AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 1st Test: ಏರ್ಪೋರ್ಟ್​ನಲ್ಲಿ ವಿರಾಟ್ ಕೊಹ್ಲಿ: ಆಯೋಧ್ಯೆ ಅಥವಾ ಹೈದರಾಬಾದ್​ಗಾ ಎಂದು ಕೇಳಿದ ಫ್ಯಾನ್ಸ್

IND vs ENG 1st Test: ಏರ್ಪೋರ್ಟ್​ನಲ್ಲಿ ವಿರಾಟ್ ಕೊಹ್ಲಿ: ಆಯೋಧ್ಯೆ ಅಥವಾ ಹೈದರಾಬಾದ್​ಗಾ ಎಂದು ಕೇಳಿದ ಫ್ಯಾನ್ಸ್

Vinay Bhat
|

Updated on: Jan 21, 2024 | 8:34 AM

Share

Virat Kohli: ವಿರಾಟ್ ಕೊಹ್ಲಿ ಮುಂಬೈ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದರಿಂದ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದಾರೋ ಅಥವಾ ಅಯೋಧ್ಯೆಗೆ ಹೊರಟಿದ್ದಾರೋ ಎಂಬ ಬಗ್ಗೆ ನೆಟಿಜನ್‌ಗಳು ಪ್ರಶ್ನೆ ಮಾಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಶನಿವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಜನವರಿ 25 ರಿಂದ ಹೈದರಾಬಾದ್​ನಲ್ಲಿ ಶುರುವಾಗಲಿದೆ. ಜೊತೆಗೆ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವಿದೆ. ಇದಕ್ಕೆ ಕೊಹ್ಲಿ ಅವರನ್ನು ಕೂಡ ಆಹ್ವಾನಿಸಲಾಗಿದೆ. ಹೀಗಾಗಿ ಕೊಹ್ಲಿ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದರಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದಾರೋ ಅಥವಾ ಅಯೋಧ್ಯೆಗೆ ಹೊರಟಿದ್ದಾರೋ ಎಂಬ ಬಗ್ಗೆ ನೆಟಿಜನ್‌ಗಳು ಪ್ರಶ್ನೆ ಮಾಡಿದ್ದಾರೆ. ಟೆಸ್ಟ್ ಪಂದ್ಯಕ್ಕಾಗಿ ಇಂದಿನಿಂದ ಹೈದರಾಬಾದ್​ನಲ್ಲಿ ಭಾರತ ತಂಡದ ಪ್ರ್ಯಾಕ್ಟೀಸ್ ಸೆಷನ್ ಶುರುವಾಗಲಿದೆ. ಆದರೆ, ವಿರಾಟ್ ಕೊಹ್ಲಿ ಅಯೋಧ್ಯೆಯ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಬಳಿ ಜನವರಿ 22 ರಂದು ಒಂದು ದಿನದ ರಜೆಗೆ ಅನುಮತಿ ಪಡೆದಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ