ಮದುವೆ ಸುದ್ದಿಯ ನಡುವೆ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಶೋಯೆಬ್ ಮಲಿಕ್..!
Shoaib Malik: ಮದುವೆಯ ಸುದ್ದಿಯ ನಡುವೆಯೇ ಇದೀಗ ಶೋಯೆಬ್ ಕ್ರಿಕೆಟ್ ಮೈದಾನದಲ್ಲೂ ಸಂಚಲನ ಮೂಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 13000 ರನ್ ಗಳಿಸಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶೋಯೆಬ್ ಪಾತ್ರರಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್ (Shoaib Malik) ಅವರು ನಟಿ ಸನಾ ಜಾವೇದ್ (Sana Javed) ಅವರೊಂದಿಗಿನ ಮೂರನೇ ವಿವಾಹದ ಮೂಲಕ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಮದುವೆಯ ಸುದ್ದಿಯ ನಡುವೆಯೇ ಇದೀಗ ಶೋಯೆಬ್ ಕ್ರಿಕೆಟ್ ಮೈದಾನದಲ್ಲೂ ಸಂಚಲನ ಮೂಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 13000 ರನ್ ಗಳಿಸಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶೋಯೆಬ್ ಪಾತ್ರರಾಗಿದ್ದಾರೆ. ಫಾರ್ಚೂನ್ ಬಾರಿಶಾಲ್ ಮತ್ತು ರಂಗ್‌ಪುರ್ ರೈಡರ್ಸ್ (Rangpur Riders vs Fortune Barishal) ನಡುವಿನ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (Bangladesh Premier League) ಪಂದ್ಯದಲ್ಲಿ ಶೋಯೆಬ್ ಈ ಸಾಧನೆ ಮಾಡಿದ್ದು, ಕ್ರಿಸ್ ಗೇಲ್ರಂತಹ ದಿಗ್ಗಜರ ಪಟ್ಟಿಯಲ್ಲಿ ಮಲಿಕ್ ಸೇರ್ಪಡೆಗೊಂಡಿದ್ದಾರೆ.
13 ಸಾವಿರ ಟಿ20 ರನ್
ಮಲಿಕ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಟಿ20 ಕ್ರಿಕೆಟ್‌ನಲ್ಲಿ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಶೋಯೆಬ್ ಮಲಿಕ್ ಫಾರ್ಚೂನ್ ಬಾರಿಶಾಲ್ ತಂಡದ ಪರ 17 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 13 ಸಾವಿರ ರನ್ ಪೂರೈಸಿದರು. ಈ ಪಂದ್ಯಕ್ಕೂ ಮುನ್ನ ಶೋಯೆಬ್ ಮಲಿಕ್ ತಮ್ಮ ಖಾತೆಯಲ್ಲಿ 12993 ಟಿ20 ರನ್ಗಳನ್ನು ಹೊಂದಿದ್ದರು. ಇನ್ನು ಈ ಪಂದ್ಯದಲ್ಲಿ 17 ರನ್ ಗಳಿಸುವ ಮೂಲಕ 13 ಸಾವಿರ ಟಿ20 ರನ್‌ಗಳ ಗಡಿ ದಾಟಿದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಹಾಗೂ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶೋಯೆಬ್ ಪಾತ್ರರಾಗಿದ್ದಾರೆ.
Its Shoaib Malik’s Day today. He has completed his 13 thousand T20 runs today.#BPL24 #bplt20 #ShoaibMalik #ShoaibMalikMarriage pic.twitter.com/JuRshg5wwU
— Zeeshan Qayyum ☄️ (@XeeshanQayyum) January 20, 2024
ಮೂರನೇ ಮದುವೆಯಾದ ಶೋಯೆಬ್
ಶನಿವಾರ ಬೆಳಗ್ಗೆ ಶೋಯೆಬ್ ತಮ್ಮ ಮೂರನೇ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಸನಾ ಜಾವೇದ್ ಜೊತೆ ವೈವಾಹಿಕ ಜೀವಕ್ಕೆ ಕಾಲಿರಿಸಿರುವ ಫೋಟೋಗಳನ್ನು ಮಲಿಕ್ ಹಂಚಿಕೊಂಡಿದ್ದರು. ವಾಸ್ತವವಾಗಿ ಶೋಯೆಬ್ ಮಲಿಕ್ಗೆ ಇದು ಮೂರನೇ ಮದುವೆ. ಸನಾಗೂ ಮೊದಲು ಮಲಿಕ್, ಆಯೇಶಾ ಸಿದ್ದಿಕಿ ಮತ್ತು ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದರು. 2010ರಲ್ಲಿ ಆಯೇಷಾಗೆ ವಿಚ್ಛೇದನ ನೀಡಿದ್ದ ಮಲಿಕ್ ಅದೇ ವರ್ಷ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದರು. ಇದೀಗ ಸಾನಿಯಾರನ್ನು ತೊರೆದಿರುವ ಮಲಿಕ್ ಮೂರನೇ ಬಾರಿಗೆ ಮದುವೆಯಾಗಿದ್ದಾರೆ. ವರದಿ ಪ್ರಕಾರ, ಖುಲಾ ಮೂಲಕ ಸಾನಿಯಾ ಅವರೇ ಶೋಯೆಬ್‌ನಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Sat, 20 January 24