ದಿನಕ್ಕೆ 50 ರಿಂದ 60 ಕಿಮೀ ನಡಿಗೆ: 28ನೇ ದಿನಕ್ಕೆ ಅಯೋಧ್ಯೆ ತಲುಪಿದ ಹುಬ್ಬಳ್ಳಿಯ ರಾಮಭಕ್ತ

ದಿನಕ್ಕೆ 50 ರಿಂದ 60 ಕಿಮೀ ನಡಿಗೆ: 28ನೇ ದಿನಕ್ಕೆ ಅಯೋಧ್ಯೆ ತಲುಪಿದ ಹುಬ್ಬಳ್ಳಿಯ ರಾಮಭಕ್ತ

ಗಂಗಾಧರ​ ಬ. ಸಾಬೋಜಿ
|

Updated on: Jan 21, 2024 | 2:33 PM

ರಾಮಭಕ್ತನೊಬ್ಬ ಕಾಲ್ನಡಿಗೆಯಲ್ಲಿ ಹುಬ್ಬಳ್ಳಿಯಿಂದ‌ ಬರೋಬ್ಬರಿ 1799 ಕಿಮೀ ದೂರ ಪಾದಯಾತ್ರೆ ಮೂಲಕ ಕ್ರಮಿಸಿ ಇದೀಗ ಅಯೋಧ್ಯೆ ತಲುಪಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿದ್ದು, ಡಿ. 22 ರಂದು ಪಾದಯಾತ್ರೆ ಆರಂಭಿಸಿದ್ದು, ಅಯೋಧ್ಯೆ ತಲುಪಲು 28 ದಿನವಾಗಿದೆ.

ಅಯೋಧ್ಯೆ, ಜನವರಿ 21: ರಾಮ.. ರಾಮ.. ದೇಶಾದ್ಯಂತ ಈಗ ಶ್ರೀರಾಮನದ್ದೇ ಜಪ. ಇದೇ ಜನವರಿ 22ರಂದು ಅಯೋಧ್ಯೆ (Ayodhya) ಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಹೀಗಾಗಿ ರಾಮಭಕ್ತನೊಬ್ಬ ಕಾಲ್ನಡಿಗೆಯಲ್ಲಿ ಹುಬ್ಬಳ್ಳಿಯಿಂದ‌ ಬರೋಬ್ಬರಿ 1799 ಕಿಮೀ ದೂರ ಪಾದಯಾತ್ರೆ ಮೂಲಕ ಕ್ರಮಿಸಿ ಇದೀಗ ಅಯೋಧ್ಯೆ ತಲುಪಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿದ್ದು, ಡಿ. 22 ರಂದು ಪಾದಯಾತ್ರೆ ಆರಂಭಿಸಿದ್ದು, ಅಯೋಧ್ಯೆ ತಲುಪಲು 28 ದಿನವಾಗಿದೆ. ದಿನಕ್ಕೆ 50 ರಿಂದ 60 ಕಿಮೀ ನಡೆಯುತ್ತಿದೆ. ರಾಮಭಕ್ತರು ಊಟ ಮಾಡಿಸುತ್ತಿದ್ದರು, ಪೆಟ್ರೋಲ್ ಬಂಕ್​ಗಳಲ್ಲಿ ವಾಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. ​