ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 76 ರನ್ ಗಳ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ನಿರಾಶೆಗೆ ಕಾರಣವಾಗಿತ್ತು. ಇಂಗ್ಲೆಂಡ್ ಬೌಲರ್‌ಗಳ ಮುಂದೆ, ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್ ಗಳಿಗೆ ಆಲ್ಔಟ್ ಮಾಡಲಾಯಿತು. ಇದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಉತ್ತಮವಾಗಿ ಆಡಿದರು. ಈ ಸೋಲಿನಿಂದ ಭಾರತದ ನಾಯಕ ವಿರಾಟ್ ಕೊಹ್ಲಿ ನಿರಾಶೆಗೊಂಡರು. ಆದರೆ ಕೆಲವು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 36 ರನ್ ಗಳಿಗೆ ಆಲೌಟಾಗಿತ್ತು ಆದರೆ ನಂತರ ಮರಳಿ ಬಂದು ಇತಿಹಾಸ ಸೃಷ್ಟಿಸಿತು ಎಂಬುದನ್ನು ನಾವಿಲ್ಲಿ ನೆನೆಯಬೇಕಿದೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿಯಿದ್ದು, ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಿದೆ.
ಪಂದ್ಯದ ನಂತರ, ಕೊಹ್ಲಿ ಮಾತನಾಡಿ, ಮಧ್ಯಮ ಕ್ರಮಾಂಕದ ಡೆಪ್ತ್ ಚರ್ಚೆಯ ವಿಷಯವಾಗಿದೆ. ಅಗ್ರ ಕ್ರಮಾಂಕವು ಕೆಳ ಮಧ್ಯಮ ಕ್ರಮಾಂಕಕ್ಕೆ ಉತ್ತಮ ರನ್ ಮಾಡಲು ಸಾಕಷ್ಟು ರನ್ ನೀಡಬೇಕು. ಮೊದಲ ಎರಡು ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಈ ಪಂದ್ಯದಲ್ಲಿ ಕೊಂಚ ವಿಫಲವಾಗಿದ್ದೇವೆ. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯುತ್ತೇವೆ ಎಂದರು.
ಟಾಸ್ ಬಗ್ಗೆ ಈ ವಿಷಯ ಹೇಳಿದರು
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡವು 78 ರನ್ ಗಳಿಗೆ ಆಲೌಟಾದಾಗ, ಅವರ ನಿರ್ಧಾರವನ್ನು ಸಾಕಷ್ಟು ಟೀಕಿಸಲಾಯಿತು. ಈ ಬಗ್ಗೆ ಕೊಹ್ಲಿ ಈಗ ಹೇಳಿದ್ದು, ಈ ಬಗ್ಗೆ ನಿರಾಶೆಗೊಂಡಿಲ್ಲ. ಇಲ್ಲ, ಟಾಸ್ ನಿರ್ಧಾರದಿಂದ ನಾನು ನಿರಾಶೆಗೊಂಡಿಲ್ಲ. ಪಿಚ್ ಬ್ಯಾಟಿಂಗ್‌ಗೆ ಚೆನ್ನಾಗಿ ಕಾಣುತ್ತಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ ತುಂಬಾ ಭಿನ್ನವಾಗಿತ್ತು ಏಕೆಂದರೆ ನಾವು ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ ಎಂದಿದ್ದಾರೆ.
ಮುಂದಿನ ಟೆಸ್ಟ್ ಬಗ್ಗೆ ಹೇಳಿದ್ದಿದು
ಸರಣಿಯ ನಾಲ್ಕನೇ ಪಂದ್ಯವು ಓವಲ್ ಮೈದಾನದಲ್ಲಿ ನಡೆಯಲಿದೆ ಮತ್ತು ಈ ಪಂದ್ಯದಲ್ಲಿ ತಂಡದ ಆಯ್ಕೆಯ ಬಗ್ಗೆ ಕೊಹ್ಲಿಯನ್ನು ಕೇಳಿದಾಗ, ಪರಿಸ್ಥಿತಿಯನ್ನು ನೋಡಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು. ಓವಲ್‌ನಲ್ಲಿ, ಪರಿಸ್ಥಿತಿಗಳು ಮತ್ತು ಪಿಚ್‌ಗೆ ಅನುಗುಣವಾಗಿ ನಾವು ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲು ನಿರ್ಧರಿಸುತ್ತೇವೆ. ನೀವು ಇಲ್ಲಿನ ಹವಾಮಾನವನ್ನು ಊಹಿಸಲು ಸಾಧ್ಯವಿಲ್ಲ. ನೀವು ಇಬ್ಬರು ಸ್ಪಿನ್ನರ್‌ಗಳನ್ನು ಹೊಂದಿದ್ದರೆ, ನೀವು ಕೇವಲ ಮೂರು ವೇಗದ ಬೌಲರ್‌ಗಳೊಂದಿಗೆ ಹೋಗಬೇಕು. ಇಂಗ್ಲೆಂಡ್‌ನಲ್ಲಿರುವ ಆ ನಾಲ್ಕನೇ ವೇಗದ ಬೌಲರ್ ಆಟವನ್ನು ಬದಲಾಯಿಸಬಹುದು ಎಂದರು.