ಟೀಂ ಇಂಡಿಯಾ ನಾಯಕನ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಬಾಂಗ್ಲಾ ಆಟಗಾರರು; ವಿಡಿಯೋ ನೋಡಿ

U19 World Cup 2024: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಉದಯ್ ಸಹರಾನ್ ಜೊತೆ ಬಾಂಗ್ಲಾದೇಶದ ಆಟಗಾರರು ಕಾಲ್ಕೆರೆದು ಜಗಳ ಮಾಡಿದ ಘಟನೆ ನಡೆದಿದೆ.

ಟೀಂ ಇಂಡಿಯಾ ನಾಯಕನ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಬಾಂಗ್ಲಾ ಆಟಗಾರರು; ವಿಡಿಯೋ ನೋಡಿ
ಆಟಗಾರರ ನಡುವೆ ಮಾತಿನ ಚಕಮಕಿ
Follow us
ಪೃಥ್ವಿಶಂಕರ
|

Updated on:Jan 20, 2024 | 8:55 PM

ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ಅಂಡರ್-19 ವಿಶ್ವಕಪ್ (U19 World Cup 2024) ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಉದಯ್ ಸಹರಾನ್ (Uday Saharan) ಜೊತೆ ಬಾಂಗ್ಲಾದೇಶದ ಆಟಗಾರರು ಕಾಲ್ಕೆರೆದು ಜಗಳ ಮಾಡಿದ ಘಟನೆ ನಡೆದಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕಳಪೆ ಆರಂಭದ ಹೊರತಾಗಿಯೂ ಆ ನಂತರ ಕಮ್ ಬ್ಯಾಕ್ ಮಾಡಿ ಬಾಂಗ್ಲಾದೇಶಕ್ಕೆ 252 ರನ್ ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಬಾಂಗ್ಲಾದೇಶ ತಂಡ ಸೋಲಿನ ಸುಳಿಗೆ ಸಿಲುಕಿಕೊಂಡಿದ್ದು, ಟೀಂ ಇಂಡಿಯಾ ಜಯದ ಸನಿಹದಲ್ಲಿದೆ.

ಭಾರತಕ್ಕೆ ಕಳಪೆ ಆರಂಭ

ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ಕಡಿಮೆ ಸ್ಕೋರ್‌ಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ನಂತರ ಜೊತೆಯಾದ ಆದರ್ಶ್ ಸಿಂಗ್ ಮತ್ತು ನಾಯಕ ಉದಯ್ ಸಹರಾನ್ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಆದರ್ಶ್ ಸಿಂಗ್ ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರೆ ನಾಯಕ ಸಹಾರನ್ ಅವರಿಗೆ ಉತ್ತಮ ಸಾಥ್ ನೀಡಿದರು.

INDU19 vs BAN U19: ಅಂಡರ್-19 ವಿಶ್ವಕಪ್​ನಲ್ಲಿಂದು ಭಾರತದ ಮೊದಲ ಪಂದ್ಯ: ಎದುರಾಳಿ ಯಾರು?, ಎಷ್ಟು ಗಂಟೆಗೆ?

ಈ ವೇಳೆ, ಆದರ್ಶ್ ಸಿಂಗ್ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಭಾರತದ ನಾಯಕ ಅರ್ಧಶತಕದತ್ತ ಸಾಗುತ್ತಿದ್ದರು. ಈ ಇಬ್ಬರ ನಡುವಿನ ಜೊತೆಯಾಟವು ಶತಕದ ಸಮೀಪದಲ್ಲಿದ್ದಾಗ ವಿಕೆಟ್ ಸಿಗದೆ ಹೈರಾಣಾದ ಬಾಂಗ್ಲಾದೇಶದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಭಾರತದ ನಾಯಕ ಸಹರಾನ್‌ ಜೊತೆ ವಾಕ್ಸಮರಕ್ಕೆ ಮುಂದಾದರು.

ಸಹರಾನ್ ಜೊತೆ ಮಾತಿನ ಚಕಮಕಿ

ಭಾರತ ತಂಡದ ಉತ್ತಮ ಜೊತೆಯಾಟ ನೋಡಿದ ಬಾಂಗ್ಲಾದೇಶದ ಅರಿಫುಲ್ ಇಸ್ಲಾಂ ಭಾರತದ ನಾಯಕನಿಗೆ ಏನೇನೋ ಹೇಳಿ ಲೇವಡಿ ಮಾಡಿದರು. ಈ ಸಮಯದಲ್ಲಿ, ಇನಿಂಗ್ಸ್‌ನ 25 ನೇ ಓವರ್‌ನಲ್ಲಿ ಭಾರತೀಯ ನಾಯಕ ಮತ್ತು ಅರಿಫುಲ್ ಇಸ್ಲಾಂ ನಡುವೆ ವಾಕ್ಸಮರ ಪ್ರಾರಂಭವಾಗುವ ಮೊದಲು, ಓವರ್ ನಡುವೆ ಬಾಂಗ್ಲಾ ಫೀಲ್ಡರ್ ಸಹಾರಾನ್‌ಗೆ ಏನೋ ಹೇಳಿದರು. ಇಬ್ಬರೂ ಆಟಗಾರರು ಹತ್ತಿರ ಬರುವುದನ್ನು ನೋಡಿದ ಅಂಪೈರ್ ಇಬ್ಬರನ್ನೂ ತಡೆದರು. ಅಂಪೈರ್ ಮಧ್ಯಪ್ರವೇಶಿಸುವ ಮೊದಲು, ಬಾಂಗ್ಲಾದೇಶ ಇತರ ಆಟಗಾರರು ಸಹರಾನ್ ಮೇಲೆ ಮುಗಿಬಿದ್ದರು. ಬಳಿಕ ಮಧ್ಯಪ್ರವೇಶಿಸಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಈ ಎರಡು ತಂಡದ ಆಟಗಾರರ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Sat, 20 January 24

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ