‘ಮೆಟ್ಟಿಲು ಥರ ನನ್ನ ತುಳಿದು ಹೋಗಿದ್ದಾರೆ’: ನೋವಿನಿಂದ ಮಾತಾಡಿದ ಕಾರ್ತಿಕ್​

‘ಮೆಟ್ಟಿಲು ಥರ ನನ್ನ ತುಳಿದು ಹೋಗಿದ್ದಾರೆ’: ನೋವಿನಿಂದ ಮಾತಾಡಿದ ಕಾರ್ತಿಕ್​

ಮದನ್​ ಕುಮಾರ್​
|

Updated on: Jan 21, 2024 | 11:03 AM

ಸುದೀಪ್​ ಎದುರು ಕಾರ್ತಿಕ್​ ಅವರು ನೋವು ತೋಡಿಕೊಂಡಿದ್ದಾರೆ. ‘ನಾನೇ ಕ್ಷಮೆ ಕೇಳಿಕೊಂಡು ಹೋಗಿದ್ದೇನೆ. ಸೋತು ಸೋತು ಸಾಕಾಗಿದೆ. ಸಾಯೋದಕ್ಕೆ ರೆಡಿ ಇಲ್ಲ ಸರ್​’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ‘ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಹರ್ಟ್​ ಮಾಡಿದ್ದಾರೆ’ ಎಂದು ಸಂಗೀತಾ ಶೃಂಗೇರಿ ಆರೋಪಿಸಿದ್ದಾರೆ.

ಬಿಗ್​ ಬಾಸ್​ (BBK 10) ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ಅವರು ಫ್ರೆಂಡ್ಸ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ಜಗಳ ಪ್ರಾರಂಭ ಆಯಿತು. ಈಗ ಪರಸ್ಪರ ವಿರೋಧಿಗಳ ರೀತಿ ಆಗಿದ್ದಾರೆ. ಕಾರ್ತಿಕ್​ ಜೊತೆ ಇದ್ದ ಬೇರೆ ಗೆಳೆಯರೂ ದೂರ ಆಗಿದ್ದಾರೆ. ನಮ್ರತಾ ಗೌಡ ಕೂಡ ಕಾರ್ತಿಕ್​ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೇ ವಿಚಾರವನ್ನು ವೀಕೆಂಡ್​ನಲ್ಲಿ ಸುದೀಪ್​ ಪ್ರಸ್ತಾಪಿಸಿದ್ದಾರೆ. ಆಗ ಕಾರ್ತಿಕ್​ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ‘ನಾನೇ ಕ್ಷಮೆ ಕೇಳಿಕೊಂಡು ಹೋಗಿದ್ದೇನೆ. ಸೋತು ಸೋತು ಸಾಕಾಗಿದೆ. ಸಾಯೋದಕ್ಕೆ ರೆಡಿ ಇಲ್ಲ ಸರ್​. ಇವರು ನನ್ನನ್ನು ಮೆಟ್ಟಲು ಥರ ತುಳಿದುಕೊಂಡು ಹೋಗಿದ್ದಾರೆ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ‘ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಹರ್ಟ್​ ಮಾಡಿದ್ದಾರೆ’ ಎಂದು ಸಂಗೀತಾ (Sangeetha Sringeri) ಆರೋಪಿಸಿದ್ದಾರೆ. ‘ನಿರೀಕ್ಷೆಗಳು ಶುರುವಾದರೆ ಅಲ್ಲಿ ಸ್ನೇಹ ಉಳಿಯುವುದಿಲ್ಲ’ ಎಂದು ವಿನಯ್​ ಗೌಡ ಹೇಳಿದ್ದಾರೆ. ಈ ಸಂಚಿಕೆ ಜನವರಿ 21ರ ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ