24